(Read Caption)👇🏾👇🏾👇🏾👇🏾👇🏾
-
ಕಾವ್ಯದೀಕ್ಷೆ ತಳೆದು ಸತ್ವಭರಿತ ಕಾವ್ಯಕೃಷಿ ಗೈದ ಸಾಧನಕೇರಿಯ ಮಗ
ಗರಿಯೊಡನೆ ನಾದಲೀಲೆ ರಚಿಸಿ ಉಯ್ಯಾಲೆ ಜೀಕಿಸಿದ ಈ ಕಾವ್ಯರಂಗ
ಮೇಘದೂತದೊಂದಿಗೆ ನಾಡಿನ ಜನತೆಗೆ ಸಂದೇಶ ಸಾರಿದ ಕವಿಪುಂಗ
ನಾಕುತಂತಿ ಮೀಟಿ ಜ್ಞಾನಪೀಠ ಗರಿ ಮುಡಿಗೇರಿಸಿದ ಕವಿಗಾರುಡಿಗ.!-
ಕನ್ನಡವು ,ಭಾರತವು ಜಗವೆಲ್ಲವೂ ಒಂದೇ ಅಂದು ಸಾರಿದ ವರಕವಿ
ರಸವೇ ಜನನ ವಿರಸವೇ ಮರಣ ಸಮರಸವೇ ಜೀವನವೆಂದು ತಿಳಿಸಿದ ಶ್ರೇಷ್ಠ ಕವಿ ಬೇಂದ್ರೆ
ನಾನು ನೀನು ಆನು ತಾನು ನಾಕೆ ನಾಕು ನಾಕುತಂತಿಯ ಮೂಲಕ ಕರುನಾಡಿಗೆ ಜ್ಞಾನ ಪೀಠ ತಂದು ಕೊಟ್ಟ ಗಾರುಡಿಗ-
ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ
ಬೆಳೆದ ಫಲ ಮಾತ್ರ ಜನರಿಗೆ ಕಾಣಿಸಲಿ..!
ದ.ರಾ.ಬೇಂದ್ರೆ-
ಬಡತನದಲ್ಲಿ ಬೆಂದು
ಸಾವಿಲ್ಲದ ಸಾಹಿತ್ಯವನು ಕಟ್ಟಿ
ಕುಟ್ಟಿ-ಕುಟ್ಟಿ ಸಾಹಿತ್ಯದ
ರಸದೌತಣವ ಊಣಬಡಿಸಿದ ಕವಿ
ಬೇಂದ್ರೆ ಅಜ್ಜನವರಿಗೆ
ಜನ್ಮದಿನದ ಶುಭಾಶಯಗಳು.💐💐
- ಸುರೇಶ.ಆರ್.-
ಕನ್ನಡದ
ಅಂತರಗಂಗೆಯನ್ನು
ಕೆದಕಿ ನುಡಿಕಟ್ಟಿ ,
ಪದಕಟ್ಟಿ ಕುಣಿಸಿ
ಓದುಗರ ಮನವನ್ನು
ತಣಿಸಿ ಉಣಿಸಿದ ಕವಿ
ದ.ರಾ.ಬೇಂದ್ರೆ.
ಸಾಧನಕೇರಿಯ ಸಂತ
ಕನ್ನಡದ ವರ ಕವಿ
ಬೇಂದ್ರೆಯವರ
125ನೇ ಜನ್ಮದಿನದ
ಶುಭಾಶಯಗಳು.💐💐💐
- ಸುರೇಶ.ಆರ್.
-
ಗೆಲ್ಲುತ್ತೇನೆ ಎಂದು ಬಂದವನು
ಸೋಲುವುದಕ್ಕೂ ಸಿದ್ಧನಿರಬೇಕು.
_ದ.ರಾ.ಬೇಂದ್ರೆ-
" ಬೇಂದ್ರೆ" ಸಾಹಿತ್ಯ ಲೋಕದ ಕವಿ ಬೇರು...
ಯಾರಿಗೂ ಹೇಳೋಣು ಬ್ಯಾಡ... ಎಂದು ಪ್ರಾಯದ ಹೃದಯಗಳ ಹಾರುಗುದರಿಯ ಬೆನ್ನೇರಿಸಿ ಕವಿತೆಯಲ್ಲಿ ಸುತ್ತಿಸಿದ ವರಕವಿ.
ಶಬ್ದಗಳ ಕುಣಿಸುತ, ಮಲ್ಲಿಗೆಯ ಘಮವ ಹರಡುತ ನಾಡಿಗೆ ಶ್ರಾವಣವ ಕರೆತಂದ ಶಬ್ದ ಗಾರುಡಿಗ.
ಎಲ್ಲರಿದೆಯಲ್ಲಿ "ನಾಕುತಂತಿಯ" ಮೀಟಿದ ಅಂಬಿಕಾತನಯದತ್ತ...
ಜನ್ಮದಿನದ ಶುಭಾಶಯಗಳು 🙏— % &-
ಅಂಬಿಕಾತನಯದತ್ತ
ಕನ್ನಡದ ಕವಿಯೋರ್ವನ ಕುರಿತು ತಿಳಿಯುವೆವು
ಇಂದು ಅವರ ಕವನದ ಸಾರವನು ಅರಿಯುವೆವು
ರಾಮಚಂದ್ರ ಹಾಗೂ ಅಂಬವ್ವರ ಸುಪುತ್ರರು
ವೈದಿಕ ವೃತ್ತಿಯ ಠೊಸರ ಮನೆತನದವರು
ಅಂಬಿಕಾತನಯದತ್ತ ಕಾವ್ಯನಾಮದಿಂದ ವರಕವಿಯಾದವರು
ಅಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯದ ಮಜಲುಗಳನು ಅರಿತವರು
ಸಾಹಿತ್ಯದಲಿ 'ಬೆಳಗು' ಕವನದಿಂದಾರಂಭವಾಗಿ
ಕೃಷ್ಣಕುಮಾರಿಯಾ ಮೊದಲ ಕವನಸಂಕಲನದಿಂದಾರಂಭವಾಗಿ
ನಾದಲೀಲೆ,ಮೆಘದೂತರ ಹಾಡುಪಾಡಗಿ
ಸೂರ್ಯಪಾನದಿಂದ ಜೀವಲಹರಿಯ ಅರಳು ಮರುಳಾಗಿ
ಮುಗಿಲಮಲ್ಲಿಗೆ ನಾಕುತಂತಿಯ ಪ್ರತಿಬಿಂಬಗಳಾಗಿ
ಸಾಹಿತ್ಯವಿಮರ್ಶೆಯ ಜೊತೆಗೆ ಸಾಯೊ ಆಟ ನಾಟಕದ ಸೃಷ್ಟಿಕರ್ತರಿವರು
ಮೂಡಲ ಮನೆಯ ಮುತ್ತಿನ ನೀರಿನ ಎನುತ
ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ ಎನುತಾ
ನಿ ಹಿಂಗ ನೋಡಬ್ಯಾಡ ನನ್ನ ಎಂದು ಭಾವಕಲ್ಪನೆಯಲಿ ಮಿಂದು
ಕುಣಿಯೋಣು ಬಾರಾ,ಇಳಿದುಬಾತಾಯಿಇಳಿದುಬಾ, ಒಲವೆನಮ್ಮಬದುಕು
ಎಂಬ ಕವನದ ಉತ್ಸಾಹದ ಚಿಲುಮೆಯನ್ನುಕ್ಕಿಸಿ
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ
ಎಂದ ಧೀಮಂತ ಕವಿ ಇವರು ನಮ್ಮ ಬೇಂದ್ರೆಯವರು
-