Farhanaaz Maski   (Farhanaaz. Maski)
74 Followers · 26 Following

read more
Joined 27 September 2020


read more
Joined 27 September 2020
30 AUG 2022 AT 19:57

ವಾಸ್ತವದಲ್ಲೂ ಬದುಕುತ್ತೇನೆ
ಭ್ರಮೆಯಲ್ಲಾದರೂ ಬದುಕುತ್ತೇನೆ
ನಾಜ್! ಯಾರಿಲ್ಲದಿದ್ದರೇನಂತೆ,
ನಾ ಬದುಕಬೇಕಾಗಿದೆ,
ಬದುಕೇ ಬದುಕುತ್ತೇನೆ!!

-


30 AUG 2022 AT 19:05

ಅವಳು ನನ್ನವಳಾಗಲಿಲ್ಲ ಎಂಬ
ನೋವೇನೂ ಇಲ್ಲ
ನಾಜ್!! ಸಾಕು,
ಅವಳು ನನ್ನವಳಾಗಿದ್ದಳು ಎಂಬ
ನಲಿವಾದರೂ ಇದೆಯಲ್ಲ!!!

-


30 AUG 2022 AT 19:02

ಅವನು ಇದ್ದುಹೋದ ನಲಿವೋ
ಅವನು ಬಿಟ್ಟು ಹೋದ ನಗುವೋ
ನಾಜ್!!! ತಿಳಿಯದು...
ಎನ್ನ ಮೊಗದಲ್ಲಿ ಮಾತ್ರ ಇಂದಿಗೂ
ಮೂಡಿಹುದು ಮುಗುಳ್ನಗು!!!!

-


30 AUG 2022 AT 18:59

ಪ್ರೀತಿಸಿದವರಿಗೆ ನೋಡಿ
ಸಿಗುವುದಾದರೆ ನೆಮ್ಮದಿ
ನಾಜ್!!! ಸ್ವಲ್ಪ,
ಅವನ ಮುಂದೆ ನನ್ನ
ಕೂತುಕೊಳ್ಳಲಾದರೂ ಬಿಡಿ!!!

-


30 AUG 2022 AT 10:13

ಬದುಕಿನ ಪಾಠಗಳನ್ನು
ನನ್ನ ಮುಂದೆ ಪಠಿಸದಿರಿ
ನಾಜ್!!!
ನಾನು ಪರಾಕಾಷ್ಠೆಗಿಂತ, ಬದುಕಿನ
ಪಾತಾಳ ನೋಡಿ ಬಂದಿರುವೆ!!!

-


29 AUG 2022 AT 23:25

ಗಾಜಿನ ಮನಸ್ಸು ನನ್ನದೆಂದಿದ್ದರೂ
ಕಲ್ಲು ಎಸೆಯುತ್ತೀರಲ್ಲಾ
ನಾಜ್!!
ಅದೇ ಚೂರಾದ ಗಾಜಿಂದ
ಚುಚ್ಚಿ ಚುಚ್ಚಿ ನಿಮ್ಮನ್ನೆಲ್ಲಾ
ಕೊಲ್ಲಬಹುದಲ್ಲಾ!!

-


29 AUG 2022 AT 22:28

ಯಾರಿಗೆ ಯಾವ ಶಿಕ್ಷೆ ನೀಡಿದರೇನು?
ನೆಮ್ಮದಿ ಸಿಗುವುದೇ!!
ನಾಜ್!!
ಇಚ್ಛೆಗಳ ವಿರುದ್ಧವೇ ಬದುಕುತ್ತಿರುವುದು
ಸಜೆಗಳಿಗಿಂತ ಕಡಿಮೆಯೇ!!???

-


29 AUG 2022 AT 22:15

ಸುಳ್ಳಿನ ಸ್ವರ್ಣ ಮಂದಿರವನ್ನೇ
ತೊರೆದಿದ್ದೇನೆ ,
ಆಸರೆಯಿಲ್ಲದಿದ್ದರೂ ಸರಿಯೇ
ನಾಜ್!!!
ಸತ್ಯದೊಂದಿಗೆ ಯಾವ ಸಂಧಿಯಲ್ಲಾದರೂ
ಬದುಕಿ ತೋರಿಸುತ್ತೇನೆ!!!

-


29 AUG 2022 AT 21:14

ತಮ್ಮ ತಮ್ಮ ದೇವರುಗಳಿಗೆ ನ್ಯಾಯ ದೊರಕಿಸಿಕೊಡಲು ಜನರು ಜಗಳವಾಡುತ್ತಿದ್ದಾರಂತೆ
ನಾಜ್!!
ಅಬ್ಬಾ!! ಆಧುನಿಕ ಮನುಜರು
ಬಲು ಬಲಶಾಲಿಯಾಗಿದ್ದಾರಂತೆ!!!

-


29 AUG 2022 AT 21:06

ಮೊದಲು, ದೇವರನ್ನು ಅರಸುತ್ತಾ
ಮನುಜ ಅಲೆದಾಡುತ್ತಿದ್ದನಂತೆ
ನಾಜ್!!!
ಈಗ ತನಗಿಚ್ಛೆ ಇರುವ ಸ್ಥಳಗಳಲ್ಲೇ
ಕರೆಸಿಕೊಳ್ಳುತ್ತಿದ್ದಾನಂತೆ!!

-


Fetching Farhanaaz Maski Quotes