ಶುಭ ಮುಂಜಾನೆಯೊಂದಿಗಿನ ನಿಮ್ಮ ಸಂದೇಶ
ಮೌನದ ಬರಹಗಳಲಿ ಮಿಂದು
ಉಪಚಾರದ ಸ್ಥಿತಿಯ ಕಾಯ್ದುಕೊಂಡು
ನಂಬಿಕೆಯೊಂದಿಗಿನ ಸಂವಾದದ ಭಾವನೆಗಳ ಹಂಚಿ
ನಿಸ್ವಾರ್ಥ
ನಿಸ್ಸಂದೇಹ
ನಿಷ್ಕಲ್ಮಶದ
ನಿಮ್ಮ ಈ ನಗುವಿಗೆ
ನಮ್ಮ ಈ ಸ್ನೇಹಕೆ
ವಿಶ್ವಾಸದ ಸಹಿ ಇರಲಿ
ಸಿಹಿ -ಕಹಿಯ ಜಂಜಾಟದಲಿ
ಶಾಶ್ವತವಾಗಿರಲಿ ನಮ್ಮ ಈ ಸ್ನೇಹ.......
-
ಸ್ನಾತಕೋತ್ತರ ಪದವಿದರ (MA IN KANNADA)
B.ED IN 2YEARS COURSE COMPLITED
ಹಂಪೆಯನೂಮ್ಮೆ ನೋಡ ಬಾರ
ವೈಭವವೋ ವೈಭವ
ಹಂಪಿಯಲೊಂದು ವೈಭವ.....
ಇತಿಹಾಸ ಪುಟದೊಳಿರುವ ಸಾಂಸ್ಕೃತಿಕ ನಗರಿಯಂತೆ
ವಿಜಯನಗರ ಸಾಮ್ರಾಜ್ಯದ ಪ್ರಧಾನ ಪಟ್ಟಣವಾಗಿತ್ತಂತೆ
ಕೃಷ್ಣದೇವರಾಯನ ಹಂಪಿಯು ಸಂಪದ್ಭರಿತವಾಗಿತ್ತಂತೆ
ವಜ್ರ-ವೈಡೂರ್ಯವ ತೂಕದಲಿ ಅಳೆಯುತಿರ್ದರಂತೆ
ನೋಡ ಬಾರ ಆ ನಗರವ ,ಆ ವೈಭವದ ಮಣ್ಣನು.......
ತುಂಗಭದ್ರಾದಡದೋಳು ವಿರೂಪಾಕ್ಷನಿರುವನು
ಭಗವಾನ್ ವಿಷ್ಣುವಿನ ಅವತಾರದಲಿ ನಿಂತ ಲಕ್ಷ್ಮಿನರಸಿಂಹನಿರುವನು
ಹಂಪಿಯ ಸಮೀಪದೊಳು ಅಂಜನಾದ್ರಿ ಬೆಟ್ಟವ ಕಾಣುತಾ
ಕಲ್ಲಿನ ರಥದಲಿ ಚಿತ್ರಕಲೆಗಳ ಸೊಬಗನು ನೋಡುತಾ
ಕಾಣಬಾರ ಹಂಪಿಯನೊಮ್ಮೆ ,ಅದರ ವೈಭೂಗನೊಮ್ಮೆ....
ವಿಶ್ವ ಪರಂಪರೆಯ ತಾಣ ಎಂದೆನಿಸಿಕೊಂಡು
ಕಲ್ಲಿನ ಕೆತ್ತನೆಯಲಿ ಸಪ್ತಸ್ವರನಾದ ಕಂಪಿಸುತ ಸೈ ಎನಿಸಿಕೊಂಡು
ಗತವೈಭವವ ಸಾರುತಿದೆ ಇಂದು ಹಂಪಿ ಉತ್ಸವದಿ
ಅಂದು ನಶಿಸಿತು ಪರಕೀಯರ ಭೂತಗಳ ಮತ್ಸರದಿ
ಇಂದು ನಡೆಯುತಿದೆ ಉತ್ಸವ ಮರೆಸುವ ತಾತ್ಸರದಿ
ಕಾಣ ಬನ್ನಿ ವಿಜಯನಗರವಾಳಿದ ಸಾಮ್ರಾಜ್ಯವ
ನೋಡ ಬನ್ನಿ ಹಂಪಿಯ ಉತ್ಸವವ..........-
ಏನ್ ಗುರು ಜೀವನ......
ಹೇಳೋರಿಲ್ಲ
ಕೇಳೋರಿಲ್ಲ
ಉದ್ಧಾರ ಆಗೋಕು ಆಗ್ತಿಲ್ಲಾ
ಹಾಳಾಗೋಕು ಆಗ್ತಿಲ್ಲಾ
ಖುಷಿಯಾಗಿ ಇರೋ ಟೈಂ ಅಲ್ಲಿ ಭಯ ಆಗುತ್ತೆ
ಭಯ ಆದಾಗ ನಮಗೆ ನಾವೇ ಧೈರ್ಯ ಹೇಳ್ಕೊಬೇಕು ಅನ್ಸುತ್ತೆ
ಏನ್ ಗುರು ಜೀವನ.....
ಏನ್ ಗುರು ಜನ.....
ಸುಮ್ನಿದ್ರೆ ಯಾವಾಗ ಉದ್ಧಾರ ಆಗೋದು ಅಂತಾರೆ
ಹೇಗೊ ಬದುಕ್ತಿರ್ತಿವಿ ಆಗ ಮದ್ವೆ ಯಾವಾಗ ಅಂತಾರೆ
ಇದರ್ ಮದ್ಯೆ ನಾವೆನ್ ದಬಾಕಿದಿವಿ ಅಂತ ಹೆಣ್ಣ್ ಕೊಡ್ತಾರೆ
ಒಟ್ನಲ್ಲಿ ಗುರು ಮಿಡಲ್ ಕ್ಲಾಸ್ ಲೈಫೇ ವಿಚಿತ್ರ
ಹೇಗ್ ಬದುಕುದ್ರುನು ಕಷ್ಟಾನೇ
ಆದ್ರೆ ನೆಮ್ಮದಿಯಾಗಿ ಬದುಕಬೇಕು ಅನ್ನೋದು ನಮ್ಮ ಆಸೆನೇ
ಏನಾದ್ರು ಆಗ್ಲಿ ಖುಷಿಯಾಗಿ ಇರ್ಬೇಕು ಅನ್ನೋದು ಸತ್ಯನೇ......-
ಸಮಯ & ಮಾತು
ಮನಸ್ಸೊಂದು ಕೇಳಿತು ಸಮಯವಿದೆಯೇ ನಿನಗೆ
ಹಾತೊರೆಯುವುದೊಂದು ಜೀವ ನಿನ ಸಂಭಾಷಣೆಗೆ
ಗರ್ವಪಡಬೇಡ ನಿನ ಸಂಭಾಷಣೆಯ ಕಾಯುವಿಕೆಗೆ
ನಿಷ್ಕಲ್ಮಶ ಹೃದಯಜೀವಗಳು ಬದುಕುವುದು ನಿನಗೆಂದೆ
ಮೀರಿದ ಘಳಿಗೆಗೆ ಮೌಲ್ಯವಿಲ್ಲ
ಆಡದ ಮಾತಿಗೆ ತೂಕವಿಲ್ಲ
ಸಮಯದ ಸಜ್ಜನಿಕೆಗೆ ಸೋತವನಿಲ್ಲ
ಮಾತಿನ ಜಾಗದಲಿ ಮೌನಕೆ ಅರ್ಥವಿರುವುದಿಲ್ಲ
ಕಾಯಕವಿದ್ದರೆ ಸಮಯ ನೀಡಿ ಮಾತಾಡಿಕೊ
ಮನಸಿಲ್ಲದಿದ್ದರೆ ನಿರ್ಧಾರವ ಬದಲಾಯಿಸಿಕೊ
ವೈಮನಸಿದ್ದರೆ ಮನಸ್ಸು ಮುರಿದು ಮಾತಾಡಿಕೊ
ಬದುಕಿನಲಿ ಈ ಕಾಲವು ಕ್ಷಣಿಕ ಬರೆದಿಟ್ಟುಕೊ.......-
ಸಾಲ
ಕೊಟ್ಟು ಸಾಲಗಾರನಾಗಬೇಡ
ಕೇಳಿ ನೀ ನೀಚನಾಗಬೇಡ
ಸಾಲವ ತೀರಿಸುವುದುಂಟೆ
ಬಡ್ಡಿಯ ಕಟ್ಟುವುದುಂಟೆ
ಪಡೆದ ಸಾಲವ ತೀರಿಸಲಾಗದೆ
ಸಂಸಾರವ ಮರೆತು ಮಸಣಸೇರುವುದೇತಕೆ
-
ಮೂಗುತಿ
ಮೂಗುತಿಯ ಹೆಣ್ಣೆ
ನಿನೊಂತರ ಬೆಣ್ಣೆ
ನಿನ ವಯ್ಯಾರದ ನಾಚಿಕೆಗೆ
ಕರಗಿ ನೀರಾಯಿತು ನಿನ ಕೆನ್ನೆ
-
ಆಲಸ್ಯ
ಅತಿನಿದ್ದೆ ಸೋಂಬೇರಿಯಾದಿತು ಮಂಕೆ
ಮಂಕಾದರೆ ಸಾಗದು ಗುರಿಯು ಮುಂದೆ....
ಬೆಳೆಯುವುದು ಬರಿ ನಿನ್ನ ದೇಹದ ಬೊಜ್ಜಿನ ಮಜ್ಜೆ
ಆಲಸ್ಯದ ಕೇಡನ್ನರಿತರೆ ನೀ ಗೆದ್ದೆ
ಮರೆತು ಮುಂದುವರೆದರೆ ನಿ ಕೆಟ್ಟೆ....
ಪಶ್ಚಾತಾಪಪಡಬೇಕಾದಿತು ಮುಂದೆ
ನನ್ನವರ್ಯಾರಿಲ್ಲವೆಂಬ ಚಿಂತೆಗೆ......-
ಬಾಲ್ಯ ವಿವಾಹ
ಅಜ್ಞಾನದ ಕುರುಡುತನಕೆ ಹೆಣ್ಣಿನ ಬಲಿಯಾಯಿತು
ಹೆಣ್ಣೆಂದು ಜರಿಯುವರು ಭೋಗದ ವಸ್ತುವೆಂದು
ಹರಿಯದ ವಯಸ್ಸಿಗೆ ಮದುವೆಯ ಬೇಡಿತೋಡಿಸುವರು
ಓದುವ ಮನಕೆ ಚಟ್ಟವ ಕಟ್ಟುವರು
ಈ ಮೂಢರ ಸಂತೆಯಲಿ ಹೆಣ್ಣಿನ ಬಲಿಪಡೆಯುವರು
ಮನೆಯವರ ಮದುವೆಯ ಚಾಳಿಗೆ
ಶಿರವಬಾಗಿ ಬಾಲ್ಯತನವ ಮರೆಯುವಳು
ಬಾಳುವ ವಯಸಲಿ ಬಿಳಿ ಸೀರೆಯ ತೊಡುವಳು
ಬದುಕಲಿ ಎಲ್ಲವನು ಕಳೆದುಕೊಂಡು
ನರಳುವಳು ಬಾಲ್ಯ ವಿವಾಹದ ಗೋಜಿಗೆ.....-
ಮಹಾದೇವನ ಗಿರಿ
ಅಡವಿಯ ಮಧ್ಯದೊಳಿರುವ ಮಾಯ್ಕರನಿವನು
ಏಪ್ಪತ್ತೆಳೂ ಮಲೆಯ ಒಡೆಯನಿವನು
ಚಿನ್ನದ ತೇರಲಿ ಜಗಮಗಿಸುವ ಮಾದೇವನಿವನು
ಭಕುತರ ಪಾಲಿನ ಆರಾಧ್ಯ ದೈವನಿವನು
ಅಮಾವಾಸ್ಯೆ ಹುಣ್ಣಿಮೆಯಲಿ ಅವನ ದರುಶನಕೆಂದೆ
ನೂರಾರು ಮೈಲಿಗಳಿಂದ ನಡೆದು ಬರುವ ಭಕ್ತರ ಸಾಲಿಗೆ
ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯುವ ಪವಿತ್ರನೆಲೆಯದು
ಮನಃಶಾಂತಿಗೆ ಹಸಿರಿನ ಹೊದಿಕೆಯ ನಿಸರ್ಗಧಾಮವದು
-
ಆನ್ಲೈನ್ ತರಗತಿ
ತರಗತಿಯೊಳಗೆ ಕಲಿತ ಪಾಠಗಳೆಷ್ಟೊ
ಅದರಲಿ ಕಲಿತ ವಿಷಯಗಳೆಷ್ಟೂ....
ಗುರುಗಳ ಮಾತುಗಳೆಷ್ಟೂ
ಅದರಲಿ ಅವರ ಹಾಸ್ಯಗಳೆಷ್ಟೊ
ಸ್ನೇಹಿತರ ಜೊತೆಗೂಡಿ ನಲಿವುದೆಷ್ಟೊ
ಅದರಲಿ ಕಚ್ಚಾಡಿದ ನೆನಪುಗಳೆಷ್ಟೂ
ಕಾಲದ ನಿಯಮವು ಅಂತರ್ಜಾಲದ ಬೆನ್ನೇರಿರುವಾಗ
ಅದರಲಿ ಶೈಕ್ಷಣಿಕರಂಗವು ಮೂಗುತೂರಿಸುತಿದೆ....
"ಆನ್ಲೈನ್ ತರಗತಿ" ಶೀರ್ಷಿಕೆಗೆ ಬಂಡವಾಳ ಹೂಡುತಾ
ಅದರಲಿ ಶಾಲಾಕಲಿಕಾಭಿವೃದ್ದಿ ಅನುಭವಗಳ ಮರೆಸುತಿದೆ.....
ಮೊಬೈಲ್ ಗಳ ಬಳಕೆಗಳು ಹೆಚ್ಚಾಗುತಿರುವಾಗ
ಅದರ ದುರ್ಬಳಕೆಯು ಅಧಿಕವಾಗುತಿದೆ
ಶಿಕ್ಷಣದಲಿ ತರಗತಿಯೊಳಗಿನ ಪಾಠವೆ ಲೇಸು
ಗುರು ಶಿಷ್ಯರ ನಡುವಿನ ನೇರ ಚರ್ಚೆಯೇ ಬೆಸ್ಟು.....-