QUOTES ON #ಕಂದಪದ್ಯ

#ಕಂದಪದ್ಯ quotes

Trending | Latest
26 MAY 2020 AT 19:47

ಕಂದ ಪದ್ಯ

ಛಂದೋಬದಿ

ಮಲ್ಲಿಯ ಕಾತರ
ನಲ್ಲನ ನೋಡುವ ಆತುರದಿ
ಕಾದಿರುವ ಮನ

(Read Caption

-


5 JUN 2019 AT 6:42

-


13 DEC 2019 AT 2:13

-


14 JUL 2019 AT 11:18

-


13 SEP 2020 AT 12:42

"ಕಂದ ಪದ್ಯ"







-


7 FEB 2019 AT 1:18

-


21 JUL 2024 AT 9:11

#ಗುರುಪೌರ್ಣಮಿ೨೦೨೪ #ಕಂದಪದ್ಯ
ಪದದೊಳು ಪದಗಳ ಬರೆಯಲು
ಶಕ್ತಿಯ ತುಂಬಿದ ಕಾಣುವ ದೈವನ ಭಜಿಸುವೆ
ಜ್ಞಾನದ ಬೆಳಕಲಿ ಒಯ್ದಿದ
ಜ್ಞಾತನು ಜಗವನು ಗೆಲ್ಲುವ ಧೈರ್ಯವ ಕೊಟ್ಟನು

ಪಥವನು ತೋರಿದ ನಾಥನ
ನೆನೆಯುತ ಸಾರುವೆ ನಿತ್ಯವು ನುನ್ನತ ಭಕುತಿಯ
ಕಾವಳನಳಿಸುವ ಪ್ರಖರನ
ಕೋಮಲ ಪಾದವ ವಂದಿಸಿ ಬೇಡುವೆ ಯುಕ್ತಿಯ

ಅಜ್ಞವನಳಿಸುವ ತಜ್ಞರ
ತೇಜವು ನಮ್ಮನು ಕಾಯಲಿ ಪೊರೆಯಲಿ
ಎನ್ನುತ ಪ್ರಾಜ್ಞನ ಹೃದಯದಿ ನಿಲ್ಲಿಸಿ
ಮಾರ್ಗವ ಸೋಸಿದ ಗುರುವಿಗೆ ನೀಡುವೆ ಪ್ರಣಾಮ

-


9 APR 2024 AT 7:35

#ಯುಗಾದಿ೨೦೨೪ #ಕ್ರೋಧಿನಾಮಸಂವತ್ಸರ #ಕಂದಪದ್ಯ
ಯುಗಾದಿ ಹಬ್ಬವು ಬಂದಿತು
ವಸಂತಕಾಲದ ಮಾವಿನ ಸೊಬಗನು ತೋರುತ
ಚಂದದ ಹರ್ಷವ ತಂದಿತು
ಪಿಕಗಳ ಕುಹುಕುಹು ಧ್ವನಿಯನು ಪ್ರಸಾರಮಾಡುತ

ಮನೆಯಲಿ ಮನದಲಿ ನಂದವು
ಹಬ್ಬದ ಸಡಗರ ಹರಡುತ ಹೊಸತನ ಅರಳುತ
ಮರಳಿತು ವರ್ಷವಿನ್ನೊಂದು
ಸೆಳೆಯುವ ಚೈತ್ರದ ಪರಿಮಳ ಎಲ್ಲೆಡೆ ಚಿಮ್ಮುತ

ಕಟ್ಟಿದ ಹಸಿರಿನ ತೋರಣ
ಪರ್ವದ ಶುಭವನು ಬೆಳಗುವ ನವೀನ ಸಂಭ್ರಮ
ಬೇವುಬೆಲ್ಲಗಳ ಮಿಲನ
ಸವಿಯುತ ಅರಿತೆವು ಬಾಳಿನ ಅಸ್ಥಿರತೆಯನ್ನ

ಸಂಜೆಯ ಪಂಚಾಂಗ ಶ್ರವಣ
ಹೇಳಿತು ದೇಶದ ವಿಶ್ವದ ಪರಿಸ್ಥಿತಿಯನ್ನ
ಎಲ್ಲರ ಕ್ಷೇಮವ ಬೇಡುತ
ಕೈಗಳು ಜೋಡಿಸಿ ಕೃಷ್ಣನ ಅಭಿವಂದಿಸೋಣ

ಆಯಿತು ಕ್ರೋಧಿಯಾಗಮನ
ಶೋಭನದಿಂದಲಿ ಶುಭವನು ಕೊಡುತ್ತ ಲೋಕಕೆ
ಅಕ್ರೋಧವ ನಾವು ಕಲೆಯಲು
ಜಗದೋದ್ಧಾರನ ರೂಪವ ಸ್ಮರಿಸುತ ನಿತ್ಯವು

🎊ಎಲ್ಲರಿಗೂ ಕ್ರೋಧಿ ನಾಮ ಸಂವತ್ಸರದ ಶುಭಾಶಯಗಳು🎊

-



ಮುಗಿಯತಲಿದೆ ಹಳೆಯ ವರುಷ
ನೆನಪುಗಳು ಸಿಹಿಕಹಿಗಳಿರಲಿ ಮುಗಿಯಲಿ ಪಯಣ/
ಸ್ವಾಗತಿಸೋಣ ಹೊಸ ಹರುಷ
ಮತ್ತದೆ ಆಶಾಭಾವದ ಗುಂಗಿನ ನಶೆಯಲಿ//

-


16 SEP 2020 AT 11:45

" ಕಂದ ಪದ್ಯ "
ಶಿವಪಾರ್ವತಿ ನೀವು ನಮ್ಮ
ಮನೆ ದೇವರು ನಿಮಗೆ ಮೊದಲ ಪೂಜೆಯು ದಿನವೂ
ನಮ್ಮಯ ಕೆಲಸಕೆ ನಿಮ್ಮದೆ
ಆಶೀರ್ವಾದವು ನಮಗೆಂದೂ ಶ್ರೀ ರಕ್ಷೆಯು
✍️ಲಿಂಜರಮಿ,ಮಂಡ್ಯ

-