ಜಗದ ಜಂಜಡವ ಜಜ್ಜಿ ಬಿಸಾಡುವ ತಾಕತ್ತಿರುವುದು ನಿದ್ದೆಗೆ ಮಾತ್ರ... ನೋವ ಮರೆತು ನೆಮ್ಮದಿಯಾಗಿ ನಿದ್ರಿಸಿ...
-
ನಗಬೇಕು ನೀನು ನುಡಿಮುತ್ತುಗಳ ಸುರಿಸಿ 🥰
ಬೇಸತ್ತ ಹೃದಯಕೆ ಹನಿಗವನವ ಹೇಳಿ 😍
ಕಣ್ಕಪ್ಪು ಕಾಡಿಗೆಯಲಿ ಅಕ್ಷರವ ಗೀಚಿ 🥰
ತಿಳಿಹೇಳ ಬೇಕು ಒಮ್ಮೆ ನೀ ನನ್ನ ಕೆನ್ನೆಯ ಹಿಂಡಿ😍-
ನನ್ನ ವಾಸ್ತವದಲ್ಲಿರದ ನೀನು..
ಕನಸುಗಳಲ್ಲಿ ಮಾತ್ರ ಖಚಿತ ಹಾಜರಾತಿ...
ಇನ್ನೆಷ್ಟು ಮಾಡಲಿ ನಿನಗೆ ನಾ..
ನನ್ನ ನೋವುಗಳ ಮಂಜೂರಾತಿ...!!-
ದಿನಕೆ ವಿದಾಯ ಹೇಳುವ ಸಮಯ
ಸ್ವಾಗತಿಸುವ ಮನುಜನು ರಾತ್ರಿಯ
ನಡೆಯುವವೀ ಕಾರ್ಯವು ದಿನನಿತ್ಯ
ನಿದ್ರೆಗೆ ಜರೂರು ಜಾರುವುದು ಕಾಯ
ಮಲಗುವ ಮುನ್ನ ಸೇವನೆ ಉಷ್ಣಜಲ
ಸದೃಢ ಸ್ವಾಸ್ಥ್ಯದ ತನುವಿಗಿದು ಬಲ
ಅಂಗಾಂಗಗಳು ಆಗುವುದಾಗ ಸಡಿಲ
ನಿದ್ರೆಗೆ ಜರೂರು ಜಾರುವುದು ಕಾಯ
ಕಾವಾರಿಸಲು ಬೆಳದಿಂಗಳ ಸುಸ್ಪರ್ಶ
ತಂಗಾಳಿಯು ಅವನಿಯಲಿ ಪ್ರಕರ್ಷ
ಅಜಿರ ಕಂಪಿಸುವ ಕುಳಿರ್ ಉತ್ಕರ್ಷ
ತಲ್ಪದತ್ತ ಚಾಂಚಲ್ಯ ಚಿತ್ತವು ಆಕರ್ಷ-
ನನಗೇನು ತಿಳಿದಿತ್ತು
ನೀನು
ಇಷ್ಟೊಂದು ಬಿಕ್ಕಳಿಸಿ ಅಳುವೆಯೆಂದು
ಮನದ ನೋವೊಂದನ್ನ
ನಿನ್ನಲ್ಲಿ
ಹಂಚಿಕೊಂಡಿದ್ದೇನಷ್ಟೇ-
ಮೊದಲೇ ತಿಳಿದಿದ್ದರೆ ಭಾವನೆಗಳನ್ನೆಲ್ಲ
ಕತ್ತಿಸುಕಿ ಕೊಲ್ಲುತ್ತಿದ್ದೆ
ನೋಡಿಗ
ನನ್ನೆದೆಯ ನೀ ತೋರೆದೊದ ಮೇಲೆ
ಅವುಗಳೇ
❤️
ಈ
ಹೃದಯವನ್ನ ಚುಚ್ಚಿ
ಕೊಲ್ಲುತ್ತಿವೆ-
ಕೆಲವೊಮ್ಮೆ
ಎಲ್ಲರನ್ನೂ ಅರ್ಥಹಿಸಿಕೊಳ್ಳುವ
ಜಾಣತನವು ಸಹ
ಕೆಟ್ಟದ್ದೆ..
🌌
ಶುಭರಾತ್ರಿ-