ಸೋಲು ಅದೆಷ್ಟು ಕೆಟ್ಟ ಸಂಗತಿ ಎಂದರೆ,
ಹತ್ತಾರು ಅವಮಾನಗಳ ಮಧ್ಯೆ ಹಣ್ಣಾಗುವಂತಹದ್ದು...-
ಅವಮಾನಕ್ಕೆ ಬೆನ್ನು ತೋರಿಸಬೇಡಿ,
ಎದೆಯೊಳಗಿನ ಕನ್ನಡಿಗೆ ಆತ್ಮವಿಶ್ವಾಸದ ಛಾಯೆಯನ್ನು
ತಾಕೀಸಿ ಬದುಕನ್ನು ಪ್ರಕಾಶಿಸಿಕೊಳ್ಳಬೇಕಷ್ಟೇ...-
ಯಶಸ್ವಿನ ಹಿಂದೆ ಮಾತ್ರ
ಪರಿಶ್ರಮದ ಬೆವರು ಇರುವುದಿಲ್ಲ
ಸೋಲಿನ ಹಿಂದೆಯೂ ಹೇಳಿಕೊಳ್ಳಲಾರದಷ್ಟು
ಅವಮಾನದ ನೋವು ಇರುತ್ತವೆ.
ನಮ್ಮ ಸೋಲಿನ ಹಿಂದಿನ
ಪರಿಶ್ರಮವನ್ನು ಗೌರವಿಸೋಣ!
-
ಅವಮಾನಕೆ ಕಣ್ಣೀರು ಎಂಬ ಮೂರಕ್ಷರ ಮಾತ್ರ ಉತ್ತರವಾಗಿಲ್ಲ,
ಸಾಧನೆ ಎಂಬ ಮೂರಕ್ಷರವು ಉತ್ತರಿಸುತ್ತದೆ....-
ಸೋಲು ನನಗೆ ಅದೆಷ್ಟೋ ಮನಸ್ಸುಗಳ ಮನಸ್ಸಿನ ವ್ಯಾಪಾರವನ್ನು ಪರಿಚಯಿಸಿದ ಜೊತೆಗಾರ....
-
ಸೋತ ಬದುಕಿಗೆ ಅವಮಾನವೆಂಬುದು
ಮೆಟ್ಟಿದ ಹೊಸ ಚಪ್ಪಲಿಯಿದ್ದಂತೆ
ಹೆದರಿ ಕಣ್ಣೀರಿಟ್ಟು ಕಂಗಾಲಾಗದಿರು
ಮೊದಲೆರೆಡುಬಾರಿ ಗಾಯವಾಗಿ
ಪ್ರಯಾಸವೆನಿಸುವುದಷ್ಟೇ,,
ಬರುಬರುತ್ತಾ ಬಳಲಿದ ಬದುಕಿಗೆ ಅಭ್ಯಾಸವಾಗಿ
ನೋವಿನ ಜಾಡಿಗೆ ಪ್ರತಿಕ್ರಿಯಿಸದೆ
ಹೇಗೆ ಮುನ್ನಡೆಯಬೇಕೆಂದುವದನ್ನು ಕಲಿಸಿಕೊಡುತ್ತೆ!!
✍️ಶಿಲ್ಪಾ ಪಾಲ್ಕಿ💞-
ನಮಗೆ ಯಾವ ಜಾಗದಲ್ಲಿ ಕಿಂಚಿತ್ತೂ ಮರ್ಯಾದೆ ಸಿಗುವುದಿಲ್ಲವೋ ಆ ಜಾಗಕ್ಕೆ ಎಂದಿಗೂ ಕಾಲು ಇಡಲೇ ಬಾರದು.... ಯಾಕೆಂದರೆ ಬೆಲೆ ಸಿಗದ ಕಡೆ ನಾವು ಹೋದರೆ ನಮಗೆ ನಾವೇ ಅವಮಾನಿಸಿ ಕೊಂಡಂತೆ ಹೌದಲ್ವಾ.....
-