Shankar Harati   (ಶಂಕರ ಹರಟಿ)
350 Followers · 658 Following

ಸಾಹಿತ್ಯ ನನ್ನ ಜೀವಾಳ
ಕನ್ನಡಕ್ಕಾಗಿ ದುಡಿವೆ ಮಡಿವೆ
ಕನ್ನಡವೇ ನನ್ನ ಹೆಮ್ಮೆ
Joined 8 July 2018


ಸಾಹಿತ್ಯ ನನ್ನ ಜೀವಾಳ
ಕನ್ನಡಕ್ಕಾಗಿ ದುಡಿವೆ ಮಡಿವೆ
ಕನ್ನಡವೇ ನನ್ನ ಹೆಮ್ಮೆ
Joined 8 July 2018
12 DEC 2024 AT 14:02

ಪುಟ್ಟ ಕಂದ ಆಡಲೆಂದು 
ನಾಯಿ ಮರಿ ತಂದೆನು
ರೊಟ್ಟಿ ಜೊತೆಗೆ ನೀಡಲೆಂದು 
ಬೆಣ್ಣೆ ಬನ್ನು ತಂದೆನು

ಯಾವ ಮಾಯೆಯಿಂದಲೇನೋ
ಮಾಯವಾಗ ತೊಡಗಿತು
ಮನೆಯ ಮೂಲೆ ಮೂಲೆ ಬಿಡದೆ 
ಹುಡುಕಬೇಕಾಯಿತು

ಮರುದಿನವೇ ಪುಟ್ಟನದಕೆ 
ದಾರಿಯೊಂದ ಹುಡುಕಿದ
ಕೊರಳಿಗೊಂದು ಗೆಜ್ಜೆ ಕಟ್ಟಿ 
ತಿರುಗಲೆಂದು ಅಟ್ಟಿದ

ಮೂಲೆ ಸೇರಿ ಕುಳಿತ ಮರಿಯ 
ಕರೆಯಲೇನು ಮಾಡುವ
ನಮ್ಮ ಹಾಗೆ ಅದಕು ಒಂದು 
ನಾಮಕರಣ ಮಾಡುವ

ಯಾವ ಹೆಸರು ಇಡುವುದೆಂದು 
ಜೋರು ಚರ್ಚೆ ನಡೆಯಿತು
ಕರಿಯ ಬಾರು ಮೈಯಲಿರಲು 
ಬರಗನೆಂದು ಕರೆಯಿತು

ನಾಯಿ ಮರಿಗೂ ಬರಗನೆಂಬ 
ಹೆಸರು ಇಷ್ಟವಾಯಿತು
ಕರೆದೊಡನೆಯೆ ಓಡಿ ಬಂದು 
ಆಟವಾಡ ತೊಡಗಿತು

-


5 DEC 2024 AT 19:00

ಕಾಸಿನಾಸೆ/ಹೇಸಿ ಜನ್ಮ
ಭಾಷೆ ಹೀನವಾಗಿದೆ:.
ತಾಸಿಗೊಂದು/ವೇಷತೊಟ್ಟು
ನಾಶದೆಡೆಗೆ ನಡೆದಿದೆ::.

ಪೂಸಿ ಹೊಡೆದು/ಪಾಶ ಹೊಸೆದು
ಕೋಶ ಲೂಟಿ ಮಾಡಿದೆ:.
ವೇಷ ಕಳಚಿ/ಮೀಸೆ ಮುಗುಚಿ
ಶೇಷವಾಗಿ ಹೋಗುವೆ::.

ನೂರು ಜನ್ಮ/ನೂರು ಪಾಪ
ನೂರು ವಿಧದ ನರಕವು:.
ಪಾರುಗೊಳಲು/ದಾರಿಯುಂಟು
ಸೇರು ಶರಣು ಬಳಗವ::.

-


2 OCT 2024 AT 21:35

*ಶಾಯರಿ*

ಸಂಜಿಮುಂದ
ನನ್ನವಳ ನೆನಪು
ಮಂದನ ಗಾಳಿ ಬೀಸಿಧಾಂಗ।
ಪದ ಕಟ್ಟಿ ನಾ
ಹೇಳೇನು ಅಂದ್ರ
ದುಂಬಿ ಹೂ ಮೂಸಿಧಾಂಗ॥

-


14 AUG 2024 AT 22:31

ನನ್ನ ತೋಳುಗಳೀಗ
ನಿನ್ನ ಖಾಯಂ ವಿಳಾಸ
ನಿನ್ನೆಲ್ಲ ದುಗುಡಗಳ
ಸುರಿದುಬಿಡು ಅಲ್ಲೇ

ಹಣೆಗೆನ್ನ ಅಧರಗಳ
ಒಲವಿನೊತ್ತು
ಸರಸ ಸಲ್ಲಾಪಗಳು
ಸುರಿವ ಮುತ್ತು...

ಬಂದಾವು ಹೋದಾವು
ಸಿಟ್ಟು ಸೆಡವುಗಳು
ನೊಂದ ಮನವು ನಂದು
ಮತ್ತದುವೆ ನಿಂದೂ...

ಬಾರದು ನನ್ನೊಲವಿನಲಿ
ಎಂದೂ ಕುಂದು
ಬಂದಿತಾದರೆ ಬದುಕೆನು
ಉಸಿರು ಕೊಂದು...

-


29 JUL 2024 AT 11:09

ದೂರ....
ದೂರವೆಂದರೆ ದೂರ
ಉಭಯ ತೀರ:.
ಸರಳ ಮಾತಲಿ ಹೇಳೆ
ಕ್ಷೀರ-ಕ್ಷಾರ::.

-


9 JUN 2024 AT 12:39

ಹೆಂಡತಿ ಅಪರೂಪಕ್ಕೆ
ಇಡ್ಲಿ ಮಾಡಿದರೆ
ತಿನ್ನಲೇಬೇಕು...

ಆದರೂ ನಾ ತುಸು
ಕಡಿಮೆ ತಿನ್ನುತ್ತೇನೆ;
ಯಾಕೆಂದರೆ....
ಹೊಟ್ಟೆಯ ಜೊತೆಗೆ
ಹಲ್ಲಿನ ಆರೋಗ್ಯವೂ ಮುಖ್ಯ

-


9 JUN 2024 AT 12:27

ನನ್ನ ಹೆಂಡತಿ
ಇಡ್ಲಿ ಮಾಡಿದಾಗ
ತುಸು ಕಡಿಮೆ ತಿನ್ನುತ್ತೇನೆ;
ಕಾರಣ ಹೊಟ್ಟೆಯ ಜೊತೆಗೆ
ಹಲ್ಲಿನ ಆರೋಗ್ಯವೂ ಮುಖ್ಯ

-


24 MAY 2024 AT 22:02

ಎನ್ನವಳೆಡೆಗಿನ
ಒಲವೆನಗೆ
ನಲುಮೆ
ರೂಪದಿ ಬಂದು
ಬದುಕು ಬದಲಾಯ್ತು

ಧನ್ಯವಾದ ಹೇಳಿ
ಸಣ್ಣವನಾಗಲೇ?
ಧನ್ಯಭಾವ ತಾಳಿ
ಸುಮ್ಮನಾಗಲೇ?

-


1 MAR 2024 AT 19:24

ನನ್ನ ಹೆಂಡತಿ ಹೇಳುತ್ತಾಳೆ
ಇತ್ತೀಚೆಗೆ ನೀನು ಹೆಚ್ಚಾಗಿ
ಹೊಟ್ಟೆ ಬೆಳೆಸಿದ್ದೀಯೆಂದು..:
ಅವಳಿಗೆ ನಾನು ಹೇಳುತ್ತೇನೆ:.
ನನ್ನ ಮಗಳು ನಲುಮೆ
ಹೊಟ್ಟೆಮೇಲೆ ಪಾದವೂರಿ
ಕುಣಿದು ಕುಪ್ಪಳಿಸುವಾಗ
ಪಾದಕ್ಕೆ ನೋವಾಗಬಾರದಲ್ಲ..
ಎಂಬುದವಳಿಗೆ ಪಾಪ ಗೊತ್ತಿಲ್ಲ...

-


29 FEB 2024 AT 23:11

ರಂಗಾದ ತುಟಿ ಮೇಲೆ
ಮತ್ತೆ ಕ್ಷೀರಗೆನ್ನೆಯಲಿ
ಅಡಗಿರುವ ಸಿಹಿ ಮಧುವ
ಔಷ್ಠಾಂಗುಲಿಯ ಬಳಸಿ
ಕೆದಕಿಬಿಡಲೇ? ಇಲ್ಲ
ದಂತ ಪಂಕ್ತಿ ಕರೆಯಲೇ??

-


Fetching Shankar Harati Quotes