ರಕ್ತದಲೇ ಬೆರೆತು ಬಲಿತ ವಿಷಪಾಪಿಗಳ
ಪೈಶಾಚಿಕ ಪಾಪಿ,ನಾಯಿ ನರಿಗಳ
ಧರ್ಮ ಯಾವುದಿಲ್ಲಿ?
ನಮ್ಮೊಳಗೆ ಇದ್ದು ಭ್ರಾತೃತ್ವದ ಬಂಧನದಲ್ಲಿ
ಕೈಗೊಂಡ ಘೋರ ಕೃತ್ಯವೆಸಗಿದ
ನರರಾಕ್ಷಸ ದ್ರೋಹಿಗಳ
ಧರ್ಮ ಯಾವುದಿಲ್ಲಿ?
ನಿಶಸ್ತ್ರಧಾರಿ ಅಮಾಯಕರ ಮಾರಣಹೋಮಗೈದ
ಹೇಡಿ ನರಸತ್ತ ಹೆಮ್ಮಾರಿಗಳ
ಧರ್ಮಯಾವುದಿಲ್ಲಿ?
ಎಚ್ಚೆತ್ತುಕೊಳ್ಳದಿದ್ದರೆ ಇನ್ನು ಅನುಚಿತ
ನಾಶದಂಚಿಗೆ ಆಹ್ವಾನ ಖಚಿತ !..-
ಗೌಜಿದ ಬಿಸು
ಪ್ರಕೃತಿ ಅಪ್ಪೆನ ಮಟ್ಟೆಲ್ಡ್ ಬುಳೆದಿನ
ಪೆಲಕಾಯಿ, ಕುಕ್ಕು, ಪೊಸಫಲನ್
ಸಾಲ್ ದೀದ್ ಪೊಸವರ್ಸನು
ಮೋಕೆಡೆ ಎದುಕೊನುಗ...
ಜೋಕುಲು, ಇಲ್ಲದಕ್ಲ್ ಒಟ್ಟಾಯಿನ
ಪೊರ್ತುಡು ಹಿರಿಯೆರಾರ್
ಎಡ್ಡೆಪಾತೆರಕ್ಕಾದ್ ದುಂಬುಬರ್ಪೆರ್
ಪರ್ಬದ ಪೊರ್ಲುನು ಪಟ್ಟೊಂದು ಪೋಪೆರ್
ಕಾರ್ ಪತ್ತಿನ ಬಾಲೆಗ್ ಪೊರ್ಲೈಸಿರದ ಬದ್ಕ್
ತಿಕಡ್ಂದ್ ಹಿರಿಯೆರ್ ಆ ಸ್ವಾಮಿದ ನಟ್ಟೊಂವೇರ್..
ಬೀಜದ ಬೊಂಡು ದೆತ್ ದ್
ಅಟಿಲ್ ಗ್ ಗಳಸುನಗ
ಬರ್ಪಿನ ಕಮ್ಮೆನ ಪರ್ಬೋದ ಗೌಜಿನ್
ಇಲ್ಲ ನಿಲಿಕೆ ದಿಂಜಾಂಡ್
ಬಾರೆದ ಇರೆತ
ಬಗೆಬಗೆತ ತೆನಸುಲು
ಚೀಪಿದ ಪಾಯ್ಸ ಪರ್ಬೋದ
ಪೆರ್ಮೆನ್ ಪುಗರೊಂದುಂಡು...-
ಅವಳೆಂದರೆ ......
ಬತ್ತಿದ ಬದುಕೊಳು
ಭಾಗ್ಯವ ಬೆಳಗುವವಳು
ಹಚ್ಚಿದ ಹಣತೆಯನ್ನು
ಬಚ್ಚಿಟ್ಟು ಸೆರಗೊಳಗೆ
ಆರದಂತೆ ಕಾಯ್ವ
ದೈವತ್ವದ ಅಂಶದವಳು
ಸೃಷ್ಟಿಯ ವೈಯಾರದಂತೆ
ಸೌಮ್ಯವಾಗಿ ಸೆಳೆದವಳು
ತಲ್ಲಣದ ಮನದೊಳು
ತೋರದೆ ಬಿನ್ನಪಗಳ
ತಿಳಿ ನಗೆಯಲೇ
ತೇಲಾಡಿಸಿ ಬಿಡುವವಳು
ಬಯಕೆಗಳ ಗೂಡಲಿ
ಇಂಗಿತಗಳ ಸುಪ್ತವಿರಿಸಿ
ಸರ್ವವನು ಸಂತಸದಿ
ಸ್ವೀಕರಿಸುವವಳು
ಜೀವಾಂಶ ಧಾರೆಯೆರೆದು
ಕರುಳ ಬಳ್ಳಿಯ ಬಾಂಧವ್ಯವ
ಭದ್ರವಾಗಿ ಬೆಸೆಯುವಳು
ಅವಳೆಂದರೆ.....
ಪದವೇ ಸಾಲದ
ಪರಮಾದ್ಬುತ ಪವಿತ್ರ ಪೂಜ್ಯಳು-
ಬ್ರಹ್ಮಾಂಡದ ಅಧಿಪತಿಗೆ
ದೇವತೆಗಳೆಲ್ಲ ಶರಣು ನಿನಗೆ
ಭಸ್ಮಧಾರಿ ಭುಜ0ಗನೇ
ತ್ರಿನೇತ್ರಧಾರಿ ಸೃಷ್ಟಿಕರ್ತನೇ
ಭೂಮಿಯ ಭೋರ್ಗರೆತಕೆ
ಭಂಗಿಯಲೆ ತಾಂಡವವನ್ನೆಬ್ಬಿಸಿ
ಸರ್ವವ ಸರಿದೂಗಿಸಿದ ಅಖಿಲಾಂಡೇಶ್ವರನೇ
ನಂಜನುಂಡರೂ ನಂಜೇ ಸೋಕದ
ನಂಜುಂಡೇಶ್ವರನೇ
ಪಂಚಮುಖಗಳ ಪಂಚಲಿಂಗೇಶ್ವರನೇ
ಸರ್ವವೂ ಇಹುದಿಲ್ಲಿ ನಿನ್ನ ಮುಷ್ಠಿಯೊಳಗೆ
ಪವಿತ್ರ ಭಕ್ತಿಯ ಭಾವ ಬೆಳೆಸು
ಪ್ರತಿ ಮನುಜನ ಮನದೊಳಗೆ-
ಧನುರ್ಮಾಸದ ಮುಂಜಾವಿನಲ್ಲಿ
ಕೊರೆಯುವ ಚಳಿ ಮಂಜಿನಡಿಯಲಿ
ಭಕುತರ ದಂಡಿಹುದು
ಮಹದೇವನ ಮಡಿಲಲಿ ...
ಪ್ರಜ್ವಲಿಸುವ ದೀಪವು
ಶ್ರೀಗಂಧದ ಸುಗಂಧವು
ಗಂಟೆಯ ನಿನಾದವೆಲ್ಲ
ವೈಭವದಿಂದಲೇ ಸ್ವಾಗತಿಸುತಾ
ಆಗಮಿಸುತಿದೆ ಊರಹಬ್ಬವು
ಜಗಮಗಿಸಲಿದೆ ಇಷ್ಟಿಕಾಪುರವು-
ತಗ್ಗಿ ನಡೆದು ಮುಂದೆ ಸಾಗು
ಜಗ್ಗದಿರು ಜಂಜಾಟಕೆ
ಹಿಗ್ಗಿ ,ಹೀಯಾಳಿಸಿ,ಮೆರೆಸುವ
ಮಂದಿ ಎದುರಲಿ
ನುಗ್ಗಿ ನಡೆ ಕಿವಿಯಾಡದೆ
ಛಲವ ಬಿಡದ ನಿನ್ನ ಹಠವು
ಮೆರೆಸುವುದು ನಿನ್ನ ವಿಶ್ವದೊಳಗೆ...-
ರೆಕ್ಕೆ ಬರದ ಪುಟ್ಟ ಮರಿಯು
ಅತ್ತಿತ್ತ ನೋಡಿ ಬಾನೆತ್ತರ
ಹಾರ ಬಯಸುತಿದೆ,
ಪಿಲಿಪಿಲಿ ನೋಡುವ ಪುಟ್ಟ ಕಂಗಳಲ್ಲಿ
ಕೋಟಿ ಕನಸುಗಳು ಬಿತ್ತರಗೊಳ್ಳುತ್ತಿದೆ!
ಚಿತ್ತಾರದಿ ಕಾಣುತ್ತಿರುವ ಸುತ್ತೆಲ್ಲವನು
ತನ್ನದೆಂದು ಆಲಂಗಿಸಿಕೊಳ್ಳುವಂತಿದೆ!
ಅಮ್ಮ ನೀಡಿದ ತುತ್ತ ತಿಂದು, ಮತ್ತೆ
ಕನಸಿನೊಳಗೆ ಜಾರಿ ಹೋಗಿದೆ.....
ರೆಕ್ಕೆ ಬಲಿತ ಅದೇ ಹಕ್ಕಿಯಿಂದು
ಮದತುಂಬಿದ ಕನಸೊಡನೆ
ಮುಂದುವರೆದಿದೆ...
ತನ್ನ ಬಳಗವ ಮರೆತು ಬಿಟ್ಟು
ದೂರ ದೂರ ಸಾಗಿದೆ
ಬಹುದೂರದ ಬಲಿಷ್ಠನೆದುರು
ಸೋತು ಸುಣ್ಣವಾಗಿ
ಗತಿಸಿ ಹೋಯಿತೇ?.......
ನಿಷ್ಕಲ್ಮಶದಲಿ ಕಂಡ ಕನಸೆಲ್ಲಾ
ಸ್ವಾರ್ಥದಲಿ ಬಲಿಯಾಯಿತೆ?..-
ಧ್ಯಾನದೊಳಗಿಹ ಸುಪ್ತ ಸುಗಂಧವಿದು
ಕವಿಶ್ರೇಷ್ಠರಾಡಿ ಹೊಗಳಿದ ಸಪ್ತಸಾಗರವಿದು
ಉಪ್ಪರಿಗೆಯನೇರಿ ಚಪ್ಪರಿಸುವಂತಹ
ಅನರ್ಘ್ಯ ಶಬ್ದ ಭಂಡಾರವಿದು
ಶಿಲೆಯೊಳಗವಿತಿಹ ಸಂಗೀತದ
ಸುಸ್ಪಷ್ಟ ಸ್ವರಗಳಿವು
ಕನ್ನಡದ ಕಂಪಿಗೆ ಮರುಳಾಗಿ
ಶರಣಾದ ಅನ್ಯ ಭಾಷಿಗರೆಷ್ಟೋ!
ಕನ್ನಡದ ತಿರುಳರಿಯದ
ಅಜ್ಞಾನಿ ಕನ್ನಡಿಗರೆಷ್ಟೋ !
ಪ್ರತಿ ಮೌನ ಮಾತಾಗಿ
ಸೆರೆಹಿಡಿದ ಗಣಿಯಾಗಿ
ಪದವಾಗಿ ,ಹಾಡಾಗಿ
ಮನದಾಳದ ಧನಿಯಾಗಿ
ಧರಣಿಯ ಅತ್ಯದ್ಭುತ ಭಾಷೆಯೇ
ಕನ್ನಡ .... ಕನ್ನಡ ....-
ಬೇದದಾಂತಿ ಬೊಲ್ಪು
ಮಿನ್ಕೊಂದುಂಡು ಊರಿಡಿಕ
ಐಸಿರಡ್ ತೆಲಿತೊಂದುಲ್ಲ ತಿಬಿಲೆಲು
ಬಂಗಾರ್ನ್ ಮೈನಿಲಿಕೆ ಪಾಡಿಲೆಕ
ಎಡ್ಡೆದಿನೊತ ಎಡ್ಡೆಪಾತೆರೊಲೆನ್
ಕೆಬಿ ಮುಟ್ಟಾವೊಡು ಕಿನ್ಯಪ್ಪೆಲೆಗ್ ಕೇನುಲೆಕ
ಓಟ್ಟಾದ್ ಸೇರ್ದ್
ದೈವದೇವೆರೆಡ ನಟ್ಟೊಂದು
ಪರ್ಬದ ಪೊರ್ಲುನು
ಊರೊರ್ಮೆ ಪಟ್ಟೊಂದು
ಗೌಜಿದ ಲೇಸ್ನ್ ಗಮ್ಮತ್ ಡೇ ಎದುಕೊನುಗ-