QUOTES ON #ಗಂಡಹೆಂಡತಿ

#ಗಂಡಹೆಂಡತಿ quotes

Trending | Latest
23 APR 2019 AT 9:28

ಸಕಲ ಸದ್ಗುಣಗಳ ಸರದಾರ
ಸಂಸಾರದ ನೌಕೆ
ಹೆಂಡತಿಯ ಹಣೆಯ ಸಿಂದೂರ
ಹೆಂಡತಿಯ ಸರ್ವಸ್ವ
ಕನಸುಗಳ ಸಾಕಾರ ಮೂರ್ತಿ
ಸಂಸಾರದ ಯಶಸ್ಸಿನ ಚಿಲುಮೆ
ಭರವಸೆಗಳ ಬೆಳಕು
ಜೀವದ ಸೆಲೆ
ಹೆಂಡತಿಯ ಬೇಕು ಬೇಡಗಳ ಸೇವಕ
ಬಾಳ ಬಂಡಿಯ ಹೀರೋ





ಗಂಡನ ಎಲ್ಲಾ ಕೆಲಸಗಳಿಗೂ ಬೆನ್ನೆಲುಬು
ಸಂಸಾರದ ಸೌಭಾಗ್ಯ
ಗಂಡಿನ ಬಾಳಲಿ ನಂದಾದೀಪ
ಗಂಡನ ಯಶಸ್ಸಿಗೆ ಸೂತ್ರದಾರಿ
ಮನೆಯೊಡತಿಯ ಜವಬ್ದಾರಿ
ಕಷ್ಟ ಸುಖಗಳ ಮಿಶ್ರಣದಾರಿ
ನೋವು ನಲಿವುಗಳ ಭಾಗಿದಾರಿ
ಸಂಸಾರ ಸಮತೋಲದಿ ಸಹಭಾಗಿತ್ವದಾರಿ
ಹೆಂಡತಿ ಗಂಡನಿಗೆ ಬಿಲಿಯನ್ ಹಣಕ್ಕೂ ಮಿಗಿಲು
ಮನೆಯ ಮಹಾಲಕ್ಷ್ಮಿ ಗಂಡನಿಗೆ ಅರ್ಧಾಂಗಿನಿ

-



ಸರ್ವಸ್ವವೂ ನೀನೆ ಎಂದು ನಂಬಿ ನಿನ್ನೊಂದಿಗೆ ಸಪ್ತಪದಿ ತುಳಿಯುವವಳು 'ಹೆಂಡತಿ'💝
ಆ ನಂಬಿಕೆಯನ್ನ ಹುಸಿಗೊಳಿಸದೆ, ನಿನ್ನ ಪಡೆದ ನಾನು ಅದೃಷ್ಟವಂತೆ ಎಂದು ಗರ್ವದಿಂದ ಹೇಳಿಕೊಳ್ಳುವ ಹಾಗೆ ಮಾಡುವವನು 'ಗಂಡ'🧡

-



ಹೆಂಡತಿ ಯಾವತ್ತಿದ್ರು ಹೆಂಡತಿನೇ😎
ನೀವ್ ಯಾವ್ ಊರಿಗೆ ರಾಜ ಆದ್ರೇನು
ಅದೆಷ್ಟು ಜನಗಳ ಮುಂದೆ ಯಜಮಾನ ಆದ್ರೇನು
ಹೆಂಡತಿ ಮುಂದೆ ಬರೀ ಅವ್ಳ್ ಗಂಡ ಅಷ್ಟೇ😉

-


1 JUL 2020 AT 11:56

ಗಂಡನ ನೆಮ್ಮದಿ ಕಿತ್ತುಕೊಳ್ಳೋದು ಹೆಂಡತಿಯ ಆಜನ್ಮಸಿದ್ಧ ಹಕ್ಕು ಅಂತ ನನ್ನ ಸ್ನೇಹಿತೆ ಹೇಳಿದ್ಲು ಮರ್ರೆ🙄. ನಾ ಹಂಗೆಲ್ಲ ಮಾಡಂಗಿಲ್ಲ, ಸ್ಯಾನೆ ಒಳ್ಳೇವಳು ನಾ ಅಂದೆ😌. ಮದುವೆ ಆದಮೇಲೆ ನಿಂಗು ಗೊತ್ತಾಗ್ತದ ಬಿಡು ಅಂತ ಬೈದುಬಿಟ್ಲು ಮರ್ರೆ😒.

-



ತಿನ್ನೋ ತಟ್ಟೆಯಲ್ಲಿ ಕೂದಲು ಸಿಕ್ಕಿತೆಂದು ಹೆಂಡತಿಯ ಮೇಲೆ ಕೋಪ ಬೀಳುವವನಲ್ಲ ಗಂಡ ಅಂದ್ರೆ,
ಕೂದಲು ಉದುರುತಿದೆ ತಲೆಗೆ ಯಾವ ಎಣ್ಣೆ ತಂದು ಕೊಡಬೇಕು ಅವಳಿಗೆ ಅಂತ ಯೋಚಿಸುವವನು ನಿಜವಾದ ಗಂಡ.

-


3 MAY 2019 AT 11:12

ದೇವರು ಎಲ್ಲಾಕಡೆ ಇರೋಕಾಗಲ್ಲ
ಅದಕ್ಕೆ ತಾಯಿ ಕೊಟ್ಟಿದ್ದಾನೆ.
ಆ ತಾಯಿ ಸದಾ ಮಗನ ಜೊತೆ ಇರೋಕಾಗಲ್ಲ
ಅದಕ್ಕೆ ಹೆಂಡತಿಯನ್ನು ಕೊಟ್ಟಿದ್ದಾನೆ.
ಆ ಹೆಂಡತಿ ಅವಳ ಪ್ರೀತಿಯಿಂದ ಸದಾ ಗಂಡನ ಮನಸ್ಸಿನಲ್ಲಿರುತ್ತಾಳೆ...(ದೇವರು+ತಾಯಿ+ಪ್ರೀತಿ=ಹೆಂಡತಿ)
ದೇವರೊಳಗಿನ ದೈವತ್ವ, ತಾಯಿಯೊಳಗಿನ ಮಾತೃತ್ವ
ಪ್ರೀತಿಯೊಳಗಿನ ಅಮರತ್ವ ಹೆಂಡತಿಯಲ್ಲಿ ಕಾಣಬೇಕೆಂಬ ಅಥ೯...

-


19 MAY 2021 AT 10:41

ಈ ಹೆಂಡ್ತೀರು ನೋಡೋಕೆ ಸ್ವಲ್ಪ ಚಂದ ಇದ್ರೆ ಗಂಡಂದಿರಿಗೆ ಯಾವಾಗ್ಲೂ ಕಷ್ಟನಪ್ಪ, ಯಾಕಂದ್ರೆ ಉದಾಹರಣೆಗೆ ಯಾವ್ದಾದ್ರು ಫಂಕ್ಷನ್ಗೆ ಹೋದ್ರೆ ಒಂದು ಕಣ್ಣು ಹೆಂಡ್ತಿ ಮೇಲೆ ಮತ್ತೊಂದು ಕಣ್ಣನ್ನ ಸಭಿಕರ ಮೇಲೆ ಇಟ್ಕೊಬೇಕಪ್ಪ, ಸರಿಯಾಗಿ ಫಂಕ್ಷನ್ ನೋಡೋಕೂ ಆಗಲ್ಲ ಪಾಪ..

-



💥 Breaking News 💥

ಮನೆಯಲ್ಲಿ ಇದ್ದು ಇದ್ದು ಹೆಂಡತಿಯ ಮುಖಕ್ಕಿಂತ
ಗಂಡನ ಮುಖ ಬೆಳ್ಳಗಾಗಿದೆ ಅಂತ ಗಂಡನ ಮೇಲೆ
ಲಟ್ಟಣಿಗೆಯಿಂದ ಹೆಂಡತಿ ದಾಳಿ.
😁😁😁

-



ಪ್ರತಿ ಹೆಣ್ಣು ತಾನ್ ಮದುವೆ ಆಗೋ
ಹುಡುಗ ,ಪ್ರಪಂಚದೆದುರು
ತಲೆ ಎತ್ತಿ ನಡಿಯೋ ಗೌರವಾನ್ವಿತ ವ್ಯಕ್ತಿಯಾಗಿ,
ತನ್ನ ಪ್ರೀತಿಯ ಮುಂದೆ ತಲೆಬಾಗಿ ನಡಿಯೋ
ಗಂಡು, ಗಂಡನಾಗ್ಲಿ ಅಂತ ಬಯಸ್ತಾಳೆ ವಿನಃ,
ಹೊರಗಿನವರ ಮುಂದೆ ತಲೆ ಬಾಗಿ ತನ್ನೆದುರು
ತಲೆ ಎತ್ತಿ ದರ್ಪ ತೋರಿಸೋ ಗುಲಾಮನಂತವನ್ನ
ಎಂದೂ ಬಯಸೋದಿಲ್ಲ..!!

-



ದುಡಿಯುವನು ದಿನ
ಪೂರ್ತಿ ದಣಿವಾದರು ನಗುವನು
ನಗಿಸುವನು ತನ್ನವರ ನಗುವನೇ
ಬಯಸುವನು ಕೊನೆಗೊಮ್ಮೆ ಮಗುವಂತೆ
ಮೌನವಾಗಿ ಹಂಬಲಿಸುವನು ಪ್ರೀತಿಗಾಗಿ
ಮಗುವಾಗುವನು ಮಡದಿಯ ಮಡಿಲಲ್ಲಿ..!!♥️
ನಗುವಳು ನೋವಲ್ಲೂ ,
ತನ್ನವರ ನಗುವಲ್ಲೇ ತನ್ನ ನೋವ
ಮರೆವಳು ,ಅಪೇಕ್ಷೆ ಮಾಡದೆ ಆಸರೆಯಾಗಿ
ನಿಲ್ಲುವಳು, ಗಂಡನನ್ನೇ ದೇವರೆನ್ನುವಳು
ಅವನ ಮಗುವಾಗಿಸುವಳು ತನ್ನ ಮಡಿಲಲ್ಲಿ
ತಾಯಾಗಿ ನಿಲ್ಲುವಳು ಅವನ ಮನದಲ್ಲಿ..!!🤗

-