ದೇಶದಾದ್ಯಂತ 73 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ
ಭಾರತೀಯನಿಗೆ ಮರೆಯದಿರು ಈ ಹೆಮ್ಮೆಯ ದಿನವ
ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತನಿಂದ ಪಶ್ಚಿಮಬಂಗಾಳದವರೆಗೆ ಸಂಭ್ರಮದಿಂದ ಹಾರಾಡಲಿದೆ ನಮ್ಮ ತ್ರಿವರ್ಣ ಬಾವುಟ
ಬ್ರಿಟಿಷರ ದಬ್ಬಾಳಿಕೆ ತೊಲಗಿಸಿ ಸ್ವತಂತ್ರ ಭಾರತೀಯರಾದ ದಿನವ ಎಂದೆಂದೂ
ಮರೆಯದಿರು ಸ್ವಾತಂತ್ರ ಹೋರಾಟದಲ್ಲಿ ಮಡಿದ ನಮ್ಮ ಕೆಚ್ಚೆದೆಯ ಹೋರಾಟಗಾರರ ಇತಿಹಾಸವ.
ಇತಿಹಾಸದ ಪುಟಗಳಲ್ಲಿ ದಾಖಲಾದ ಈ ದಿನವ
ಆಚರಿಸು ಜಾತಿ ಮತ ಭೇದ ಮರೆತು ಮಾನವ ಧರ್ಮವ ಎತ್ತಿ ಹಿಡಿಯುತ..
ರಾಷ್ಟ್ರದೆಲ್ಲೆಡೆ ವೈಭವಪೂರ್ಣವಾಗಿ ಜರುಗಲಿ
ಭಾರತಾಂಬೆಯ ಜನ್ಮ ದಿನದ ಸಂಭ್ರವವ...
-
ಜುಲೈ 26 ದೇಶದೆಲ್ಲೆಡೆ ಕಾರ್ಗಿಲ್ ವಿಜಯದ ಸಂಭ್ರಮ..
ಭಾರತಾಂಬೆಯ ಸೇವೆಗಾಗಿ ಮುಡಿಪಾಗಿಟ್ಟಿರಿ ನಿಮ್ಮ ಜನುಮ...
ಈ ಸಂಭ್ರಮಕ್ಕೆ ಕಾರಣರಾದ ಎಲ್ಲಾ ಯೋಧರಿಗೂ ನನ್ನದೊಂದು ಸಲಾಮ್..
ಶತ್ರು ರಾಷ್ಟ್ರದ ಪಾಲಿಗೆ ಅಂದು ನೀವೇ ಯಮ..
ಹಗಲಿರುಳು ಹೋರಾಡಿ ನೋವನ್ನು ಲೆಕ್ಕಿಸದೆ ಪಡೆದಿದ್ದೀರಿ ಜಯದ ಸಂಭ್ರಮ..
ನಮಗಿಂದು ನೋಡಲು ದೊರೆಕುವುದು ಅಂದು ನಡೆದ ಯುದ್ಧದ ಸಿನಿಮಾ..
ದೇಶಕ್ಕಾಗಿ ಅಂದು ಇಂದು ಮುಂದು ಹೊರಡುವ ಪ್ರತಿಯೊಬ್ಬ ಯೋಧರಿಗೂ ಆಶೀರ್ವಾದ ನೀಡಲಿ ಆ ನಮ್ಮ ದೇವ ಹನುಮ..
ಭಾರತ್ ಮಾತಾಕಿ.. ಜೈ...
-
ಇಂಕ್ವಿಲಾಬ್ ಜಿಂದಾಬಾದ್ ಎಂದು ತಮ್ಮ ಇಳಿ ವಯಸ್ಸಿನಲ್ಲಿ ಭಾರತಾಂಬೆಗೆ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವೀರರಾದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರು ಗಲ್ಲಿಗೇರಿಸಿದ ದಿನ. ಮಾರ್ಚ್ 23-1931
-
ಚರಿತ್ರೆಯ ಪುಟದಲ್ಲಿ
ಅಮರ ಕಂಡಂತಹ
ಗೆಲುವಿನ ಇತಿಹಾಸವಿದು,
ಬಾಗದ ಶತ್ರುಗಳಿಗೆ
ಬಾಗಲು ಕಲಿಸಿಕೊಟ್ಟ
ಪವಿತ್ರತೆಯ ಶುಭದಿನವಿದು,
ಭಾರತಾಂಬೆಯ ಬಂಧನದ
ಸರಪಳಿಗೆ ಮುಕ್ತಿಸಿಕ್ಕ
ವಿಜಯೋತ್ಸವದ ಸುದಿನವಿದು,
ವೀರರ ನೆತ್ತರಿನ ಪ್ರತಿ
ಬಿಂದುವಿಗೂ ನ್ಯಾಯ
ಸಿಕ್ಕಂತಹ ಪುಣ್ಯದಿನವಿದು,
ದೇಶವು ಸ್ವಾತಂತ್ರ್ಯ
ಗಳಿಸಿದ ನಮ್ಮಯ
ಹೆಮ್ಮೆಯ ದಿನವಿದು..
🇮🇳ಸಿಂಚನ ಭಟ್ 🇮🇳
-
ವಂದೇ ವಿಶ್ವರೂಪಾಯ
ತಮಹಂ ವಂದೇ ಜಗದ್ಗುರುಂ
ವಂದೇ ಪರಬ್ರಹ್ಮರೂಪಾಯ
ತಮಹಂ ವಂದೇ ಜಗದೀಶ್ವರಂ
ವಂದೇ ಸಚ್ಚಿದಾನಂದಾಯ
ತಮಹಂ ವಂದೇ ಪ್ರಣವಾಕ್ಷರಂ
ವಂದೇ ಏಕಾಮೇವಾದ್ವಿತೀಯಂ
ತಮಹಂ ವಂದೇ ಪರಮೋಗತಿಂ-
ವೈಡೂರ್ಯದ ವೈಭವದಲಿ
ಸಾಮರಸ್ಯದ ಸವಿಭಾವದೊಳಿರಲು
ಬಿಳಿ ದೈತ್ಯರ ಆಕ್ರಮಣದ
ಸಂಚೊಳಗೆ ನಲುಗಿಹಳು
ತಾಯಿ ಭಾರತೀಯು
ಶತಶತಾದಿ ಹಗಲಿರುಳು
ಶೋಕದಲಿ ತನ್ನೊಳಗೆ
ಎನ್ನೆದೆಯೊಳು ಉರಿಯುತಿಹ
ಬೆಂಕಿಯ ಜ್ವಾಲೆಯಲೆ
ಆರತಿ ಇಟ್ಟು
ಮುಂದಿಡುವೆವು ಹೆಜ್ಜೆಯ
ನಿನ್ನ ಸೇವೆಗೆಂದ ಪುಣ್ಯಾತ್ಮರ
ಬಲಿದಾನದ ಫಲವು
ಮಡಿಲು ಸೇರಿದ ಪಾವಿತ್ರ್ಯದಿನವಿಂದು
ತತ್ತರಿಸಿ ಹೋದ ಧೀರರ ಬದುಕಿನಲಿ
ನಿರಂತರ ಬಲಿದಾನ ಗಲ್ಲಿ ಗಲ್ಲಿಯಲಿ
ನೆನೆದು ಕಣ್ಣನೀರು ಬತ್ತಿದರೂ
ಉತ್ಕೃಷ್ಟ ನಿಲುವಿನೊಳವಿತ
ಸರ್ವೋಚ್ಚ ಧ್ಯೇಯವು
ಹುಚ್ಚೆಬ್ಬಿಸಿತು ಪ್ರತೀಭಾರತೀಯನ
ರಕುತದ ಕಣ ಕಣದಲಿ..
ಧೀಮಂತ ರಾಷ್ಟ್ರಸೇವಕರ ದಂಡಿನಲಿ
ದಗ ದಗಿಸಿ ದಹಿಸಿದರು ದೂರ್ತರು ಹೋರಾಟದಲಿ
ಸರಪಳಿಯ ಕಳಚಿಕೊಂಡ
ತಾಯಿ ಭಾರತೀಯು
ನಿಟ್ಟುಸಿರು ಬಿಟ್ಟಂತ ಭಾವ ಮನದಲಿ...-