ದೇವರ ಹೆಸರಲ್ಲಿ ಉಪವಾಸ
ಮಾಡುವುದು ಸಾಧನೆ ಅಲ್ಲ
ತಂದೆ-ತಾಯಿ ಉಪವಾಸ
ಇರದಂತೆ ನೋಡಿಕೊಳ್ಳುವುದು
" ಮಹಾಸಾಧನೆ "
' ಇದು ಮಕ್ಕಳ ಕರ್ತವ್ಯ '
-
" ಅಪ್ಪ - ಅಮ್ಮ"
ವೈಕ್ಯೂನಲ್ಲಿ ನನ್ನ ಈ 100 ನೇ ಬರಹ ನಮ್ಮ ಪ್ರೀತಿಯ, ಅಚ್ಟು ಮೆಚ್ಚಿನ ಮತ್ತು ನಮ್ಮ ಜೀವನದಲ್ಲಿ ಎಲ್ಲವೂ ಆಗಿರುವ
ತಂದೆ ತಾಯಿಗೆ ಅರ್ಪಿಸುತ್ತಿರುವೆ
🙏🙏🙏🙏
ಕವನವನ್ನು ಕ್ಯಾಪ್ಶನ್ನಲ್ಲಿ ಓದಿರಿ 👇👇👇👇-
ಎರಡು ಪುಟ್ಟ ಜೀವಗಳಿಗೆ ಜಗತ್ತನ್ನು
ತೋರಿಸಿದವರಿವರು!
ಎಲ್ಲಾ ನೋವು ನಲಿವುಗಳಲಿ
ಪ್ರೀತಿಯ ಕಂಡುಕೊಂಡವರಿವರು!
ನಮ್ಮೆಲ್ಲಾ ಆಸೆ ಕನಸುಗಳಿಗೆ
ಬೆನ್ನೆಲುಬಾಗಿರುವವರಿವರು!
ಸರಳ ಜೀವನದಲ್ಲಿ
ಸಂತಸವ ಸೃಷ್ಟಿಸಿಕೊಂಡಿರುವವರಿವರು!!
ತಪ್ಪು ಒಪ್ಪುಗಳನ್ನು ಮನ್ನಿಸಿ
ನಡೆಯುತ್ತಿರುವವರಿವರು!
ನಮ್ಮಿಬ್ಬರ ಏಳಿಗೆಗಾಗಿಯೇ
ಬದುಕುತ್ತಿರುವವರಿವರು!
ತಮ್ಮ ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು
ಮೆಟ್ಟಿ ಸುಖವಾದ ಸಂಸಾರವ
ಸಾಗಿಸುತ್ತಿರುವವರಿವರು!!
ಅಪ್ಪನ ಮುದ್ದಿನ ಮಗಳು ನಾನು!
ಅಮ್ಮನ ಪ್ರೀತಿಯ ಮಗ ಅಣ್ಣ!
ಅಮ್ಮನ ಅಕ್ಕರೆಯ ಸವಿಯುತ,
ಅಪ್ಪನ ಪ್ರೀತಿಯ ಪಡೆಯುತ
ಬಹು ಉಲ್ಲಾಸದಿಂದಿರುವವರು
ನಾವಿಬ್ಬರು!!
ನನಗೊಬ್ಬ ಉತ್ತಮ ಅಣ್ಣನನ್ನು
ಕೊಟ್ಟ ಪ್ರೇಮಮಯಿಗಳಿವರು!
ನಮ್ಮ ಸಣ್ಣಪುಟ್ಟ ಆಸೆಗಳನ್ನಿಡೇರಿಸಲು
ಅವರ ಕನಸುಗಳನ್ನ ತೊರೆದ
ತ್ಯಾಗಮಯಿಗಳಿವರು!-
ಎದೆಯಲ್ಲಿ ಸಾವಿರ ನೋವುಗಳ
ಅದುಮಿಟ್ಟುಕೊಂಡು
ಹೊತ್ತೊತ್ತಿಗೆ ಹಸಿವು ನೀಗಿಸಿದವನು
ಅಪ್ಪ....
ಮನದಲ್ಲಿ ನೂರು ಭಾವನೆಗಳ
ಹುದುಗಿಸಿಟ್ಟುಕೊಂಡು
ಹೊತ್ತೊತ್ತಿಗೆ ಮಮತೆಯ ಧಾರೆ ಎರೆದವಳು
ಅಮ್ಮ....-
ಕಷ್ಟ ನುಂಗಿ ಸುಖವ ಹಂಚಿದವರು ಅಪ್ಪ,
ಹಸಿವ ನುಂಗಿ ಹೊಟ್ಟೆ ತುಂಬಿಸಿದವಳು ಅಮ್ಮ.-
#ಕವಿತೆ
ಸುಮ್ಮನೆ ಅಮ್ಮನ ಮಡಿಲಲ್ಲಿ ಮಲಗಿದಾಗ
ನೇವರಿಸಿದ ಆ ಕೈಗಳು
ಪಿಸುಗುಟ್ಟಿದ ಮಾತು 'ಕವಿತೆ'
ಹಗಲೆಲ್ಲ ಬೆವರುಹರಿಸಿ ಮನೆಗೆ ಮರಳಿದ ಅಪ್ಪ
ಪ್ರೀತಿಯಲಿ ಅಪ್ಪಿಕೊಂಡು
'ಪಾದ'ಕ್ಕಿತ್ತ ಮುತ್ತು 'ಕವಿತೆ'-
ವಿಧ್ಯೆ, ಬುದ್ಧಿ, ಛಲದಿಂದ ತಲೆಯೆತ್ತಿ ಬದುಕಲು ಹೇಳಿಕೊಟ್ಟವನು ಅಪ್ಪ,
ನಂಬಿಕೆ, ಪ್ರೀತಿ, ಮಮತೆ, ಮಮಕಾರವೇ ಜೀವನ
ಎನ್ನುವುದ ತಿಳಿಸಿಕೊಟ್ಟವಳು ಅಮ್ಮ.-
ಅಪ್ಪ ಅಮ್ಮನ ಪ್ರಪಂಚದಲ್ಲಿ
ಅವರ ಮಕ್ಕಳು ಬಿಟ್ಟು ಬೇರೆ ಯಾರು ಇರಲು ಸಾಧ್ಯ..?
ಆದ್ರೆ ಮಕ್ಕಳ ಬದುಕಲ್ಲಿ ಎಲ್ಲರೂ ಇರ್ತಾರೆ ಅಪ್ಪ ಅಮ್ಮನೇ ಇರಲ್ಲ..
ಈ ಪ್ರಪಂಚಕ್ಕೆ ತಂದು ಅಸ್ತಿತ್ವ ರೂಪಿಸಲು ಅದೆಷ್ಟೋ ತಡರಾತ್ರಿಯ ನಿದಿರೆ,
ಅರೆಕೂಳಿನ ಊಟ ಆ ಎಲ್ಲದರ
ತ್ಯಾಗವೇ
ಇಂದು
ನಾವು ದಷ್ಟಪುಷ್ಟವಾಗಿ
ಆರೋಗ್ಯವಾಗಿರಲು ಕಾರಣ,,,,..-
ತಾಯಿಯಾ ಮಮತೆಯದು ಮುಗಿಯದಾ ಬುತ್ತಿ
ತಂದೆಯಾ ಸಂಸ್ಕಾರವೇ ಬಾಳಿಗದು ನಿತ್ಯ ಜ್ಯೋತಿ.-