ಖಾಲಿ ಪುಟಗಳ ಮೇಲೆ
ಮೆತ್ತಗೆ ಸರಿದ ನೆನಪಿನ
ತೂಗುಯ್ಯಾಲೆ ಓಲಾಡಿಸುತಿಹ
ಪದಗಳ ಮಾಲೆ ಕಣ್ಣೀರ
ಕಥೆಗಳಿಗೊಂದು ಕರೆಯೋಲೆ
ಸುತ್ತಲೂ ಕವಿದಿಹ
ಕತ್ತಲಾ ಛಾಯೆ
ಪೊಳ್ಳು ಮಾತಿನ ಸುಳ್ಳು
ಕಥೆಗಳ ಮಾಯೆ
ಎತ್ತಲೊ ಹೊರಡಿದೆ ಮನದ ಜ್ವಾಲೆ
ಉತ್ತರ ಹೇಳದೆ ಸವೆದಿದೆ
ಹಾಳೆ ಹೊತ್ತಿ ಉರಿಯುತಿಹ
ಕಟ್ಟಿಗೆಯ ಮೇಲೆ
ಭಾವನೆಗಳಿಲ್ಲದೆ ಅಲೆಯುತ್ತಿದೆ
ನೋವಿನ ಬೆಲೆ........
✍Thilaka kulal
-
ಪ್ರಲಾಪಿಸುತಿಹ ವೇದನೆ
ಕವಲೊಡೆದಿದೆ ದಾರಿ ಕಾಣದೆ
ಅಂಗಲಾಚುತಿಹ ಭಾವನೆ
ಪರಿತ್ಯಾಗಿಸಿದೆ ಕನಸನ್ನೆ
ಮುಂದುವರಿಯುವ ಬದುಕ
ಕಟ್ಟಲಾಗದೆ ಕಣ್ಣೀರಲಿ
ಕೈ ತೊಳೆದು ನಗೆಪಾಟಲಿ
ಜೀವನದ ನಡೆಗೆ ಮಾರಾಟ
ಮಾಡಿದೆ ತನ್ನ ನಗೆಯನ್ನೇ
ದುಗುಡ ದುಮ್ಮಾನಗಳ
ಹೊತ್ತು ಸಾಗುತಿಹ ಬಾಳಿನ
ಬಾಗಿಲು ಹಸಿವಿನ ಬೇಗೆಗೆ
ಕ್ಷಣ ಕ್ಷಣಕ್ಕೂ ಸಾಯಿಸಿದೆ
ಬದುಕೊ ದಿನಗಳನ್ನೇ.......
✍Thilaka Kulal
-
ನಾವು ಎಷ್ಟೇ ಒಳ್ಳೆಯವರಾಗಿದ್ದರು
ಜನ ಮಾತ್ರ ನಾವು ಸತ್ತ ಮೇಲೆ ನಮ್ಮನ್ನು ಹೊಗೊಳೋದು..-
ಕಹಿ ನೆನಪುಗಳ ಕಾವು
ಉಂಟು ಮಾಡಿದೆ ಮನಸ್ಸಿಗೆ ನೋವು
ಬಲಶಾಲಿ ಕಹಿ ನೆನಪುಗಳ ಮುಂದೆ ದುರ್ಬಲ ನಾವು
ಏಕೆಂದರೆ ನಮ್ಮ ಮನಸ್ಸಿನಲ್ಲಿ ಆಗೋದೆ ಇಲ್ಲ ಕಹಿನೆನಪುಗಳ ಸಾವು
-
ಎದ್ದೇಳೊ ಕನಸುಗಳ
ಜೋಳಿಗೆಯ ಮರೆಯಲಿ
ಹಸಿದು ಕೂಗೋ ನೋವು
ಮನದಲಿ ಚೀರುತಿದೆ
ಕಂಗಳಲ್ಲಿ ಕರಗಿದ ಭಾವನೆಗಳ
ಮುಂದೆ ಸೋತು ನುಂಗಿದ
ಹೃದಯದ ವೇದನೆ
ಮೂಕ ಪ್ರೇಕ್ಷಕನಂತೆ
ಅಳುತಿದೆ ಮನದೊಳಗೆ
ಬದುಕಿನ ಅಕಾಂಕ್ಷೆ
ಪಟದಲಿ ಹರಿದು ಬಿದ್ದ
ಗಾಳಿಪಟದ ಕನಸಿಗೆ
ಉಳಿದ ಅನ್ನವೇ ಹೆಚ್ಚು
ಎನ್ನುತಿದೆ ಬಡತನದ ಬಂಡಿ
✍Thilaka kulal
-
ಕನಸುಗಳ ಮಾರಾಟ
ಕಣ್ಣಿಗೂ ಕಣ್ಣೀರಿಗೂ ಕಾದಾಟ
ನೋವಿಗೂ,ನಲಿವಿಗೂ
ನಿನ್ನದೇ ನೆನಪು.
ಹೇಳಿಕೊಳ್ಳಲು ನೀ ಬಳಿ ಇಲ್ಲ
ಕೊಟ್ಟು ಹೋಗಿರುವೆ
ಖಾಲಿಯಾಗದಷ್ಟು
ನೆನಪುಗಳ ಸಾಲ..-
ನಿನಗೆಂದೆ
ತೆರೆದ ನನ್ನ ಮನದ ಮಾತು
ನೀನಾಲಿಸಲಿಲ್ಲ..!
ಬೆರೆಯಲರಿತ ನನ್ನ ಹೃದಯದ ಭಾವ
ನೀ ಭಾ(ವಿ)(ಯಿ)ಸಲಿಲ್ಲ..!-
ಅವ್ವ...ಹೊಸ ಜೀವಕೆ ಜನ್ಮ ಕೊಡುವಾಗಲೇ ನೋವುಣ್ಣುತ್ತಾಳೆ...!!
ಮಗು...ಹೊಸ ಲೋಕಕೆ ಕಾಲಿಡುವಾಗಲೇ
ಅಳುತ್ತದೆ...!!!-
ಹೇಳ ಬಯಸಿದ ನೋವು
ಕೇಳ ಬಯಸದೆ
ಚುಚ್ಚುತಿರುವ ಮಾತಿಗೆ
ಸೆಣಸಾಡುತಿದೆ ಮೌನ ಯಾನ
ಅಂತಯ೯ದಿ ಮಾತಿನ
ಅಲೆಗಳು ಮರೆಸುತಿದೆ
ಮುಗುಳ್ನಗುವಿನ ಅಬ್ಬರ
ಕಂಡು ಕಾಣದ ಗೋಪುರ
ನೀರಿನ ರಭಸಕೆ ತೇಲಿಹುದು ನಯನ
ಕಾಣದೂರಿನ ದಾರಿಯ ಸವೆಸಿದೆ
ಕಟ್ಟಿಟ್ಟ ಕಥೆಯ ಒತ್ತಿ ಹೇಳುವ ತಾಣ
ನೋವಿನ ಸಾಗರದಿ
ಮುಳುಗುತಿರುವ ಮೌನ
ಕಣ್ಣೀರ ಖಾತೆಯ ಖಾಯಂ ಗುಲಾಮ
✍Thilaka Kulal
-
ಪ್ರೀತಿಯ ಅಮಲು,
ಕೆಲವು ಬಾರಿ ನೆಮ್ಮದಿ ವಿಳಾಸದ
ಹುಡುಕಾಟದಲ್ಲಿ ಅಲೆಮಾರಿಯಾಗಿರುತ್ತೆ....-