QUOTES ON #ಮೊಳಕೆ

#ಮೊಳಕೆ quotes

Trending | Latest
10 MAR 2021 AT 8:35

ಹಸಿದಿಹ ಮನಸ್ಸಿಗೆ ಕೇಡನು ಬಡಿಸುವ
ಸಾವಿರ ಜನರು ನಮ್ಮಲ್ಲಿ
ಒಳಿತಿನ ಸಿಹಿಯನು ಹರಡುವ ಜನರನು
ಕೊಲ್ಲುವ ಜನರು ನಮ್ಮಲ್ಲಿ

ಕೇಡಿದೆ ಜಗದಲಿ ನರನಿಗೆ ತಿಳಿದಿದೆ
ಒಳಿತಿನ ಜನರಿಗೋ ಬರವಿಲ್ಲ
ಕೆಡುಕಿನ ನಾಟ್ಯದ ಅಬ್ಬರ ಎಲ್ಲೆಡೆ
ಒಳಿತನು ಹರಡುವ ಬಲವಿಲ್ಲ

ಒಳಿತಿನ ತೇವವು ಮನದಲಿ ಅಡಗಿದೆ
ಬನ್ನಿರಿ ಮೊಳಕೆಯ ಬಿತ್ತೋಣ
ಕೇಡಿನ ಕಳೆಯನು ಕೀಳುತ ಹೆದರದೆ
ಸತ್ಯದ ಬಳಕೆಯ ಕಲಿಸೋಣ

-


23 AUG 2021 AT 22:30

ನಿನ್ನ ನೆನಪುಗಳ ಹೊದಿಕೆಯ
ಕಾವಿಗೆ ಬಯಕೆಗಳೆಲ್ಲ ಮೊಳಕೆಯಾಗಿ
ಚಿಗುರೊಡೆದು ಆಸೆಯೊಂದು ಮೂಡಿದೆ,
ನಿನ್ನ ಮುತ್ತಿನ ಹನಿಗಳ ಸ್ಪರ್ಶಕೆ
ದಿನವಿಡೀ ತನುವೆಲ್ಲ ಕಾದಿದೆ.








-


3 JUL 2020 AT 22:49

ನಾನು ಬಿತ್ತಿದ ಅಕ್ಷರಗಳು
ಮೊಳೆತು ಮರವಾಗಬೇಕಿತ್ತು..
ಕರೊನ ಕಾರಣದಿಂದ
ಎಲ್ಲವೂ ಹಾಳಾಯ್ತು..!
ನಾನೀಗ ಯಾರಲ್ಲಿ ವಿಮೆ ಕೇಳಲಿ😔😔

-


22 JUN 2020 AT 20:38

ಚಿತ್ತದ
ತುಂಬೆಲ್ಲಾ
ನೀನು
ಬಿತ್ತಿ
ಹೋದ
ನೆನಪುಗಳು
ಮೊಳಕೆಯೊಡೆದಿವೆ!

-



#ಜೀವನ

ಮೊಳಕೆ ಸಸಿಯಾಗಿ,ಗಿಡವಾಗಿ,
ಹೆಮ್ಮರವಾಗಬೇಕೆಂಬ
ಹೆಬ್ಬಯಕೆ ಬೀಜದಲ್ಲೇ ಇರದಿದ್ದರೆ,
ಅದಕ್ಕೆ ಪ್ರೋತ್ಸಾಹದ ನೀರನ್ನು
ಎಷ್ಟೇ ಎರೆದರೂ ವ್ಯರ್ಥ..!!

-



ಮೊಳಕೆ ಕಾಳುಗಳು ಒಳ್ಳೆಯದಂತೆ ಆರೋಗ್ಯಕ್ಕೆ
ಚಿಗುರಲು ಬಿಡದೆ ನನ್ನ ತಿನ್ನುವ ಬಯಕೆ ಇವರಿಗೆ

-