ತಿಪ್ಪೆಯಲ್ಲಿ ಮುತ್ತು ಹುಡುಕಿದರೆ ಸಿಕ್ಕಿತೇ
ನಿನ್ನ ಕಾಣದೆ ನನ್ನ ಕವಿತೆ ಪೂರ್ತಿಯಾದಿತೆ.-
ಅವಳ ವಿರಹ, ಈ ಕವಿಯ ಬರಹ ಅಷ್ಟೇ.
ಚಿಂತೆಯಿಲ್ಲದ ನಿದ್ದೆಯಲ್ಲಿ
ಅವಳದೇ ಕನಸುಗಳ ಕೂಗಾಟ
ಹೃದಯದ ಸ್ಮಶಾನದಲ್ಲಿ
ಅವಳದೇ ನೆನಪುಗಳ ಚೀರಾಟ.-
ಹುಡುಗರ ನಿಜವಾದ ಪ್ರೀತಿ
ಎಷ್ಟೋ ಹುಡುಗಿಯರಿಗೆ ಸಿಗುತ್ತದೆ
ಆದ್ರೆ ಹುಡುಗಿಯರ ನಿಜವಾದ ಪ್ರೀತಿ
ಕೆಲವು ಹುಡುಗರಿಗೆ ಮಾತ್ರ ಸಿಗುತ್ತೆ.-
** ನಮ್ಮ ಜೀವನ ಹೆಂಗಂದ್ರೆ **
ಪ್ರತಿ ತಿಂಗಳ ಸಂಬಳಕ್ಕೂ
ಎರಡು ಮೂರು ಚಿಕ್ಕ ಆಸೆಗಳನ್ನು ಕಟ್ಟಿರುತ್ತಿವಿ
ಆದ್ರೆ ಕೆಲವು ಪರಿಸ್ಥಿತಿಯ ಮುಂದೇ
ಪ್ರತಿ ತಿಂಗಳಿನಂತೆ ಸಲೀಸಾಗಿ ಅವುಗಳನ್ನು
ಮುಂದೂಡಿ ಬಿಡುತ್ತಿವಿ.-
ನಾನಿಲ್ಲಿ ಅವಳ ಕೈ ಅಂದಕ್ಕೆ ಕೈ ಬಳೆ ಹುಡುಕುತ್ತಿದ್ದಾರೆ
ಅವಳಲ್ಲಿ ಇನ್ಯಾರದೋ ಕೈ ಹಿಡಿದು ಹಸೆಮಣೆ ಏರಿದ್ದಳು.-
ಎಷ್ಟೋ ಹುಡಿಗಿಯರನ್ನ ನೋಡಿದಾಗ
ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವೆ ಗೆಳತೀ
ನಿನ್ನಂತ ಹುಡುಗಿಯನ್ನು ನಾ ಪ್ರೀತಿಸಿದಕ್ಕೆ.-
ಎಂದಾದರೂ ಅವಳು ಬರಬಹುದು ಎಂದು
ಹೃದಯದ ಬಾಗಿಲನ್ನು ತೆರೆದು ಮಲಗಿದ್ದೆ
ಎಚ್ಚರ ಅದಾಗಲೇ ಗೊತ್ತಾಗಿದ್ದು
ಸ್ಮಶಾನಕ್ಕೆ ನಾನು ಖಾಯಂ ನಿವಾಸಿಯಾದೆ ಎಂದು.-
ಮೋಡ ಕವಿದ ಮಳೆಯ ಮರೆಯಲಿ ನಿಂತು
ರವಿಯೂ ಇಣುಕಿ ನೋಡಿದಂತೆ ಅವಳ ಕಣ್ಣೊಟ
ಕಾಮನಬಿಲ್ಲು ಸೆರೆಯಾಯಿತು ಅವಳ ನಗೆಯೊಳಗೆ
ಕೋಗಿಲೆಯೂ ಹಾಡಿತು ಅವಳ ಧ್ವನಿಯೊಳಗೆ
ಮೊಗ್ಗೊಂದು ಅರಳಿತು ಅವಳನ್ನು ನೋಡಲು
ಮಳೆಹನಿಯೂ ಹುಡುಕಿತು ಅವಳನ್ನ ಸ್ಪರ್ಶಿಸಲು
ನಿನ್ನನ್ನು ನೆನೆಯುವ ಕಾಯಕದೀ ನಾ ನಿರಂತರ
ಕ್ಷಮಿಸಿ ಬರಬಾರದೆ ಗೆಳತೀ ಒಮ್ಮೆ ಈ ಅಂತರ-
ಸುರಿವ ಕಂಬನಿಗೇ , ಮಳೆಯ ಆಲಿಂಗನವೇ
ಮುಂಬರುವ ದಿನಗಳಿಗೆ, ಸ್ಮಶಾನದ ಒಡನಾಟವೇ
ಬರೀ ಒಂದು ಮಾತಿಗೆ, ಜೀವನುದ್ದಕ್ಕೂ ಪಶ್ಚಾತ್ತಾಪವೇ
ನಿನ್ನ ಗಾಢ ಮೌನವು , ನನ್ನ ತಿಳಿ ಸಾವಿಗೆ ಆಹ್ವಾನವೇ.-