QUOTES ON #ಕ್ರೋಧಿನಾಮಸಂವತ್ಸರ

#ಕ್ರೋಧಿನಾಮಸಂವತ್ಸರ quotes

Trending | Latest
29 MAR AT 19:27

ಶೋಧಿಸಿದೆ ಜನರ ಸುಖ ದುಃಖಗಳಿಂದ
ಓ ಕ್ರೋಧಿ!..
ಯಾವುದಾದರೂ ಸರಿ ನಾವೆಲ್ಲ ಕರ್ಮಬಂಧಿ,
ವೈರುಧ್ಯ ಗಳಿಂದಲೇ ಜೀವನದಲ್ಲಿ
ಪಾವನ-ಅಪವಿತ್ರಗಳ ಸಂಧಿ.
ಹೋಗಿ ಬಾ ಈಗ,
ಚಕ್ರನೇಮೀಚಕ್ರದಲ್ಲಿ ಮತ್ತೆ ನಿನ್ನ ಆಗಮನ!
ನಾನಿರದಿರುವುದಿಲ್ಲ, ಇರುವರು ಹೊಸ ಜನ
ಮತ್ತೆ ನೀ ಬಂದಾಗ ನೆನೆಸಿಕೋ ನನ್ನ!. 🙏

-



ಯುಗಾದಿ ಹಬ್ಬವು ಎಲ್ಲರಿಗೂ ಒಳಿತನ್ನೇ ಮಾಡಲಿ, ಮಾನವೀಯ ಮೌಲ್ಯಗಳು ಉಳಿಯಲಿ, ಸಾಮರಸ್ಯದ ಬದುಕು ನೆಮ್ಮದಿಯ ನೀಡಲಿ, ಪರಸ್ಪರ ನಂಬಿಕೆಗಳು ಇರಲಿ, ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ, ಸಿಹಿ ಕಹಿಗಳ ಮಿಲನವು ಜೀವನವ ಸಮಚಿತ್ತದಿಂದ ಸಾಗಿಸುವ ನಿಟ್ಟಿನಲ್ಲಿ ನಮಗೆ ವಿಶ್ವಾಸ ಮೂಡಿಸಲಿ. ಸರ್ವರಿಗೂ ಕ್ರೋಧಿ ನಾಮ ಸಂವತ್ಸರದ ಹೃತ್ಪೂರ್ವಕ ಶುಭಾಶಯಗಳು.

-


9 APR 2024 AT 6:21

ಹಳೇ ಬೇರು ಹೊಸ ಚಿಗುರು
ಸಹಬಾಳ್ವೆಯೇ ನಮ್ಮ ಉಸಿರು
ಬೇವು-ಬೆಲ್ಲ ಸವಿಯೋಣ ಎಲ್ಲರು
ಸಮನ್ವಯದಿ ಬಾಳೋಣ ಒಲವ ಹಸಿರು
ಶ್ರೀ ಕ್ರೋಧಿ ನಾಮ ಸಂವತ್ಸರವು
ಸರ್ವರಿಗೂ ಶುಭವನ್ನು ತರಲಿ
ಯುಗಾದಿ ಹಬ್ಬದ ಶುಭಾಶಯಗಳು.

-


9 APR 2024 AT 7:35

#ಯುಗಾದಿ೨೦೨೪ #ಕ್ರೋಧಿನಾಮಸಂವತ್ಸರ #ಕಂದಪದ್ಯ
ಯುಗಾದಿ ಹಬ್ಬವು ಬಂದಿತು
ವಸಂತಕಾಲದ ಮಾವಿನ ಸೊಬಗನು ತೋರುತ
ಚಂದದ ಹರ್ಷವ ತಂದಿತು
ಪಿಕಗಳ ಕುಹುಕುಹು ಧ್ವನಿಯನು ಪ್ರಸಾರಮಾಡುತ

ಮನೆಯಲಿ ಮನದಲಿ ನಂದವು
ಹಬ್ಬದ ಸಡಗರ ಹರಡುತ ಹೊಸತನ ಅರಳುತ
ಮರಳಿತು ವರ್ಷವಿನ್ನೊಂದು
ಸೆಳೆಯುವ ಚೈತ್ರದ ಪರಿಮಳ ಎಲ್ಲೆಡೆ ಚಿಮ್ಮುತ

ಕಟ್ಟಿದ ಹಸಿರಿನ ತೋರಣ
ಪರ್ವದ ಶುಭವನು ಬೆಳಗುವ ನವೀನ ಸಂಭ್ರಮ
ಬೇವುಬೆಲ್ಲಗಳ ಮಿಲನ
ಸವಿಯುತ ಅರಿತೆವು ಬಾಳಿನ ಅಸ್ಥಿರತೆಯನ್ನ

ಸಂಜೆಯ ಪಂಚಾಂಗ ಶ್ರವಣ
ಹೇಳಿತು ದೇಶದ ವಿಶ್ವದ ಪರಿಸ್ಥಿತಿಯನ್ನ
ಎಲ್ಲರ ಕ್ಷೇಮವ ಬೇಡುತ
ಕೈಗಳು ಜೋಡಿಸಿ ಕೃಷ್ಣನ ಅಭಿವಂದಿಸೋಣ

ಆಯಿತು ಕ್ರೋಧಿಯಾಗಮನ
ಶೋಭನದಿಂದಲಿ ಶುಭವನು ಕೊಡುತ್ತ ಲೋಕಕೆ
ಅಕ್ರೋಧವ ನಾವು ಕಲೆಯಲು
ಜಗದೋದ್ಧಾರನ ರೂಪವ ಸ್ಮರಿಸುತ ನಿತ್ಯವು

🎊ಎಲ್ಲರಿಗೂ ಕ್ರೋಧಿ ನಾಮ ಸಂವತ್ಸರದ ಶುಭಾಶಯಗಳು🎊

-


9 APR 2024 AT 9:10

ಜೀವನ ಪಂಚಾಂಗದಲಿ ಏರುಪೇರಾದ ಸಂಗತಿಗಳು
ಸರಿಯಾಗಿ ಕೂಡಿಬಂದು ಶುಭತರಲಿ.
ಮನಸೆಂಬ ಚಂದ್ರ ಸದಾ ತಂಪಾಗಿ ಬೆಳಗಲಿ.
ಕನಸೆಂಬ ಸೂರ್ಯ ಸದಾ ಉಲ್ಲಾಸ ಉತ್ತೇಜವನೀಯಯಲಿ.
ಮಿತ್ರರು ಬುಧಜನರ ಸಂಯೋಗ,
ಗುರು-ಹಿರಿ-ಕಿರಿಯರ ಸಹಯೋಗದಲಿ ಮುದವಿರಲಿ.
ಬೇವಿರಲಿ, ಬೆಲ್ಲವಿರಲಿ, ನೋವಿರಲಿ ನಲಿವಿರಲಿ ಬಾಳೆಂಬ ಪಥದಲ್ಲಿ, ದಿನವೆಂಬ ರಥ ನಿಲ್ಲದೇ ಓಡುತಿರಲಿ..


ಚಾಂದ್ರಮಾನ ಯುಗಾದಿ ಹಾಗೂ ನೂತನ ಕ್ರೋಧಿ ನಾಮ ಸಂವತ್ಸರದ ಶುಭಾಶಯಗಳು..

-