ಅವಳೆಂದರೆ
ಅಂಚಂಚಿಗೂ
ಅತಿ ಪ್ರೀತಿಯಂಚುವ
ಅಮರತ್ವದೊಳಗಿನ
ಅಪರೂಪದ
ಅವಲೋಕನ
ಅನುಗಾಲವೊಳೆವ
ಅನರ್ಘ್ಯರತ್ನ
ಅದ್ಭುತದೊಳಗಿನ
ಅವ್ಯವಚ್ಛಿನ್ನ
ಅಂತಃಕರಣ
ಅನುರಾಗದೊಳಗಿನ
ಅನನ್ಯತೆಯ
ಅವತರಣಿಕೆ
ಅಣಿಮುತ್ತುಗಳೊಗಿನ
ಅಭಿಸಾರಿಕೆ .!
ಅರಿತು ಅರಿಯಲಾರದ
ಆಕಾಂಕ್ಷೆಯೊಳಗಿನ
ಅನುಚಾಲಕಿ.!-
ಅವಳೆಂದರೆ,
ನನ್ನ ಮನಸ ಕದ್ದ ಕಿನ್ನರಿ,
ಕನಸಲ್ಲಿ ಬಂದು ಕಾಡೊ ಒಯ್ಯಾರಿ,
ಕಾಡಿಸಿ ಪೀಡಿಸಿ ನನ್ನ ಪ್ರೀತಿಸು
ಅನ್ನುವ ಸುಂದರಿ...❤️-
ಅವಳೆಂದರೆ ನನ್ನೀ ಮನಸಿನ Book ನಲ್ಲಿ
ನಿಲ್ಲದ ಕವಿತೆಯ ಸಾಲುಗಳ
ಪದಗಳಂತೆ....!
ಅವಳೆಂದರೆ ನನ್ನೀ ಕನಸನ್ನ Loot ಮಾಡುವ
ಕಲೆಗಾರಿಕೆಯ ಹೃದಯದ
ಗೆಳತಿಯಂತೆ....!
ಅವಳೆಂದರೆ ನನ್ನೀ ಕಣ್ಣಿನ Camera ದಲ್ಲಿ
ಸೆರೆಯಾಗುವ ಅದ್ಭುತ
ಚಿತ್ರಗಳಂತೆ....!-
ಅವಳೆಂದರೆ ಬೂಂದಿಲಾಡಿನ ಬಿಳಿ ಗೋಡಂಬಿ 🤩
ನಾನೆಂದರೆ ಅದೆ ಬೂಂದಿಲಾಡಿನ ಕಪ್ಪು ಲವಂಗ 😅-
ಅವನೆಂದರೆ
ನನ್ನೀ ಬರಹಗಳ
ಪದಗಳಲ್ಲಿ ಅಂಕುರಿಸುವ
ಸುಶ್ರಾವ್ಯ ಕಾವ್ಯ
ವಾಹಿಲದೊಂದಿಗೆ ಸದಾ
ಸುಗಂಧವ ಪಸರಿಸುವವ.!-
ಅವಳೆಂದರೆ ನನ್ನೀ ನೆನಪುಗಳಿಗು ಸತಾಯಿಸಿ
ನೆನಪಾಗುವ ಮನಸಿನ
ಕಾದಂಬರಿ..!!
ಅವಳೆಂದರೆ ನನ್ನೀ ಕನಸುಗಳಿಗು ನಿದ್ದೆ ಕೆಡಿಸಿ
ಕನಸಾಗುವ ಪ್ರೀತಿಯ
ನೀಲಾಂಬರಿ..!!
ಅವಳೆಂದರೆ ನನ್ನೀ ಒಲವುಗಳಿಗು ಕಾಯಿಸಿ
ಒಲವಾಗುವ ನೆನಪಿನ
ಕನಕಾಂಬರಿ..!!-
ಅವನೆಂದರೆ
ನಾನೇನ್ಹೇಳಿದರೂ
ಮನಸ್ಸಾರೆ ಒಪ್ಪುವ ಮುಗ್ದ
ಕುಸುಮದಂತವನು
ಮನಸ್ಸು ಜೇನಿನಂತೆ
ಮಾತು ಗಡಸು
ಹೃದಯ ಹೂವಿನಂತೆ ಮೃದು
ಹಣದ ವ್ಯಾಮೋಹವಿಲ್ಲದ
ಜಬರ್ದಸ್ತು ಜನಾನುರಾಗಿ
ಕೋಪದಲ್ಲೂ ಪ್ರೀತಿಯ
ಅರಳಿಸುವ ಮನೋಹರನೂ..-
ಅವಳೆಂದರೇ...
ಕ್ಷಣ ಕ್ಷಣಕ್ಕೂ ಅವನನ್ನು ಹಂಬಲಿಸುವವಳು;
ಅವನೆಂದರೇ...
ಮಾತು ಮಾತಿಗೂ ಅವಳನ್ನು ಸತಾಯಿಸುವವನು.-