QUOTES ON #ಜವಬ್ದಾರಿ

#ಜವಬ್ದಾರಿ quotes

Trending | Latest

ಅದೆಷ್ಟೋ ಜನರು ಖಾಲಿ ಹೊಟ್ಟೆಲಿ
ಕೆಲಸಕ್ಕೆ ಹೋಗುತ್ತಾರೆ ಗಾಲಿಬ್
ಅವರಿಗೆ ಇರುವ ಜವಾಬ್ದಾರಿಗಳು
ಹಸಿವನ್ನು ಸಾಯಿಸುತ್ತದೆ ಗಾಲಿಬ್..

-



ಸನ್ಮಾನಗಳನು ಬಯಸದಿರು ಮನವೇ
ಅದೊಂದು ಮುಳ್ಳು ಮಿಶ್ರಿತ ಹೂವಿನ ಮಾಲೆ
ಕೊರಳಲ್ಲಿ ಧರಿಸಲು ಆಗದೇ
ಮನಸ್ಸಿಂದ ಕಳಚಿಡಲೂ ಆಗದೇ
ಒದ್ದಾಡದಿರು ಎಲೇ ಮನವೇ..

-



ಅಂದುಕೊಂಡಷ್ಟು ಸುಲಭವಲ್ಲ
ಮನೆಯ ಜವಬ್ದಾರಿ
ಎಲ್ಲೋ ಒಂದು ಕಡೆ ಕೂತು
ಎಲ್ಲವನ್ನು ನೆನೆದು
ಮನೆಗೆ ಬಂದು ನಗು ಮುಖವಾಡ
ಹಾಕಬೇಕಾಗುತ್ತೆ ಒಳ ನೋವು ಕಾಣದಂತೆ
ತಂದೆ ಇರದ ಜೀವನ
ಬೆಳಕು ಬೀರದ ಸೂರ್ಯೋದಯದಂತೆ
ಸಾಗಬೇಕಿದೆ ಬಂದಂತೆ ನಗುತ್ತಾ.

-


21 SEP 2019 AT 12:52

ಅನನ್ಯ
ಅನುಬಂಧವು
ಅಂತರಂಗದಲ್ಲಿ
ಅವಿರ್ಭವಿಸಿದ
ಅನುರಾಗವು
ನನ್ನವರ
ನೋವು
ನಲಿವಿನ ಜವಬ್ದಾರಿ
ನನ್ನ
ಹೊಣೆಯು.
ಕಾಯುವೆನು
ಕೊನೆವರೆಗೂ
ಕಣ್ರೆಪ್ಪೆಯಂತೆ..

-



ಅಸಹಾಯಕತೆಗಳು ಮಧ್ಯರಾತ್ರಿಯಲ್ಲೂ
ಮಲಗಿರುವುದಿಲ್ಲ
ಜವಾಬ್ದಾರಿಗಳು ನೇಸರನಿಗಿಂತಲೂ
ಮುಂಚೆಯೇ ಎದ್ದೇಳುತ್ತವೆ..!!

-


21 JAN 2022 AT 22:31

ಇನ್ನೆರಡು ಮುಳ್ಳುಗಳನ್ನು
ನಡೆಸುವ ಜವಾಬ್ದಾರಿ ಹೊತ್ತ
ಸೆಕೆಂಡು ಮುಳ್ಳು
ತೆಳ್ಳಗಾಗೇ ಇರುತ್ತೆ

-


23 OCT 2020 AT 14:25

ಜವಾಬ್ದಾರಿಗಳೆ ನಾ ಆಭಾರಿ ನಿಮಗೆ.🙏

ಜವಾಬ್ದಾರಿಗಳೆ ಧನ್ಯವಾದಗಳು ನಿಮಗೆ
ನನ್ನ ಹೆಗಲ ಮೇಲೆಯೇ ಸ್ಥಾನ ನಿಮಗೆ
ಧ್ಯೇಯದ ಬಗೆಗೆ ಎಚ್ಚರಿಸುವಿರಿ
ಗುರಿಯ ಕಡೆಗೆ ನಡೆಸುವಿರಿ.

ಜವಾಬ್ದಾರಿಗಳೆ ಧನ್ಯವಾದಗಳು ನಿಮಗೆ
ಚಂಚಲ ಮನಸ್ಸನು ನಿಯಂತ್ರಿಸುವಿರಿ
ಅಚಲವಾಗಿ ನಿಲ್ಲಲು ಪ್ರೇರೇಪಿಸುವಿರಿ
ಗುರುತರ ಹೊಣೆ ಹೊರಿಸಿರುವಿರಿ

ಜವಾಬ್ದಾರಿಗಳೆ ಧನ್ಯವಾದಗಳು ನಿಮಗೆ
ಗೊತ್ತು ಗುರಿ ಇಲ್ಲದ ಸೋಮಾರಿ ನಾನಲ್ಲ
ನಿಮ್ಮ ಭಾರ ನನ್ನ ಹೆಗಲ ಮೇಲೆ ಇದೆ
ಆಭಾರಿಯಾಗಿದ್ದೇನೆ ನಿಮ್ಮ ನಂಬಿಕೆಗೆ.

ಜವಾಬ್ದಾರಿಗಳೆ ಧನ್ಯವಾದಗಳು ನಿಮಗೆ
ಜವಾಬ್ದಾರಿಯುತ ಸ್ಥಾನದಲ್ಲಿ ನಿಲ್ಲಿಸಿದಿರಿ
ನನ್ನವರ ನಂಬಿಕೆ ವಿಶ್ವಾಸ ಹೊರಿಸಿರುವಿರಿ
ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವಿರಿ.

-


6 FEB 2020 AT 15:29

ಹೊಸಿಲೊದ್ದು ಒಳ ನಡೆದರೆ
ತುಂಟಾಟಕ್ಕಂದೆ ಕೊನೆ ದಿನ !!

ಅವನಾಕಿದ ಹೂಮಾಲೆ ಹೂವಲ್ಲ
ಜವಬ್ದಾರಿಯ ಸುರುಳಿ ಅದರಲ್ಲಿ
ಸೋಲದೆ ಗೆದ್ದರೆ ಸಾರ್ಥಕ ಹೆಣ್ಣಿನ ಜೀವನ !!

ಕಲಿಯದೆ ಬಂದರೂ ಎಲ್ಲವ ಕಲಿತು ಪರಿಣಿತಿಯ
ಪಡೆದಳು ಬೆರಳೆಣಿಕೆಯ ದಿನಗಳಲಿ
ಜೊತು ಬಿದ್ದರೂ ಅವಳ ನೂರಾಸೆ
ಕಡೆಗಣಿಸಿ ನಡೆವಳು ಎಲ್ಲರಾಸೆಯೆಡೆಗೆ !!

ಅದು ಬೇಕು ಇದು ಬೇಕೆಂದು ಹಠ ಹಿಡಿವ ಮಕ್ಕಳು
ತನ್ನ ಬಾಲ್ಯದ ಹಠಗಳ ನೆನೆದು ಒಳಗೊಳಗೆ ಮುಗುಳ್ನಗುವಳು
ಸಂಬಾಳಿಸಿಕೊಂಡು ನಡೆಯಬೇಕು ಎಲ್ಲವೂ ಎಲ್ಲರನೂ
ಇಲ್ಲದೆ ಹೋದರ ಅಳಿ ತಪ್ಪುವುದು ಸಂಸಾರವಿನ್ನು
ಕಲಿಯದ ಪಾಠಗಳಿಗೂ ಗುರುವಾದಳೂ ಪಡೆದ ಅನುಭವಗಳಿಂದಲೆ !!

-



ಹೈಕು
*****
ಜವಾಬ್ದಾರಿಯ
ಸಂತೋಷ ತ್ಯಾಗದಲ್ಲಿ ;
ಬಾಳು ಉಯ್ಯಾಲೆ

-



ಚಿಂತೆಗೂ ಒಂದು ವ್ಯಾಲಿಡಿಟಿಯಿದ್ದರೆ
ನೆಮ್ಮದಿಯ ತಂಬೆಲರು ನಿರೀಕ್ಷಿಸಬಹುದು
ಜವಾಬ್ದಾರಿ ಹೊರಲು ಸದೃಢವಾದ ಹೆಗಲಿಗಿಂತ ಜೀವನಪ್ರೀತಿ ಬೇಕು ಗೆಳೆಯ

-