ಮತ್ತೆ ಹಾರಬೇಕು ಬಾನೆತ್ತರಕ್ಕೆ
ಮತ್ತೆ ಹಾಡಬೇಕು ಮನಸ್ಸಿನತ್ತಿರಕೆ.
☺️...-
" ಬೇಂದ್ರೆ" ಸಾಹಿತ್ಯ ಲೋಕದ ಕವಿ ಬೇರು...
ಯಾರಿಗೂ ಹೇಳೋಣು ಬ್ಯಾಡ... ಎಂದು ಪ್ರಾಯದ ಹೃದಯಗಳ ಹಾರುಗುದರಿಯ ಬೆನ್ನೇರಿಸಿ ಕವಿತೆಯಲ್ಲಿ ಸುತ್ತಿಸಿದ ವರಕವಿ.
ಶಬ್ದಗಳ ಕುಣಿಸುತ, ಮಲ್ಲಿಗೆಯ ಘಮವ ಹರಡುತ ನಾಡಿಗೆ ಶ್ರಾವಣವ ಕರೆತಂದ ಶಬ್ದ ಗಾರುಡಿಗ.
ಎಲ್ಲರಿದೆಯಲ್ಲಿ "ನಾಕುತಂತಿಯ" ಮೀಟಿದ ಅಂಬಿಕಾತನಯದತ್ತ...
ಜನ್ಮದಿನದ ಶುಭಾಶಯಗಳು 🙏— % &-
ಕಡುಗಪ್ಪು ಅಗಸದಿಂದ
ಬಾಚಿರಬೇಕಲ್ಲವೇ
ನಕ್ಷತ್ರಗಳನ್ನು ಅಜ್ಜ,
ನತ್ತಿಗೆ ಮುತ್ತಾಗಿಸಲು.
ಅದಾವ ಅಗಸಾಲಿಗನ
ಹುಡುಕಿರಬೇಕು
ಮುತ್ತ ಜೋಡಿಸಲು,
ಅಮ್ಮನನ್ನು
ಜೋಡಿಯಾಗಿಸಿಕೊಳ್ಳಲು...-
ವಸುಧೆ ಪ್ರಿಯಕರನು ಸೋಕಲು ಹಿಮದಂತೆ
ಸಗ್ಗವಲ್ಲವಿದು ಅವನಿ ಯ ಸಿಹಿಲಜ್ಜೆ ಅಂತೆ...
🤩💫
-
ಕನ್ನಡದ ಭವ್ಯ ಮಸ್ಸುಗಳ ದಿವ್ಯ ಹಬ್ಬ
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು...
💛❤️-
ಮಲ್ಲಿಗೆಯ ಘಮ ಕನ್ನಡ
ಹಲವು ರೂಪಗಳಿರಲಿ, ಸ್ವರೂಪ ಕನ್ನಡ
ನನ್ನೊಳಗಣ ಚೇತನವೇ ಕನ್ನಡ...
💛❤️-
ಮನದ ನೋವು ಕಣ್ಣ ಹನಿಯಾಗಿ ಜಾರಿದೆ🥺
ಸದ್ಗುಣನ ಆತ್ಮಕ್ಕೆ ಶಾಂತಿ ಕೋರಿದೆ...
ಮಣ್ಣ ಮಗ ತಾಯೋಡಲ ಸೇರಿದ
ಜನರ ಗಂಟಲ ಗದ್ಗದವಾಗಿ
ಮತ್ತೆ ಹುಟ್ಟಿಬನ್ನಿ ಕನ್ನಡದ ಮಣ್ಣ ಮಗನಾಗಿ
ಅದೇ ಮುಗ್ದತೆ, ನಗುವಿನೊಂದಿಗೆ ಪುನೀತ ನಾಗಿ... 🙏-