ಭಾರತದ ನಿರ್ದೇಶಕರು.😍
-
ಜಾತಿ- ಗೀತಿ ಇತ್ಯಾದಿ ಕಪ್ಪು ಚುಕ್ಕಿಗಳಿಗೆ
ನೀಲಿ ಬಣ್ಣ ಹೊಡ್ದೋರು....
ಅಜ್ಞಾನದ ಕತ್ತಲೆಯ ಮನ್ಸಿಗೆ ಪುಸ್ತಕಗಳೇ
ಲೈಟ್ಗಳು ಅಂತ ತಿಳುಸ್ದೋರು....
ಸಂವಿಧಾನ, ಸ್ತ್ರೀಸ್ವಾತಂತ್ರ್ಯ,ಸಮಾನತೆ
ಹಿಂಗೇ ದೇಶಕ್ಕೆ ಕೊಟ್ರು ಅದೆಷ್ಟೋ ವಿಷ್ಯ....
ಶೋಷಣೆ.ಅವಮಾನ,ಹಿಂಸೆ,ತಿರಸ್ಕಾರ
ಹಿಂಗೇ... ನೊಂದಿದ್ದು ಎಷ್ಟು ಆ ಮನುಷ್ಯ....
- ಅನುಷ್-
ಸತ್ಯ ಏಕಾಂಗಿಯಾದರೂ,, ಸಾವಿರಾರು ಸುಳ್ಳುಗಳನ್ನ ಸೋಲಿಸುವ ಪರಮಶಕ್ತಿ ಇದ್ದಂತೆ
ಮತ್ತು ಕೊನೆಗೆ ಗೆಲ್ಲುವುದು ಸತ್ಯ, ಸಾವಿರಾರು ಸುಳ್ಳುಗಳನ್ನ ಏಕಾಂಗಿಯನ್ನಾಗಿಸಿಯೇ...-
ಶೋಷಣೆಯ ಬಲಿಷ್ಠ ಸಮಾಜದಲ್ಲಂದು ಏಕತೆಯ ಸಂಕೇತ ಆಕಾಶದತ್ತ ತೋರಿದ ಬಲಿಷ್ಠ ಹೃದಯವೇ
ಈ ನೀಲಿ ವಜ್ರ-
ನಾನು ಈ ದೇಶದ ಪ್ರತಿ ಕಣದಲ್ಲು,
ಪ್ರತಿ ಕ್ಷಣದಲ್ಲೂ ನೆಲೆಸಿದ್ದೇನೆ.
ಅದಕ್ಕಿಂತ ಹೆಚ್ಚಾಗಿ ನಮ್ಮ ದಲಿತರಲ್ಲಿ,
ಅವರ ಉದ್ಧಾರದಲ್ಲಿ, ಅವರ ಹೋರಾಟಗಳಲ್ಲಿ
ಸದಾ ಜೀವಂತವಾಗಿದ್ದೇನೆ.-
ರೋಡಲ್ಲಿ ಚಿಂದಿ ಆಯುತ್ತಿದ್ದವರನ್ನು
ಸೂಟು ಬೂಟು ಕೋಟು ಹಾಕಿಸಿ
ಸುಪ್ರೀಂಕೋರ್ಟ್ ಕುರ್ಚಿ ಮೇಲೆ
ಕೂರಿಸಿದ ಸೋಶಿಯಲ್ ಫೈಟರ್ರು.
ಒಂದು ವರ್ಗದ ಕಾಲು ಒತ್ತಿಕೊಂಡು
ಜೀತಗಾರಿಕೆ ಮಾಡುತ್ತಿದ್ದ ಜೀವಗಳನ್ನು
ವಿಮುಕ್ತಿಗೊಳಿಸಿದ ಗಾಡ ಫಾದರ್ರು.
ಗಂಡಿನಷ್ಟೆ ಹೆಣ್ಣಿಗೂ ಸ್ವಾತಂತ್ರ್ಯದ
ಹಕ್ಕು ಕೊಟ್ಟ ಈಕ್ವಾಲಿಟಿ ಸ್ಟಾರ್ರು.
ಪ್ರೀತ್ಸೋರಿಗೆ ಗೊತ್ತು ಇವರೆಂತ ಸಂಪತ್ತು.
ವಿರೋಧಿಗಳಿಗೂ ಗೊತ್ತು ಇವರ ವಿದ್ವತ್ತು..
ಎನ್ನ ಹಾರ್ಟಿನ ಅಪಧಮನಿ ಅಭಿಧಮನಿ
ಡಾ. ಬಾಬಾಸಾಹೇಬ ಅಂಬೇಡ್ಕರ್ರು..❤️-
ಅಮವಾಸ್ಯೆ ಕುಡಿದು ಬೆಳದಿಂಗಳು ಕೊಟ್ಟವ
ಹಸಿದು ಮಲಗಿದ ಬಡಪಾಯಿಗಳಿಗೆ
ಆಶಾವಾದದ ಹೋಳಿಗೆ ಉಣಿಸಿದವ
ಚಿಂದಿ ಬಟ್ಟೆ ಹಾಕ್ತಿದ್ದ ಬಡಕಲು ದೇಹಗಳಿಗೆ
ಸೂಟು ಬೂಟು ತೊಡಿಸಿ ಗೌರವ ಹೆಚ್ಚಿಸಿದವ
ವಿದ್ಯೆ ಇಲ್ಲದೆ ತೊಳಲಾಡ್ತಿದ್ದ ಜೀವಗಳಿಗೆ
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು
ನೀಡಿದವ..
ಜೀವ ವಿರೋಧಿ ಮನು'ತ್ವ ಕಿತ್ತಾಕಿ
ಜೀವ ಪರ ಮನುಷ್ಯ'ತ್ವ ಚಿಗುರಿಸಿದವ
-
ಜೀವನದಲ್ಲಿ ಸಮಾಜದ ಮದ್ಯೆ ಕಲ್ಲಿನಂತೆ ಗಟ್ಟಿಯಾಗಿರು,
ಆದರೆ ಕಾಲ ಕೆಳಗಿನ ಕಲ್ಲಿನಂತಲ್ಲ, ಕೆತ್ತಿದರೆ ಮೂರ್ತಿಯಾಗುವಂತ ಕಲ್ಲಿನಂತೆ..
ಆಗ ನೋಡು ನಿಲ್ಲುವರು ಎಲ್ಲ ಬಂದು ವಂದಿಸುವರು ನಿನ್ನ ಮುಂದೆ.
-"💙ನಿಲಿವಜ್ರ💙"-
ಅಂದು,,,
ಜಗವೆಲ್ಲ ಮಲಗಿರಲು ಇವನೊಬ್ಬ ಎದ್ದಿದ್ದ.
ದೇಶವೆಲ್ಲ ಅಜ್ಞಾನದ ಕತ್ತಲಲ್ಲಿ
ಮಲಗಿ ನಿದ್ರಿಸುತ್ತಿರುವಾಗ,
ಆ ಕತ್ತಲನ್ನು ಕಳೆಯುವ ಜ್ಞಾನದ ಬೆಳಕಿನಲ್ಲಿ ಎಚ್ಚರವಾಗಿದ್ದ.-