24 MAY 2020 AT 20:53
5 MAY 2020 AT 22:28
ಟಂಕಾ
ಕುಡುಕರಿಗೆ
ಎಣ್ಣೆಯ ಅಭಿಷೇಕ
ಕುಡಿತಕಾಗಿ
ಸರತಿ ಸಾಲುನೊಳು
ಅಂತರಗಂಗೆಯಂತೆ.!-
24 MAY 2020 AT 20:50
ಟಂಕಾ :—ಚಂದಿರ
~~~~~~~~~~~
ಬೆಳದಿಂಗಳ
ಹಾಲ್ಬೆಳಕ ಝೇಂಕಾರ
ಸೂಸುತಿರಲು
ಬಾಂದಳದ ರಾತ್ರಿಗೆ
ಚಂದಿರನ ಸಿಂಧೂರ!!-
30 APR 2020 AT 23:41
ಟಂಕ
ಭ್ರಾಂತಿ ಹುಟ್ಟಿದೆ
ಶಾಂತಿಯಿಲ್ಲದೆ ಮನ
ಜ್ಯೋತಿ ಬೆಳಗಿ
ಕರೋನ ಓಡಿಸಲು
ಸಜ್ಜಾಗಿಹರು ಜನ.!-
18 AUG 2021 AT 0:01
#ಟಂಕಾ
ಮನದೊಳಗೆ
ಇಂದಿಗೂ ನಿನಗೆಂದೇ
ಕೆಲ ಭಾವನೆ
ಮೀಸಲಾಗಿ ಉಳಿದು
ಅಳಿದು ಹೋಗುತ್ತಿವೆ
ಜೀವ ತುಂಬಲು
ನೀ ಬರುವುದಾಗಲಿ
ನೆನೆಯುವುದೂ
ಬೇಡವಾಗಿದೆ ಇಂದು
ಸಾಕಾಗಿದೆ ನನಗೂ..-
12 APR 2020 AT 11:32
*ಟಂಕಾ*
ಲೋಪ ನನ್ನದೆ
ಸ್ವಾನುಕಂಪ ಮರೆತು
ಕರುಣೆ ತೋರು
ಅನುರಾಗಿನಾನಾಗಿ
ಕಾಲ ಧೂಳಾಗಿರುವೆ!!-
15 JUL 2020 AT 11:02
ಟಂಕಾ
***
ವನದೊಳಗೆ
ಕಂಡು ಹಸಿರೊಡಲ
ಮಧ್ಯದೊಳಗೆ
ನಲಿದು ಕುಣಿತಿಹ
ಚಂದನದ ಮಯೂರ-
16 FEB 2022 AT 22:27
*ಟಂಕಾ*
ನಿನ್ನಂದ ನೋಡಿ
ಹುಣ್ಣಿಮೆ ಚಂದಿರನು
ಮಂಕಾಗಿಹೋದ
ಬೆಳಕನು ಚೆಲ್ಲದೇ
ಕಳಾಹೀನನಾದನು— % &-
5 MAY 2019 AT 19:23
*ಟಂಕಾ*
ಅವನೆಂದರೆ
ನನ್ನೆಲ್ಲಾ ತಪ್ಪುಗಳ
ಮನ್ನಿಸಿ ಸದಾ
ನಗುವುದನ್ನ ಹೇಳಿ
ಕೊಡೋ ಸೊಗಸುಗಾರ-