ಮರೆಸುವ ಎಲ್ಲವ
ಅವನೆ ಜಗವೆನಿಸುವ.-
ಸಾಮಾನ್ಯಳ ಜೀವ ಭಾವ.✍️
ನಾನು ನನ್ನ ಬರಹ ತುಂಬಾ ಸರಳ
ಏಕೆಂದರೆ ನಾ ತಿಳಿದಿಲ್ಲ ಬಹಳ😊
ಉತ್ಸಾಹ ಇಲ್ಲದಿರೆ
ಚೈತನ್ಯ ಕುಂದಿರೆ
ಸ್ಪೂರ್ತಿ ಬತ್ತಿರೆ
ಭರವಸೆ ಕರಗಿ
ಆಸರೆ ಮರೆಯಾಗಿ
ಸಂತೈಸಲು ಹಿತವರಿಲ್ಲದೆ
ವಿಧಿ ಘೋರವೆನಿಸಿ
ಬದುಕು ಬಲು ಭಾರ.-
ವರುಷದ ಆದಿ
ಚೈತ್ರದ ಚಿಗುರು
ಕೋಗಿಲೆಯ ಇಂಪು
ಮಾವಿನ ಕಂಪು
ಹಳೆ ಬೇರು
ಹೊಸ ಚಿಗುರು
ನೂರೆಂಟು ಬವಣೆಯಲಿ
ಹೊಸ ಭರವಸೆಗೆ ನಾಂದಿ ಯುಗಾದಿ.-
ಬಂದಿತು ಸಂಕ್ರಾಂತಿ
ಬದಲಾವಣೆಯ ತಂದಿತು
ಬೆಳಕು ಚೆಲ್ಲುವ ಸೂರ್ಯ
ಉತ್ತರಾಯಣಕೆ ಬಂದ
ಧರೆಗೆ ಸುಗ್ಗಿಯ ಹಿಗ್ಗನು ತಂದ
ಎಳ್ಳು ಬೆಲ್ಲದಂತೆ ಬೆರೆತು
ಹಿತವಾಗಿ ಬಾಳಿರಿ ಎಂದ.-
ತಾಯ್ನಾಡಿಗಾಗಿ ಮಡಿದವಗೆ
ತಾಯಿಯೇ ನಮಿಸುತಿಹಳು.
ಕರುಳು ಹಿಂಡುವ ನೋವಿದ್ದರೂ
ಕಂಗಳಲ್ಲಿ ಹೆಮ್ಮೆಯ ಸೂಸುತಿಹಳು.🪖🎖🙏-
ನಿನ್ನ ಸುತ್ತ ಗಿರಕಿ ಹೊಡೆಯುವ ನನಗೆ
ನೀನೇ ಮೊದಲು
ನೀನೇ ಕೊನೆ
ನೀನೇ ಎಲ್ಲಾ ❤️-