ನಿರ್ದೋಷಿಯ ಮನಕ್ಕೆ
ಸಿರಿತನದ ಗುಣ...
ಕವಳದ ಜೀವಕ್ಕೆ ನಿನ್ನದೆ
ಭಾವಗಳ ಒಲವಿನ ನೆಪ....-
ಗುರುವಿಗೆ ಹರಿ ಸರ್ವೋತ್ತಮ ತರು ಭಾವೋತ್ತಮ ಶಿವಸೂರ್ಯೋತ್ತಮ ಮೌನ ಮಾತನಾಡಿದಾಗ ಜೀವೋತ್ತಮ ಮಂಜುಳನಾದದಿ ಹೃದಯಸ್ಪರ್ಶಿಸಿ ಮನೋಜ್ಞವಾಗಿಸಿದ ಅಭಿಜ್ಞಾ ಸರಸ್ವತಿ ಪುತ್ರಿ ರತ್ನರಾಯಮಲ್ಲಸಜ್ಜನರ ಸಹವಾಸ ದಿಂದ ಶಾಂತಚಿತ್ತ ಪ್ರಹ್ಲಾದಕಾಂತರಾದಂತೆ ಏಕಾಂಗಿಯ
ಮುಗ್ದಮನಸನು ಮಾಯಾಜಿಂಕೆಯಾಗಿಸಲು ಶೃತಿ ಸೇರಿಸಿದೆ ಸುಮನಾಕೃತಿಯಲಿ ಅಶ್ಲೇಷಮಳೆಯ ಹುಡುಕಲು ಎಣ್ಣೆಶಿವನ ಜೊತೆ ಹೊರಟಾಗ ಕನಸು ಬಿದ್ದಂತೆ ಎಚ್ಚರಗೊಂಡು ಮಸಣದ ಕಾವಲುಗಾರನ ಹತ್ತಿರ ಬಂದು ಕಜೆಯವರಿಗೆ ಕರೆಮಾಡಲು ಹೋದಾಗ ಶ್ರೀನಾಗಮೌನದಿಂದಲೇ ಸಿಂಪಲ್ಲಾಗಿ ಬೇಡಎನ್ನಲು ಕ್ರಿಯೇಟಿವ್ ನಯನಗಳಿಗೆ ಮನಸೋತು ಕಾರ್ತಿಕಮಾಸ ನೆನಪಿಸಿಕೊಳ್ಳುತ್ತಾ ಕೋಮಲವಾದ ಕೈಗಳನ್ನು ಲೇಖಕನಾಗಿ ಪರಿವರ್ತಿಸಿದ ನನ್ನವಳ ವಿಳಾಸ ಸುಕೃತಿಯವರಿಂದ
ಪಡೆದು ನವಮಿ ಮುಗಿಸಿ ದಶಮಿಯೆಡೆಗೆ ನಡೆವಾಗ
ಸುತಾರನ ಗರಡಿಯಲಿ ತುಸು ಪಳಗಿ ಸುನಿತೆಯ ಜೊತೆ ಹೂವನ್ನು ಪೋಣಿಸುವುದನು ಕಲಿತು
ವಿಜಿ ಸಹೋದರಿ ಮನೆಯಲ್ಲಿ ಬಜಿ ತಿಂದು ಹೊಂಚುಹಾಕಿ ಸಂಚುಮಾಡಿ ವರಮಿಂಚುರವರ ಮನೆಗೆ ಊಟಕ್ಕೆ ಹೊರಟಿದ್ದೆ, ಅಷ್ಟರಲ್ಲಿ
ಹಂಸಪ್ರಿಯ ವಿಧ ವಿಧವಾದ ಭೋಜನ ಗಳಿಗೆ ಶ್ರೀಕಾಂತ ಬಟ್ಟರು ಶಿರಸಿಯವರಿಗೆ ಫೋನಾಯಿಸಿ ವಿಭಾ ಗ ಮಾಡಲು ತಿಳಿಸಿ. ಸಹೋದರ ಲಕ್ಷ್ಮಣ ನೊಂದಿಗೆ ಬರಲು ಹೇಳಿ. ಮಹಾಲಿಂಗನ ದರುಶನಕೆ
ಮಧುರೆಯಿಂದ ಬಂದ ಮೇಲೆ ಕರೆದುಕೊಂಡು ಹೋಗುವುದಾಗಿ ಹೇಳಿ ಭಾರಿ ಭಾರಿ ಪದಗಳಾಕೃತಿ
ಯಲ್ಲಿನ ಬರ್ಗರ್ ಪಿಜ್ಜಾ ತಿನ್ನಿಸುವ ಆಸೆ ತೋರಿಸಿದ ಉರ್ಮಿಳಾ ಮತ್ತು ಕಾವೇರಿ ಹೇಳದೆ ಕೇಳದೆ ಮಾಯವಾದರು..! 😂-
ಪ್ರಿಯ...
ನಿನ್ನ ಮಾತುಗಳೋ ಸಿಹಿಬೆಲ್ಲ
ಮನದ ಮಾತುಗಳು ನಿನಗೆ ಕೇಳಿಸುವುದಲ್ಲ
ಸವಿನೆನಪಾಗಿ ನಾ ನಿನ್ನನ್ನೇ ಹೊದ್ದಿರುವೆನ್ನಲ್ಲ
ನನ್ನುಸಿರಲಿ ಬೆರೆತು ಹೋದ ನಿನ್ನೆಸರು
ನನ್ನುಸಿರಲಿ ಬೆರೆತಿದೆಯಲ್ಲಾ..!!-
ಕಿರುನಗೆ ಬೀರುವ ಒರಟ
ನಿನ್ನ ಮಾತಲ್ಲಿಲ್ಲ ಸಗಟ
ಒಲವಿಗೆ ನೀ ಮುತ್ತಿನ ಮುಕುಟ
ನಿನ್ನಿಂದಲೇ ಗೆಳೆಯ ಪಡೆಯುತಿರುವೆ
ಪ್ರೀತಿಯ ತಾಲೀಮೆಂಬುದು ದಿಟ..!-
ನನಗೇನೋ ಬೇಡವೆನ್ನಿಸುತ್ತಿದೆ, ಆದ್ರೂ ಬರ್ತೀನಿ ಅಂದ್ರೆ ಅಗತ್ಯವಾಗಿ ಸಿಗಬಹುದು ಅಲ್ಲಿ ಒಂದು ಮನೆ
ಬಂದವರನ್ನು ಬೇಡವೆನ್ನಲ್ಲ ಯಾಕಂದ್ರೆ ಅದು ಮನೋರೋಗಿಗಳ ದವಾಖಾನೆ..-
ನನ್ನ ಮ್ಯಾಲೆ ನಿಂದ್ಯಾಕೊ ಕಣ್ಣು ಓ ಮಂಗ
ಮಾಡಬೇಕು ಅಂದುಕೊಂಡಿದ್ದೀಯಾ ನೀ ನನ್ನ ಸಂಘ
ಇಡೀ ಊರ ಹೇಳುತ್ತಾ ನಾನು ಪಕ್ಕ ಬಜಾರಿ ಗಂಗ
ನನ್ನ ಸುದ್ದಿಗೆ ಬಂದರೆ ಆಗ್ತಿ ನೋಡು ನೀನು ಹುಚ್ಚುಮಂಗ
ನಮ್ಮ ಊರ ಹೆಸರು ಹಿಂದರಿಂದ ಆದರೂ ಓದು
ಮುಂದರಿಂದ ಆದರೂ ಓದು
ಬಣ್ಣ ಬದಲಿಸಿ ಬದುಕುವವರಲ್ಲ ನಾವು ಇರುತ್ತೀವಿ ಇದ್ದಿದ್ದು ಇದ್ದಂಗ
ಮುದ್ದಣ ಕಾಶಿ, ಅಂಧ ಅನಾಥರ ಆಶ್ರಯತಾಣ,
ಪುಟ್ಟರಾಜ ಗವಾಯಿಗಳು ನೆಲೆಸಿದಂತ ನಮ್ಮ ಊರು ಗದಗ
☛✍ಸಿದ್ದರಾಜಗುರು ಎಸ್ ವಡ್ನವರ, ಹೆಸ್ಕಾಂ ಗದಗ☛✍
-
ನನ್ನರಸಿ ನನ್ನ ಮನದರಸಿ
ನನ್ನುದ್ದರಿಸಲು ಕಳುಸಿಹನು
ಆ ದೇವರೆ ಹರಸಿ,
ಹಚ್ಚಿದ ತೇಪೆ ಹರಿದ ಚಾಪೆ
ನನ್ನದಾಗಿತ್ತು ಬಾಳು
ಎಲ್ಲಿಂದಲೋ ಬಂದೆ
ದೇವತೆಯಾಗಿ ನಿಂದೆ
ಅರ್ಥವಿಲ್ಲದ ಬಾಳಿಗೆ
ನಿಸ್ವಾರ್ಥ ಸೇವೆಗೈಯುವ
ಮನದೋಡತಿ ನೀನಾದೆ
ಸುತ್ತಲು ತುಂಬಿದ ಕತ್ತಲು ಸರಿಸಲು
ಕರುಣೆಯ ಜ್ಯೋತಿ ಬೆಳಗಿಸಲು
ಬಂದವಳು ನೀನೇ ಮನೆಗೆ
ಬಾಗ್ಯದ ಬಲಗಾಲಿಟ್ಟು
ಅಂದಿನಿಂದ ಇಂದಿನವರೆಗೆ
ಎಳ್ಳಷ್ಟೂ ಅಹಂ ಇಲ್ಲದ
ಸ್ವಯಂ ಚಾರ್ತುರತೆ ತಂದ
ನನ್ನ ಅರ್ಧಾಂಗಿ,
ನೀನೇ ನನ್ನ ಕೋಮಲಾಂಗಿ
ಇಂದು ನಮ್ಮ
ವಿವಾಹ ವಾರ್ಷಿಕೋತ್ಸವ ಕಣೆ
ನೀನು ನನಗೆ ನಾನು ನಿನಗೆ
ನಗುನಗುತ ಹೀಗೆ
ಇರೋಣ ಕೊನೆವರೆಗೆ..!
--✍ಗುರು ಡಿ.
-
ಡಿಯರ್, ಜೋಗಿ ಸರ್,
ನಾನು ಯುವರ್ ಕೋಟ್ ನಲ್ಲಿ
ಬರೆಯಲು ಶುರುಮಾಡಿ
ಇಂದಿಗೆ ಒಂದು ವರ್ಷವಾಯ್ತು,
ನಿಮ್ಮ ಆ್ಯಪ್ ಮುಖಾಂತರ
ನಾನೊಂದು ಹೊಸಲೋಕವ ಕಂಡೆ,
ಲವ್ ಯೂ ಜೋಗಿ,
ಮತ್ತು ನನ್ನೆಲ್ಲಾ ಯುವರ್ ಕೋಟ್ ನ
ಸಹೋದರ/ಸಹೋದರಿಯರಿಗೆ🙏🏻💕
👇( ರೀಡ್ ಕ್ಯಾಪ್ಷನ್ ) 👇-
ನಾನು ಸ್ವಲ್ಪ ವಾಚಾಳಿ
ನಿಲ್ಲಿಸೆಂದು ಹೇಳುವನು
ನನ್ನವನು ತುರುಕಿ
ಬಾಯಿತುಂಬಾ ಚಕ್ಕುಲಿ..!-