Anush K   (ಅರೆ ಹುಚ್ಚ)
553 Followers · 96 Following

read more
Joined 17 February 2019


read more
Joined 17 February 2019
20 SEP 2024 AT 10:16

ಮೊದಲೇ ನಾನಂತೂ ತೀರಾ ಸಭ್ಯ.
ನೀನೂ ಅಷ್ಟೇ.. ಮೊದಲ ಅನುಭವ
ಪಡೆಯಲು ಇಬ್ಬರೂ ಪರಸ್ಪರ ಚುಂಬಿಸುವಾಗ
ತಮಾಷೆಗೂ ಕಣ್ಣು ತೆರೆಯದಿರು. ನನ್ನ
ಸಾವಾಗುವುದು ಖಂಡಿತ...

ನಿನ್ನ ಬೈತಲೆಯ ರಸ್ತೆಯಲ್ಲಿ.
ಸ್ವಪ್ನದ ಕೊನೇ ಬೀದಿಯಲ್ಲಿ.
ನೀ ಮುಡಿದು ಎಸೆದ ಹೂ ಬಿದ್ದ ಜಾಗದಲ್ಲಿ.
ನಿನ್ನ ನಗುವನ್ನೇ ಹುಡುಕುವೆ. ತಮಾಷೆಗೂ ಅಳಬೇಡ.
ನನ್ನ ಸಾವಾಗುವುದು ಖಂಡಿತ...

ಇಲ್ಲೇ ಎಲ್ಲೋ ಹೋಗುತ್ತಿರುವ ಜನರನ್ನು
ನಾಲ್ಕು ಮಳೆಹನಿಗಳು ಹತ್ತಿರದ ಮರೆಗಳಿಗೆ
ಓಡಿಸುವ ಹಾಗೇ. ಒಂದು ಸಣ್ಣ ಮೌನ
ಎದೆಯಲ್ಲಿನ ಸಾವಿರ ಮಾತುಗಳನ್ನು
ಓಡಿಸುವ ಹಾಗೇ. ನಿನ್ನ ಹೃದಯದಿಂದ ನನ್ನ ತಮಾಷೆಗೂ ಓಡಿಸದಿರು.
ಅಲ್ಲೇ ಮೇಲೆಯೇ ಹೇಳಿಕೊಂಡು ಬಂದಹಾಗೇ
ನನ್ನ + ಪ್ರೀತಿಯ ಬಗೆಗಿನ ಪ್ರೀತಿ ಸಾವಾಗುವುದು ಖಂಡಿತ...

- ಅರೆಹುಚ್ಚ

-


19 SEP 2024 AT 8:06

ನೀನು ಸಿಕ್ಕಮೇಲೆ ನೆನ್ನೆ ಇದ್ದ ನೋವು ಮರೆಯಾಗಿದೆ.
ಬರಡು ಹೃದಯದಲ್ಲಿ ಹಿಂದೆಂದೂ ಕಾಣದಂಥ ಮಳೆಯಾಗಿದೆ.

ನೀನೇ ಇಲ್ಲದ ಸ್ವಪ್ನ ನಾ ಕಾಣುವಾಗ.
ನಿದಿರೆಯ ಜೊತೆಗೆ ತಲೆದಿಂಬನ್ನು ಅಪಹರಿಸಿ ಓಡಿಬಿಡು...

ಜಗತ್ತು ಸರಿಯಾಗಿ ಹೃದಯದಿಂದ
ನಗುವುದನೇ ಮರೆತಂತಿದೆ. ಅವರಿಗೆಲ್ಲಾ
ಕಂಬನಿ ತುಂಬಿದ್ದರೂ ನನ್ನೆಡೆಗೆ ನೀ ಅರಳಿಸುವ
ಆ ಮುದ್ದಾದ ನಗುವನ್ನೊಮ್ಮೆ ತೋರಿಸಿಬಿಡು...

- ಅರೆಹುಚ್ಚ

-


9 APR 2024 AT 9:41

ನಿತ್ಯ ಉಸಿರಾಡುವೆ ನಿನ್ನ ಕಾಯುತಾ
ಸ್ವಪ್ನದಲ್ಲಿಯೂ ಪೂರ್ತಿ ನೆನೆಯುತಾ.

ನಿನ್ನ ಮೌನಕ್ಕೆ ಮಾತನಾಡುವ ಹುಚ್ಚಿದೆ
ದಯಮಾಡಿ ಮೂಕಿಯಾಗು..
ನಾನು ಸರಿಹೋಗಲು ತುಸು ಒಲವು ಬೇಕಿದೆ
ಸಾವಿನ ಮುನ್ನ ನೀಡಿ ಹೋಗು..
ಇಳಿಸಂಜೆ ಕಾದಿದೆ ನಿನ್ನ ಕಾಯುತಾ.
ಕಣ್ಣಲ್ಲಿ ಕೂತಿರೋ ಚಂದ್ರನ ಕೂಗಿ ಕರೆಯುತಾ.

ನಿನ್ನ ಒಲವ ತೀವ್ರತೆಗೆ ಹೃದಯ
ಬಿರುಕುಬಿಟ್ಟಿದೆ..
ಖಾತರಿಗೆಂದೋ ಏನೋ
ಕುರುಹು ಇನ್ನೂ ಉಳಿದಿದೆ..
ನಿತ್ಯ ಜನಿಸುವೆ ನಿನ್ನೇ ನೆನೆಯುತ.
ಬರುವ ಸಾವಿಗಾಗಿ ನಗುತ ಕಾಯುತಾ.

- ಅರೆಹುಚ್ಚ

-


9 JUL 2023 AT 10:29

ಅದೆಂಥಾ ಅದ್ಭುತ ಅಂಟಿಕೊಂಡಿದೆ
ನಿನ್ನ ಕಣ್ಣಲ್ಲಿ...
ಕುಡಿನೋಟದಲ್ಲಿ ನನ್ನ ಕೊಲೆಮಾಡುವುದೇ
ನಿನಗಿರುವ ಒಳ್ಳೆ ಖಯಾಲಿ...

ನನ್ನ ಸ್ವಪ್ನದಲಿ ಗುನುಗು ನಿನಗೆ ತಿಳಿದ
ಅರ್ಧಂಬರ್ಧ ಹಾಡನು...
ಅತೀಯಾಗಿ ಸಹಿಸುವೆ ಸಾಲು ಸಾಲು
ಶೃತಿ,ಗತಿ,ಲಯ,ತಾಳಗಳ ಕೊಲೆಯನು...

ವಿನಾಕಾರಣದ ನನ್ನ ಖುಷಿಗೆಲ್ಲಾ
ಅತೀಸುಂದರ ಕಾರಣ ನೀನೇ...
ಆಘಾತಕ್ಕೆ ಒಳಗಾಗದಿರು. ನನ್ನ
ಕೊನೇಯಾಸೆಯಲ್ಲಿ ಸೂಚಿಸಿದರೆ ನಿನ್ನನ್ನೇ...

- ಅರೆಹುಚ್ಚ

-


26 MAR 2023 AT 9:09

ಕನಸಲ್ಲೂ ನೀನೇಬೇಕು.ಕಡೇತನಕ ನೀನಿರಬೇಕು.
ನಾಳೆ ನನಗೆ ಗಲ್ಲುಶಿಕ್ಷೆಯೇನಲ್ಲ ಆದರೂ ಹೇಳುವೆ
ಇದೇ ನನ್ ಕೊನೇ ಆಸೆ....

ಆಕಾಶದ ನೀಲಿಯಷ್ಟು, ಸ್ಮಶಾನದ ಮೌನವಷ್ಟು,
ಅಮ್ಮನ ಕೈತುತ್ತಷ್ಟು ಪ್ರೀತಿಸುವೆ.
ಇನ್ನೆಂದು " ನನ್ನ ಎಷ್ಟ್ ಪ್ರೀತಿಮಾಡ್ತೀಯಾ? "ಎಂದು ಕೇಳಲೇಬೇಡ....

ಕಾಸ್ಟ್ಲಿ ಖುಷಿ ಕೊಡೋ ಸೌಕಾರ ನಾನಲ್ಲ.
ನಿನ್ನ ಬಾಲ್ಯ ನೆನೆದಾಗ ಅಂತರಾಳದಲ್ಲಿ ಮೂಡುವ
ಆ ಅದ್ಭುತ ನೆಮ್ಮದಿಯ ಖುಷಿ ಕೊಡುವೆ.

ಮುಂದಿನ ಜನ್ಮದಲ್ಲಿ ಇವ್ನೆ ನನ್ ಗಂಡ
ಆಗಿರ್ಲಪ್ಪಾ ಅನ್ನೋ ರೇಂಜಿಗೆ ಸಂಸಾರ ಮಾಡುವೆ....

- ಅರೆಹುಚ್ಚ

-


26 FEB 2023 AT 10:05

ನೀಯತ್ತೇ ನಿಲ್ಲದಂತಾಗಿದೆ. ನಿನ್ನ
ಸೌಂದರ್ಯದ ಬಿಸಿ ಶಾಖಕೆ...
ಪ್ರತಿಭಟನೆ ನಡೆಸಬೇಕಿದೆ ನಿನ್ನ
ಬೆನ್ನ ವಿರುದ್ಧ.ಕಾರಣ ಕೇವಲ ಬೆರಳೆಣಿಕೆ...

ಯಾವ ಅಂಗಡಿಯಲ್ಲೂ ಸಿಗದ ಸಿಹಿ
ನಿನ್ನ ತುಟಿಯಲ್ಲೇ ಅದ್ಯಾಕಿದೆ...?
ಗಂಡ್ಸಾಗಿ ಚೂರುಪಾರು ನಾಚಿಕೆ ನನಗೂ
ಇದೆ.ಆದರೂ ಒಳ್ಳೆತಪ್ಪು ಮಾಡಬೇಕಿದೆ...

ಬೆನ್ನಿಗೆ ಮುತ್ತಿಡುವೆ. ಬೆನ್ನಮೇಲೆ ಪಿಂಪಲ್
ಆದರೆ ಚೂರು ಸಹಿಸು...
ಆದರೂ ತುಸು ಒಳ್ಳೆವ್ನು ಆಗಲು ಪ್ರಯತ್ನಿಸುವೆ.
ನೀನಾಗೇ ನನ್ನ ಕೆರಳಿಸು...

- ಅರೆಹುಚ್ಚ

-


19 DEC 2022 AT 19:56

ಇಳಿಸಂಜೆಯು ಮಂಕಾಗಿದೆ ನಮ್ಮ ಕೊನೇ ಭೇಟಿಗೆ...
ಸಿಹಿ ಮುತ್ತೊಂದು ಕಹಿಯಾಗಿದೆ ಈಗ ನನಗೆ...

-


20 NOV 2022 AT 21:49

ನೀನೇ ಇರಬೇಕು. ನನ್ನ ಎಲ್ಲಾ ನಿದ್ರೆಯಲಿ ...
ನೀನೇ ಬರಬೇಕು. ಎಲ್ಲೇ ನಾ ಹೋದಲ್ಲಿ...

ತಂಗಾಳಿಗೂ ಬಿಸಿ ಸೋಕಿದೆ.
ನೀ ಸನಿಹ ಸಾಗಿದಾಗ...
ಮಳೆಯನಿಯೂ ಮುತ್ತಾಗಿದೆ.
ನಿನ್ನ ಅಂಗಾಲು ತಾಕಿದಾಗ...

ಅರೆಹುಚ್ಚ ನಾನು.ಆದರೂ
ತುಸು ಪ್ರೀತಿಸು...
ಸಮೀಪದಲ್ಲೇ ಹಿತವಿದೆ.
ಕೊನೇವರೆಗೂ ವಿರಹವ ದ್ವೇಷಿಸು...

- ಅರೆಹುಚ್ಚ





-


29 OCT 2022 AT 20:13

ಅರ್ಧ ಚಂದ್ರನ ಬೆಳಕಲಿ
ಅತೀ ಚಂದದ ಚಳಿಯಲಿ
ತುಸು ಕೊಲ್ಲು ನನ್ನ. ಮೋಹದ ಮೊಮ್ಮಗಳಾಗಿ....

ಸೀರೆ ಸಾವಾದ ಬೆನ್ನಲಿ
ನಿನ್ನ ಭಾರ ಹೊತ್ತ ಸೊಂಟದಲಿ
ಅಡಗಿದೆ ನನ್ನ ದೌರ್ಬಲ್ಯ.ಕೊಂಚ ಹೆಚ್ಚಾಗಿ...


ತುಟಿಗಳಿಗೆ ಅದೇಕೋ ಹಸಿವು ಹೆಚ್ಚಾಗಿದೆ.
ನೀ ಕೊಡಬೇಕಾದ ಮುತ್ತು ಇನ್ನೂ ಬಾಕಿ ಇದೆ.
ರಸಿಕನಾಗುವೆ. ಓಡದೇ ಚೂರು ನಾಚು.
ಸರಿಹೋಗುವೆ ನಾನು.ಚೂರು ಬಾಚು...

- ಅರೆಹುಚ್ಚ

-


22 OCT 2022 AT 7:31

ಹರೆಯ ಫುಲ್ಲೂ ಕರಗಿಸಿ
ನಿನ್ನ ಬೆನ್ನಿನ ಬೆವರಾಗಿಸುವೆ...
ಹೃದಯ ಪೂರ್ತಿ ಪ್ರೀತಿಸಿ
ಸದ್ದೇ ಇರದಂತೆ ಮುದ್ದಿಸುವೆ...

ನಿನ್ನೆಸರ ಇಡುವೆ ಮಳೆಯೇ
ನಿಲ್ಲದ ಊರಿಗೆ...
ಬೆಂಬಿಡದೆ ಹಿಂಬಾಲಿಸುವೆ
ನಿನ್ನ ಸಣ್ಣ ಬೈಗುಳಕೆ...

ಪ್ರೀತಿಸು ಒಮ್ಮೆ. ನೀನೇ ನನ್ನ
ನೆಚ್ಚಿನ ಸ್ವಪ್ನ...
ಸಾಯಿಸು ಒಮ್ಮೆ. ಹೇಳದೇ
ಸಣ್ಣ ಕಾರಣ...

- ಅರೆಹುಚ್ಚ


-


Fetching Anush K Quotes