ಶೋಷಿತರ ಎದೆಯಲ್ಲಿ
ಮೊದಲ ಅಕ್ಷರ ಬರೆದ ಅವ್ವ
ಮಹಿಳೆಯರ ಅಕ್ಷರ ದಾಸೊಹಿ
ಮಾತೆ
ಸಾವಿತ್ರಿಬಾಯಿ ಪುಲೆಯವರಿಗೆ
ಕೋಟಿ ಕೋಟಿ ನಮನಗಳು
*****************************
ಶಿಕ್ಷಣ ಪ್ರೇಮಿ ಮಾತೆ ಸಾವಿತ್ರಿಬಾಯಿ ಪುಲೆ
ಜನ್ಮ ದಿನದ ನಿಮಿತ್ಯ ಮಾತೆಗೆ ವಿಶೇಷ ವಂದನೆಗಳು
🙏🙏🙏🙏🙏🙏🙏🙏🙏🙏🙏🙏🙏🙏-
ದೇಶ ಕಂಡ ಮೊದಲ ಮಹಿಳಾ ಶಿಕ್ಷಕಿ.
ಹೆಣ್ಮಕ್ಕಳು ಮನೆಯಿಂದ ಹೊರಗೇ ಹೊಗಲು ಅನುಮತಿಯಿಲ್ಲದ ಸಮಯದಲ್ಲಿ
ಹೆಣ್ಣಿನ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿದ್ದ ಸಂಧರ್ಭದಲ್ಲಿ
ಗಂಡನ ಸಹಾಯ ಪಡೆದು ಓದಿ ಶಿಕ್ಷಕಿಯಾಗಿ
ತನ್ನಂತೆಯೇ ಉಳಿದ ಹೆಣ್ಮಕ್ಕಳು ಶಿಕ್ಷಣ ಪಡೆಯಬೇಕು,
ಆಗ ಮಾತ್ರ ಸುಶಿಕ್ಷಿತ ಮನೆಯನ್ನು ಕಾಣಲು ಸಾಧ್ಯ, ಮನೆಯ ಹೆಣ್ಮಗಳು ಸುಶಿಕ್ಷಿತಳಾದರೇನೇ ಸಮಾಜ ಕಲ್ಯಾಣವಾಗುವುದು
ಎಂದು ತಮ್ಮ ಅಭಿಮತವನ್ನು ಹೊರಹಾಕಿದವರು
ಸಾವಿತ್ರಿಬಾಯಿ ಪುಲೆ.
ಅವರ ಜಯಂತಿಯ ಶುಭಾಶಯಗಳು💐-
SC,ST,OBC ಸಮುದಾಯದ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲಿಕ್ಕಾಗಿಯೇ ತಾನು ಮೊದಲು ವಿದ್ಯೆ ಕಲಿತು ಮೇಲ್ಜಾತಿಯವರಿಂದ ಹಿಂಸೆ ಅನುಭವಿಸಿದರೂ ಛಲ ಬಿಡದೇ ವಿದ್ಯೆ ಕಲಿಸಿದ ಅಕ್ಷರದವ್ವ ಕ್ರಾಂತಿಕಾರಿ ಮಹಿಳೆ ಈ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಯವರ 189ನೇ ಜನ್ಮ ದಿನದ ಶುಭಾಶಯಗಳು ...💐💐🌹💐😍🙏
-
ಮೊದಲ ಶಿಕ್ಷಕಿ ಎಂಬ ಕೀರ್ತಿ
ದೀನರ ಬಾಳಿಗೆ ಅಕ್ಷರ ಜ್ಯೋತಿ
ದಲಿತ ಮಕ್ಕಳ ಶಿಕ್ಷಣದಾರತಿ
ಜ್ಯೋತಿ ಬಾ ಅವರ ಸಾರ್ಥಕ ಸತಿ
ಅಕ್ಷರದವ್ವ ಹಡದವ್ವ
ಮತ್ತೆ ಮತ್ತೆ ಬಾರವ್ವ
ಅಂದೇ ಅಕ್ಷರ ದಾಸೋಹದವ್ವ
ಬಾಲ್ಯ ವಿವಾಹ ತಡೆದವ್ವ
ಸಾವಿತ್ರಿ ಬಾಯಿ ನೀವು ಅವ್ವಂದಿರ ಅವ್ವ.
- ಮನು ಹಳೆಯೂರ್
-
ಯಾರದೋ ಮನೆಯಲಿ ಹುಟ್ಟಿದಳು ಎಂದು
ಯಾರದೋ ಸ್ನೇಹ ಸಂಬಂಧಗಳ
ಬಂಧನದಲಿ ಬೆರೆತಿಹಳು ಎಂದು
ಬದಲಿಸಬೇಕಾಗಿಲ್ಲ ಅವಳು ತನ್ನ ಗುರಿಗಳನು.
ಹೌದು ಅವಳೊಬ್ಬ ಸ್ತ್ರೀ
ಅವಕಾಶಗಳಿದ್ದರೇ
ಅವಳೂ ಆಗಬಹುದು ಅಲ್ಲವೇ?
ಸಾವಿತ್ರಿ ಬಾಯಿ!!!-