QUOTES ON #ಸುವಿಚಾರ

#ಸುವಿಚಾರ quotes

Trending | Latest

ಮನೋಕ್ಲೇಶಗಳೆಂಬ
ಅಲ್ಪಾಯು ಹುಳುಗಳಿಂದ
ಸ್ವಯಂ ರಕ್ಷಿಸಿಕೊಂಡು,
ಚೆಂಗುಲಾಬಿಯಂತರಳಿ
ಮಂದಹಾಸವ ಮೂಡಿಸುತ್ತ
ಸುವಿಚಾರಗಳ ಸುವಾಸನೆ
ಹರಡಲೂ ಕೆಲ ಘಳಿಗೆಗಳು,
ಅಂತ್ಯ ಸುನಿಶ್ಚಿತವಾದರೂ
ಗುರಿ ನಿಶ್ಚಿತವಿರಲಿ.

-


9 FEB 2019 AT 12:02

ಕಣ್ಣ ಸನ್ನೆಗಳ ವ್ಯವಹಾರ,
ಮುಗುಳು ನಗೆಯ ಅಡಿಪಾಯ.
ಅಂತರವಿದ್ದ ಸುವಿಚಾರ,
ಮೌನವೇ ಹೇಳಿದಾಗ ನಾ ನಿರುಪಾಯ.

-



ಮನದೊಳಗೆ
ಗಳಿಗಳಿಗೆಗೊಂದು
ಹೊಸಕನಸುಗಳ
ಸಮಾಚಾರ,
ಅವುಗಳಲಿ
ಹೆಚ್ಚಾದಂತೆ ನಿನ್ನದೆ
ಸುವಿಚಾರ..!

-


24 JUL 2020 AT 13:45

ನಯನದೊಳಗೆ
ಸಾಲುಸಾಲಿಗೊಂದು
ಮೂಡುತ್ತಿದೆ
ರಂಗುರಂಗಿನ
ಕನಸುಗಳ ಚಿತ್ತಾರ
ನಿನ್ನ ನುಡಿಗಳು
ಮಾಡುತ್ತಿವೆ
ಹೊಸ ಚಮತ್ಕಾರ.

-



ಸಂಚಿಕೆ:೫೯
🙇ಸುವಿಚಾರ🙇
━━━━━━━━✧❂✧━━━━━━━━

ನನ್ನ ಮುಂದೆ ಕಷ್ಟಗಳು ಛಿದ್ರ ಛಿದ್ರ ಮಾಡಲಾಗದಂತಹ ದೊಡ್ಡಬೆಟ್ಟದಂತೆ ಇದೆ ಎಂದು ಅಂದುಕೊಳ್ಳುವುದಕ್ಕಿಂತ ನನ್ನ ಎಡಗಾಲಿನ ಕಿರುಬೆರಳ ಅಂಚಲ್ಲಿರುವ ಧೂಳು ಎಂದುಕೊಂಡರೆ ಆರಾಮಾಗಿ ಯಾವುದೇ ತೊಡಕಿಲ್ಲದೆ ಆ ಕಷ್ಟದಿಂದ ಪಾರಾಗಬಹುದು... ಯಾವಾಗಲೂ ಸಕಾರಾತ್ಮಕವಾಗಿರಿ ನಕಾರಾತ್ಮಕದಿಂದಲ್ಲ...

-



ಸಂಚಿಕೆ:೫೮
🙇ಸುವಿಚಾರ🙇
━━━━━━━━✧❂✧━━━━━━━━

ಜೀವನದಲ್ಲಿ ಕನಸಿಗೂ... ನನಸಿಗೂ... ಇರೋದು ಒಂದೇ ವ್ಯತ್ಯಾಸ, ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು... ಅದನ್ನು ನನಸು ಮಾಡಲು ನಿದ್ದೆಯಿಲ್ಲದ ಶ್ರಮ ಬೇಕು...

-



ಹೊಂಗಿರಣವ ಹೀರಿಕೊಂಡು ಕಲ್ಲು ಬಂಡೆ ಕಂಗೊಳಿಸುವಂತೆ
ಎಲ್ಲ ದಿಕ್ಕುಗಳಿಂದಾಗಮಿಸುವ ಸುವಿಚಾರಗಳಿಂದಾಗಲಿ ಸಂತೆ.

-



ಸಂಚಿಕೆ:೫೭
🙇ಸುವಿಚಾರ🙇
━━━━━━━━✧❂✧━━━━━━━━

ನಿಮ್ಮ ಜೀವನದ ಚಿಕ್ಕ ಸಂಗತಿಗಳನ್ನು ಕೂಡ ಅನುಭವಿಸಿ. ಈಗ ಚಿಕ್ಕದಾಗಿ ಕಾಣಿಸಬಹುದು ಆದರೆ ಭವಿಷ್ಯದಲ್ಲಿ ಅದು ದೊಡ್ಡದಾದ ಮಹತ್ತರ ಸಾಧನೆಗೆ ಬುನಾದಿಯಂತೆ ಆಗಿರುತ್ತದೆ.

-



ಸಂಚಿಕೆ:೬೦
🙇ಸುವಿಚಾರ🙇
━━━━━━━━✧❂✧━━━━━━━━

ಆತ್ಮಸ್ಥೈರ್ಯ ನಮ್ಮ ತರಬೇತಿ
ಮತ್ತು ಶಿಸ್ತಿನಿಂದ ಬರುತ್ತದೆ.

-