ನಿನ್ನೊಳಗಿನ ನಾ   (ನೀನಾ)
17 Followers · 6 Following

read more
Joined 23 December 2019


read more
Joined 23 December 2019

ಪ್ರೀತಿಯ ಕೊಂದು. ಜಾತಿಯ ಕೋಟೆಯ ಕಟ್ಟಿ.
ಗೌಡ,ಶೈವ, ಶೆಟ್ಟಿ.. ಎಂಬಿತ್ಯಾದಿ ಹೆಸರುಗಳನಿಟ್ಟು,
ಎಲ್ಲೋ ನಡೆದ ಮರ್ಯಾದಾ ಹತ್ಯೆಗೆ ಮರುಗುವ ಮೂಡರು ಇವರು..


-



ನೀನೇ ಸಾಕೆಂದು ಬೆಳೆಸಿದ ಸಂಬಂಧವಲ್ಲ,
ನೀನೇ ಬೇಕೆಂದು ಹಠ ಹಿಡಿದು ಪಡೆದ ಅನುಬಂಧ.
ಜೀವನದಿ ಬಹಳ ಏರಿಳಿತಗಳ ಕಂಡೆ ನಾನು,
ಪ್ರತಿ ಹಂತದಲು ಜೊತೆನಿಂತು ಧೈರ್ಯ ತುಂಬಿದೆ ನೀನು.
ನಮ್ಮ ಮಕ್ಕಳಿಗೆ ಪ್ರೀತಿಯ ತಾಯಾದೆ,
ಯಾವ ಕಷ್ಟವೆ ತೋರಿಸದೆ ಅವರನ್ನು ಬೆಳೆಸಿದೆ .

ನಿನಗಾದರೆ ತೊಂದರೆ ನಾ ಹೇಗೆ ಸಹಿಸುವೆ?
ದಿಕ್ಕೇ ತೋಚದೆ ಕಣ್ಣನಿಯಲ್ಲಿ ನಿನ್ನೆಸರೇ ಗೀಚುವೆ.
ನನ್ನುಸಿರಿರುವರೆಗು ಜೊತೆಗಿರು ನೀನು.
ನನ್ನುಸಿರೆ ನೀನೆಂದು ಹೇಳುವೆ ನಾನು.

-



ನಿನ್ನನ್ನೇ ಹುಡುಕುವ ಕಂಗಳಿಗೆ
ನೀ ಇಲ್ಲದಿರಲು ಕತ್ತಲು ಆವರಿಸಿದೆ..
ನಿನ್ನನ್ನೇ ಬಯಸುವ ಈ ಹೃದಯಕೆ
ನೀ ಬಾರದಿರಲು ಎದೆ ಬಡಿತ ನಿಂತಂತಾಗಿದೆ..

-



ತಪ್ಪದೇ ಪಾಲಿಸುತಿಹೆ ನಿನ್ನೆಲ್ಲಾ ಆಜ್ಞೆಗಳ
ನಿನ್ನಿಂದಲೇ ಮುರಿದಿರುವೆ ನನ್ನೆಲ್ಲ ಪ್ರತಿಜ್ಞೆಗಳ
ಬಂಧವಿದು ಮೀರಿಸುತ್ತಿದೆ ಎಲ್ಲ ಸಂಬಂಧಗಳ
ನಮ್ಮಂತಿರುವರು ಜಗದಿ ಅತಿ ವಿರಳ...

-



ನನ್ನೀ ಜೀವನವಿದು ಎತ್ತೆತ್ತ ಸಾಗಿಹುದು
ಹಿಡಿದಿರುವ ದಾರಿಯಿದು ಎಲ್ಲಿ ಸೇರುವುದು
ಜೀವನದೀ ಸಂತೆಯಲಿ ಯಾರ ಆಗಮನ
ಯಾಕೆ ಮಾಡುತಿಯೆನು ಸುಮ್ಮನೆ ಕಾಲಹರಣ
ಜೀವನ ಕಲಿಸಿದ ಪಾಠಗಳನು ಎಲ್ಲಿ ಮರೆತೆನು
ಎಲ್ಲ ಪರೀಕ್ಷೆಗಳಲ್ಲಿಂದು ಅನುತ್ತೀರ್ಣನಾದೆನು
ಕಲಿಯ ಬೇಕಿದೆಯೀಗ ಮತ್ತದೇ ಪಾಠ
ಕಲಿಯದಿದ್ದರೆ ಮುಗಿಯದು ಜೀವನದ ಆಟ
ಬಣ್ಣ ಬಣ್ಣದ ಆಟವ ಆಡಿದವರು ನೀವು
ಸುಮ್ಮನೇ ನಿಂತರು ನನಗಾಯಿತು ನೋವು
ಜೀವನದಿ ಅತ್ಯುನ್ನತವಾದ ಗುರಿಗಳು ನನದು
ಅದನ್ನರಿಯದೆ ಮನವು ಚಂಚಲವಾಗಿಹುದು
ಆಡದಿರಿ ಇನ್ನು ನನ್ನೊಡನೆ ಚಿಲ್ಲರೆಯ ಆಟ
ಕಲಿಯಬೇಕಿದೆ ನಾನು ಜೀವನದ ಪಾಠ
ಘೋಷಿಸುತಿಯೆ ನಿಮ್ಮೆಲ್ಲ ಕದನಗಳಿಗೆ ವಿರಾಮ
ತಿಳಿಯಬೇಕಿದೆ ಜೀವನದ ಬೇರೊಂದು ಆಯಾಮ
ಜೀವನದ ಯುದ್ಧವಿದು ಎದುರಾಳಿಯೇ ಬೇಕಿಲ್ಲ
ಮಾಡಲು ಅಂತರಂಗದಿ ಯುದ್ಧ ಜಗವ ಜಯಿಸಬಹುದಲ್ಲ

-



ಹುಟ್ಟುಸಾವಿನ ನಡುವೆ ಗೀಚುತಿಹ ಕಥೆಯಿದು
ನೋವುನಲಿವುಗಳ ಅಧ್ಯಾಯವನ್ನೊಳಗೊಂಡಿಹುದು
ಎಲ್ಲ ಪಾತ್ರಗಳ ಮುಗಿಸಿ ಅಂತಿಮ ಸಾಲುಗಳ ಬರೆಯುತಿರಲು
ಬಂದೊಡೆಯಿತು ಬರಸಿಡಿಲು ಬರೆಯುವುದ ನಿಲ್ಲಿಸಿತು ಬೆರಳು
ಅಂತಿಮ ಸಾಲುಗಳಿಲ್ಲದ ಈ ಕಥೆ ಓದುಗರಲ್ಲಿ ಕಾಡುವುದು ವ್ಯತೆ

-



ಎಲ್ಲರೂ ಓಡಿ ಬರುವವರೆಂದು ಜಾರಿ ಬಿದ್ದೆ
ಯಾರು ಬರದಿದ್ದನ್ನು ನೋಡಿ ಮೆಲ್ಲಗೆ ಎದ್ದೆ.

-



ಎನಿತು ಪ್ರೀತಿಯ ಹಂಚಿದಿರಿ ನೀವ್ ಜಗಕೆ!
ತೋರಿದ ಪ್ರೀತಿಯದೇನ್ ನಾಯಿಬೆಕ್ಕುಹಸುವಿಗೆ!
ಹುಡುಕಿ ಹುತ್ತವನು ಹಾಲನ್ನೆರೆದಿರಿ ವಿಷನಾಗರಕ್ಕೆ,
ಬಿಟ್ಟಿರೇನ್ ನೀವು ಚೆಲ್ಲಿದ ಸಿಹಿ ತಿನ್ನಬಂದ ಇರುವೆಯ?
ಪೊರಕೆಯಿಂದೊಡೆದು ಗುಡಿಸಿ ಎತ್ತಿಹಾಕಿದಿರದನ್ನಾಚೆಗೆ,
ಏನೆಂದು ಬಣ್ಣಿಸಲಿ ನಿಮ್ಮೀ ಪ್ರಾಣಿ ಪ್ರೀತಿಯ ಧ್ವಂದ್ವ ನೀತಿಯ?
ಇತರ ಜೀವಿಗಳ ಬದುಕ ನಿರ್ಧರಿಸುವ ಬ್ರಹ್ಮನೆಂದೋ?
ತನ್ನಿಷ್ಟದಂತೆ ಬದುಕಿ ಬೀಗುತ್ತಿರುವ ಬ್ರಹ್ಮರಾಕ್ಷಸನೆಂದೋ?

-



ಮಳೆ ನಿಂತರೂ ಮರದಡಯಲಿ ತೊಟ್ಟಿಕ್ಕುವ ಮಳೆ ಹನಿಗಳಂತೆ
ನೀ ತೊರೆದರೂ ಇರಲಿಬಿಡು ನಿನನೆನಪು ಎನ್ನೆದೆಯೊಳಗೆ ಮಾಸದಂತೆ.

-



ಬೆಳಗೆದ್ದು ನಾ ಯಾರ್ಯಾರ ಶಪಿಸಲಿ?
ಎಡಬಿಡದೆ ಕೊರೆವ ಈ ಚಳಿಯನ್ನೋ?
ಬೆಚ್ಚಗಿನ ಬಟ್ಟೆ ಕೊಡಿಸದ ಅಪ್ಪನನ್ನೋ?
ಚಳಿಯಲ್ಲೂ ನನ್ನೆಬ್ಬಿಸಿದ ಅಮ್ಮನನ್ನೋ?
ಏಳುವ ಅನಿವಾರ್ಯತೆ ತಂದ ಬಡತನವನ್ನೋ?

ಯಾರ ನಾ ಯಾಕೆ ಶಪಿಸಲಿ ನನ್ನ ಕರ್ಮಕ್ಕೆ,
ತಲೆಬಾಗಿ ನಮಿಸುವೆನು ಜಗದ ನಿಯಮಕ್ಕೆ,
ಬಿಸಿಲು ಚಳಿ ಮಳೆ ಯಾವ ಲೆಕ್ಕ ದುಡಿವ ಜನಕೆ,
ಜಯವು ಸಿಗಲಿ ಎಂದಿಗೂ ದುಡಿಮೆಯ ಧರ್ಮಕ್ಕೆ.

-


Fetching ನಿನ್ನೊಳಗಿನ ನಾ Quotes