ಸುಡುಗಾಡು ಸುಂದ್ರ   (Dk Nandkumar 🍃)
532 Followers · 40 Following

read more
Joined 24 September 2017


read more
Joined 24 September 2017

ಸಿಂಗಲ್ ದಿಲ್ ಗೆ ದಿನಾ ಒಲವಿನ ಆಕ್ಸಿಡೆಂಟು.
ಕಿಸೆಲ್ಲಿರೊ ಪರ್ಸು ಹಳೆದಾಯ್ತು..
ಬೈಕ್ ಸೀಟು ಹರಿದು ಹಳ್ಳ ಹಿಡ್ದಿದಾಯ್ತೂ
ಬೆಳ್ಳಗೆ ಕೂದ್ಲಿಗೆ ಕಲರ್ರ್ ಹೊಡ್ದಿದಾಯ್ತೂ..
ಇಷ್ಟಾದ್ರು ಹಾರ್ಟಿಗೆ ಯಾವ ಪುಣ್ಯಾತ
ಗಿತ್ತಿಯೂ ಹಚ್ತಿಲ್ಲ ತೈಲೂ...
ಅಟ್ಲಿಷ್ಟ ಹಾಕ್ತಿಲ್ಲ ಎದೆಮೇಲೆ
ಒಂದ್ ಟ್ಯಾಟೂ..‌

ಇದನ್ನೆಲ್ಲ ನೋಡಿಯೂ ಊದಕಡ್ಡಿ
ವಾಸ್ನೆ ತಗೊಂಡು ಟೈಂಪಾಸ್ ಮಾಡ್ತಾ
ಕೂತವನಲ್ಲ ಆ ದ್ಯಾವ್ರೂ..

ಸಸ್ತಾ ಜೀವನ ನಮ್ದೆ ದುಬಾರಿ ಆಸೆ ಕನ್ಸುಗಳು
ಹೋಗ್ರಪ್ಪ ಲೈಫೆ ಹವಾ ಇಲ್ದೆ ಇರೊ ಸೈಕಲ್ಲು ,
ಪೆಟ್ರೋಲ್ ಡೀಸೆಲ್ ಶತಕ ಭಾರಿಸಿದ್ರು
ಸಿಗ್ತಿಲ್ಲ ಗಾಡಿ ಬಾಡಿ ಕ್ಲಚೂ..
ಎಲ್ಲಾ ನವ ತಾರುಣ್ಯದ ಮಿಸ್ಟೇಕು!!

-



ಹುಡ್ಗ ಬಿಟ್ಟೋದ ಅಂತ
ಹೆಣ್ಮಕ್ಳು ಕೂಡ ಗಡ್ಡ
ಬಿಡೊ ಸಂಪ್ರದಾಯ
ಬೆಳಿಲಿ..

ಲಿವರ್ನ ಕೆರ್ಕೊಳೊ
ಹೊಸದೊಂದು ಟ್ರೆಂಡು
ಶುರುವಾಗಲಿ..

ನೆನಪನ್ನ್ ರಿವೈಂಡ್
ಮಾಡ್ಕೊಂಡ ಮಾಡ್ಕೊಂಡು
ಊರತುಂಬ ಸಾಲ ಮಾಡ್ಲಿ..

ಒಟ್ನಲ್ಲಿ ಅವ್ರಿಗೆ ಬಾರ್
ಗಿಫ್ಟ್ ಮಾಡೊ ತಾಕತ್ತು
ಗಂಡ್ಮಕ್ಳಿಗೆ ಬರ್ಲಿ..

-



ಬುದ್ಧನಾಗೋದಂದ್ರೆ ಇದ್ದಬದ್ದಿದ್ದೆಲ್ಲ
ಬಿಡೋದಂತಲ್ಲ, ಮರದ ಬುಡದಲ್ಲಿ
ಕೂತು ಕಣ್ಣ್ ಮುಚ್ಚಬೇಕೆಂತಲ್ಲ..
ಸದಾ ಶಾಂತಿ ಇರಬೇಕಂತಲ್ಲ...

ಮನ್ಸಲ್ಲಿ ಚೂರು ಗಲೀಜು ಇಲ್ದೆ
ಪ್ರೀತಿಸಿ ಪ್ರೇಮಿಸಿ ಬುದ್ಧನಾಗೋದು
ದೊಡ್ಡದಲ್ಲ..

ಬಂದೂಕಿನ ತುದಿಯಲ್ಲಿ ,
ಮಾಂಸ ತಿನ್ನೋಣ ಹಾರ್ಟಲ್ಲಿ
ಕುಡುಕನ ಕಣ್ಣಿನ ರೆಪ್ಪೆಯಲ್ಲಿ
ಬುದ್ಧ ಕಂಡ್ರು ಮುಖ ದಪ್ಪ
ಮಾಡ್ಕೋದಲ್ಲ ಧಿಕ್ಕರಿಸೋದಲ್ಲ.
ಎದೆ ತಣ್ಣಗಿರಿಸಿ ಸಮಾನ ಗೌರವ
ಕೊಡೊ ಧಮ್ಮ್ ಇರಲಿ.

-



ಮಮ್ಮಿ ಡ್ಯಾಡಿನೆ ಮಾಡ್ತಾವ್ರೆ ಹೋಂವರ್ಕು
ಮರೆತು ಬಿಟ್ರು ಮಕ್ಳು ಸ್ಕೂಲ್ ಬೋರ್ಡು..

ಮುಪ್ಪು ಆಗ್ತಿದೆ ಶಕ್ತಿಶಾಲಿ ಹುಡುಗ್ರ ಹಾರ್ಟು
ಈರುಳ್ಳಿ ನುಗ್ಗೆಕಾಯಿ ತಿನ್ನಿಸ್ಲೇ ಇಲ್ಲ ಹುಡ್ಗೀರ್ರು.

ಭಿಕಾರಿಯಾಗ್ತಿವೆ ಸರ್ಕಾರದ ಲೈಟ್ ಕಂಬಗಳು
ಸ್ಯಾನಿಟೈಝೆರ್ ನುಂಗಿ ಮಲ್ಗಿವೆ ನಾಯಿಗಳು..

ತೂತಾಗಿವೆ ಅಂಗಿ ಚಡ್ಡಿ ಬನಿಯನಗಳು
ಟೈಲರ್ ಸೂಜಿದಾರಕ್ಕೂ ವಿಪರೀತ ಕೆಮ್ಮು..

ಯಾರಿಗೂ ಕಾಣದಂತೆ ಕಿಸಿತಿದೆ ಕೋವಿಡು
ಕಾಂಪಿಟಿಷನ್ ಕೊಡೋ ಗಂಡ್ಸು ಇಲ್ಯೆಂದು.

-



ಟ್ವೆಂಟಿ ಟ್ವೆಂಟಿ ಗೆ ಕರೋನಾ ಎಂಟ್ರಿ ಕೊಡ್ತು
ಸಾಮಾನ್ಯ ಅಸಾಮಾನ್ಯರ ಜೀವ್ನನ ಬರ್ಬಾರ್ದ್
ಮಾಡ್ತು..

ಎಲ್ಲ ವರ್ಗದ ಮುಸುಡಿಗೆ ಅದಂತೆದೋ
ಡಿಸೈನ್ ಡಿಸೈನ್ ನಲ್ಲಿ ಲಂಗೋಟಿ ಅಂಟಿಸ್ತು.
ಕೈಗೆ ಸ್ಯಾನಿಟೈಝ್ ಸಿಂಪಡಿಸ್ತಲ್ಲದೆ
ಅದನ್ನ್ ತೊಳ್ಕೋಳ್ಳದ, ಇಲ್ಲ ಸ್ನಾನ
ಮಾಡೋದ್ ಅನ್ನೋದನ್ನ ಕನಫ್ಯೂಜ್
ಮಾಡ್ತು..

ಇವೆಲ್ಲ ಟೆನ್ಶನ್ನ್ನು ಎಮೋಷನ್ನು ಒದ್ದಾಟ
ಗುದ್ದಾಟ ಮುದ್ದಾಟ ಬಿಟ್ಟು ನಡ್ರೀ ಪೂಜಾ
ಬಾರ್ ಆಂಡ್ ರೆಸ್ಟೋರೆಂಟ್ ಗೆ ನುಗ್ಗೋಣ..
ಬಾಯಿಗೆ ಸ್ಟ್ರೋಮ್, ಟುಬೋರ್ಗ್
ಬೆಂಗ್ಳೂರ್ ಮೈಸೂರ್ ಜೌಷಧಿಗಳನ್ನ್
ಬಿಟ್ಕೊಳ್ಳೋಣ.. ಹೊಟ್ಟೆಗೆ ಒಂದಿಷ್ಟಿಷ್ಟ್ ನಾಲ್ಕ್
ಶೇಂಗಾ ಕಾಳ್ ಹಾಕಿ ನೆಮ್ಮದಿ ಹುಡ್ಕೋಣ..
ಬಿದ್ದಿರುವ ಆರ್ಥಿಕತೆನ ಸೀದಾ ನಿಲ್ಸೋಣ...

As Usual ಬೇವರ್ಸಿ ಬದುಕಿಗೆ ಹೊಸ
ಕ್ಯಾಲೆಂಡರ್ ನೇತಾಕಂಡು ಚಂದಾಕಿರೋಣ.

-



Life is full of Medimix
ಸಾಬೂನು..

ಮುಗ್ಯೋತನ ತಿಕ್ಕು
ನೊರೆ ಬರೋತನಕ ಉಜ್ಜು

ಕೊನೆಗೆ ಸೋಪು ನಮ್ದಲ್ಲ
ನೊರೆನೂ ನಮ್ದಲ್ಲ..

-



ಆನಲೈನ್ ಕ್ಲಾಸಿನಲ್ಲಿ ನಡೆದಿದೆ ಕುಚ್ ಕುಚ್ಚು
ಸಿಲಬಸ್ಸು.. ಇಷ್ಟು ಬೇಗ ಆಗ್ತಿದ್ಯಾ ಇಂಡಿಯ
ಫಾರಿನ್ನು? ಹೀಗಾದ್ರೆ ಮೇಷ್ಟ್ರು ತಲೆಗೆ ಒಳ್ಳೆ ಗಿಫ್ಟ್.

ಹೊಡಿ ಒಂದ್ ವೈಟ್ ಮಿಲ್ಕ್ ಶೇಕು..

ಸಿಂಗಲ್'ಗಳ ಅಂಬಾಸಿಡರ್ ಆಗಿ ಮೋದಿ
ಗಡ್ಡ ಬಿಡ್ಬಹುದ.. ಹೀಗ ಅಂದ್ಕೊಂಡೆ
ಆಂಟೀರು ಇರೋಬರೋ ಪಾತ್ರೆ ತಿಕ್ಕಬಹುದ.

ಹೋಗ್ರೋ ನಿಮಗ್ಯಾಕ್ ಬೇಕದು.

ಮೇಕಪ್ ಇಲ್ದೆ ನೆಟ್ಟಗೆ ಬಿಳ್ತಿಲ್ಲ ಬೆಳದಿಂಗಳು.
ಯಾವ್ದಕ್ಕೂ ಟೂಬಲೈಟ್ ತಿರುವಿ ಸರಿ
ಮಾಡ್ದಂಗೆ ಚಂದ್ರನ್ನೂ ತಿರುಗಿಸಹುದ
ನಿರುದ್ಯೋಗಿಗಳು.

ನಡಿರೋ ಟೋಟಲ್ಲಿ ಕನ್ಫ್ಯೂಜ್ಡೂ..

-



ಇತ್ತೀಚೆಗೆ ಮೂರ್ನಾಲ್ಕು ವರ್ಷದ ಮಕ್ಳಿಗೆ
ಲವ್ವಾಗೋದು ಕಾಮನ್ನು.

ಮೂರ್ಕತ್ತೆ ವಯಸ್ಸಾಗಿರೋ ನನ್ನ ಹಾರ್ಟಿಗೆ
ಯಾವ ಲೇಡಿಸು ಹೊಡ್ದಿಲ್ಲ ಸೀಲು ಸೈನು.

-



ಹೆದ್ರುಕೊಂಡ್ರೆ ಪ್ಯಾರೆಸಿಟಮಾಲ್ ಗು
ಬರ್ತದೆ ಜ್ವರ. ಅಂದ್ಕೊಂಡಂಗೆ ಬದ್ಕುರಪ್ಪ
ನಾಯಿ ತರ..

ಪಾಸವರ್ಡ್ ಇದ್ರು ಕನೆಕ್ಟ್ ಮಾಡ್ಕೊಳಿ
Wi-Fiವು... ಕಣ್ಬಿಟ್ಕೊಂಡೆ ಕಾಣಿರೋ
Hi-Fi ಡ್ರೀಮು.

ಹುಡುಗಿ ಒಪ್ಲಿ ಬಿಡ್ಲಿ ಪ್ರಪೋಸಲ್ಲು..
ಊರತುಂಬ ಬೆಳ್ಸಿ ವಾಸ್ನೆ ಇರೋ ರೋಜು..

ಗ್ಯಾಪಲ್ಲಿ ಮಾಡ್ಕಳ್ರಪ್ಪ ಟ್ಯೂಷನ್ ಟೀಚರ್
ನಂಬರ್ ಸೇವು..

ಟೆನ್ಶನ್ನನಲ್ಲಿ ಮಾಡ್ಬೇಡಿ ಸಿಗ್ನಲ್ ಜಂಪು ..
ಲೈಫಲ್ಲಿ ಬೇಕಾಬಿಟ್ಟಿ ಬೆಲೆತೆರಬೇಕಾದೀತು.

-



ರಸ್ತೆ ಮಲ್ಗತ್ತೆ, ನಾವ್ ಕೂತ್ಕೊಳ್ಬೇಕು
ಜೀವ್ನ ಓಡ್ಸತ್ತೆ, ನಾವ್ ಓಡ್ಬೇಕು..
ಬೂಟೊಳ್ಗೆ ಕಾಲಿಟ್ರೆ ಕಾಲ್ ನಿಲ್ಲಲ್ಲ
ಒಂದ್ಕಡೆ ಸೆಟ್ಲಾಗ್ಬೇಕು, ಪ್ರಾಯ ಕೇಳಲ್ಲ.

ಹಂಗೆ ಹೆಂಗೋ ವಯಸ್ಸಾಗ್ತಾ ಆಗ್ತಾ ಮನುಷ್ಯ
ಅನುಭವಸ್ತ ಆಗ್ತಾನೆ , ಪೆನ್ಶನಸ್ತ ಆಗ್ತಾನೆ ,
ಕೂದಲು ಬಿಳಿಯಾಗತ್ತೆ. ಮೊಣಕಾಲು
ಮಂಡಿನೋವು ಜಾವೇದ್ ಅಖ್ತರ್ ಕೊಡೊ
ಮುಲಾಮಿಗೂ ಕಮ್ಮಿಯಾಗಲ್ಲ..

ಸಂತೂರ್ ಮಮ್ಮಿ ಲಕ್ಸ ಸೋಪ್ ಹೆಂಗ್ಸು
ಪಾರ್ಲೆಜಿ ಬೇಬಿ ಹರೆಯ ಇದ್ದಂಗೆ ಇರ್ತದೆ.

ನನಗಿದರ ಬಗ್ಗೆ ಒಂಚೂರೂ ಚಿಂತೆ ಇಲ್ಲ ,
ನಮ್ ಮನೆಲ್ ಯಾವಾಗ್ಲೂ ಹೇಳ್ತಿರ್ತಾರೆ
" ನಾನ್ ಮನುಷ್ಯನೇ ಅಲ್ಲ " ಅಂತ..

-


Fetching ಸುಡುಗಾಡು ಸುಂದ್ರ Quotes