QUOTES ON #ಶಿವ

#ಶಿವ quotes

Trending | Latest
28 MAY 2020 AT 7:46

🌺
ಮಹಾ
ಮಹಿಮನು
ಪಂಚಮುಖನು
ಜಗದ ಅಧಿಪತಿ
ಲಿಂಗ ಸ್ವರೂಪಿ
ಸರಳ ಭೂಷಣ
ಸುತ್ತ ಭೂತಗಣ
ಭಕ್ತರ ಪೋಷಕ
🌺ಮಹಾಸೇನಜನಕ🌺
ತಮಸ್ಸೆಂಬ ಅಜ್ಞಾನವನ್ನು ಅಳಿಸಿ ಜ್ಞಾನ ದೀವಿಗೆಯ ಬೆಳಗಿಸೊ ಕರುಣಾಕರ ಜಟಾಯ @@@
ಸರಳ ಸಜ್ಜನಿಕೆಯ ನಿರಾಭರಣ ಸುಂದರ ಆದ್ಯಂತ ರಹಿತ ದೇವ ಮೃತ್ಯುಂಜಯಾಯ @@@
ಭಕ್ತರ ಆರಾಧ್ಯ ದೈವ ಶಂಕರ ಡಮರುಗನಾದ ಸ್ವರಮಯಾಯ ಶಿವಪ್ರಿಯಾ ಉಗ್ರಾಯ @@@
ನಿರಾಕಾರ ರೂಪ ತ್ರಿಮೂರ್ತಿ ಸ್ವರೂಪ ನಿರಾಭರಣ ರುದ್ರಾಯನು @@@
ಶಿವ-ಶಕ್ತಿಯು ಅನಂತವು ಸತ್ಯದ ಅರಿವು ನಿತ್ಯ ನಿರಂತರವು
ನಿಷ್ಕಲ್ಮಶ ಮನಸ್ಸಿನ ಪ್ರತೀಕನು ಹಠಬಿಡದ ಧ್ಯೋತಕನು
ಶಿವಲಿಂಗನು ಅಭಿಷೇಕ ಪ್ರಿಯನು
ಜಗದ ಒಳಿತಿಗೆ ವಿಷವ ಕುಡಿದನು
ಶಕ್ತಿವಂತನು ಆಡಂಬರ ಮುಕ್ತನು
ನಂಬಿ ಬಂದ ಭಕ್ತರ ಕೈ ಬಿಡದ ವರನೀಡೊ ಪರಶಿವನು
ಇಂದ್ರಿಯ ನಿಗ್ರಹಿಸಿ ಧ್ಯಾನಸ್ತಕರಿಗೆ ಒಲಿಯೊ ಪರಮೇಶ್ವರನು
ಭಸ್ಮವನ್ನ ಧರಿಸಿದ ನಿರಲಂಕಾರನು ಸೋಮವಾರಪ್ರಿಯ ಈಶ್ವರನು
ಅಹಂಕಾರ ಅಳಿಸುವ ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಅರಿವಿನ ಗಂಗೆಯೊತ್ತ ಜಗದ ನಾಯಕ
ಹಣೆಯಲ್ಲಿ ಜ್ಞಾನದ ತಿಲಕವಿರಿಸಿ ಶುದ್ಧ ಚಿತ್ತದ ರುದ್ರಾಕ್ಷಿ ಧರಿಸಿ ಕೈಯಲ್ಲಿ ಡಮರುಗ ಇರಿಸಿ
ಶಾಂತಚಿತ್ತನಾಗಿ ಬುದ್ಧಿ ನಿಯಂತ್ರಣದಲ್ಲಿರಿಸಿ ಅಹಂಕಾರ ನಾಶಗೊಳಿಸೊ ಮಹಾದೇವನು
ದೇವರುಗಳ ದೇವನು ಬಂಧ ರಹಿತ ಶಿವನು
ಸರ್ವಸೃಷ್ಟಿಗಳಿಗೂ ಜೀವ ನೀಡುವ ದೇವನು
🌿🌺🌿🌺 ಶೃತಿ ಶೈವ 🌺🌿🌺🌿

-



ಪವಡಿಸು ಪರಮಾತ್ಮನೇ ಪಾಪದ ಜೀವನದಿಂದ
ಈ ಪಾಪಿಯ ಶಿವಾಕ್ಯಳನ್ನಾಗಿ ಮಾಡು,
ಈ ಪಾಪಿಗಳ ಲೋಕದಿ,ಮದ ,ಮತ್ಸರ, ಕ್ರೋಧ ,
ಮೋಹದ ಜಗದಿಂದ ನನ್ನ ನಿನ್ನೆಡೆಗೆ ಕರೆದುಬಿಡು,
ನನ್ನದಲ್ಲದ ಮನೆ ,ಮನದಿ ಅರಸಿಯಾಗುವ ಆಸೆ ಉಳಿದಿಲ್ಲ
ಇನ್ನು ನಿನ್ನ ಚರಣದಾಸಿಯಾಗಿಯೇ ಜೀವನ ಸವೆಸುವೆ,
ಎನ್ನಾತ್ಮದ ಜ್ಯೋತಿ ನೀನು, ಈ ದೇಹದ ಉಸಿರು
ನೀನು, ಪಾಪದ ಹೃದಯದ ಮಿಡಿತ ನೀನು,
ಸ್ಮೃತಿ ಪಟಲದೊಳು ಸ್ಮರಿಸುವೆ ನಿನ್ನನ್ನೇ
ಪ್ರತಿಕ್ಷಣವೂ, ಮಡಿಯುವ ಮುನ್ನ ಮಡಿಲೊಳು
ತೋಡಿಕೊಳ್ಳುವಾಸೆ ಮನದ ನೋವನ್ನು ,
ನೀ ಕೊಟ್ಟ ಜೀವಕ್ಕೆ ಒಮ್ಮೆ ದರ್ಶನ ನೀಡಿ
ಪಾವನ ಮಾಡೋ ಹರನೆ ಈ ಜೀವನವ...

-✍️ ಭಾವನ ಮೌನಿ

-



ಮಾತು ಮೌನವಾಗಿ
ಭಾವನೆಗಳು ಬಂದಿಯಾಗಿ
ಕನಸುಗಳು ಕೈ ತಪ್ಪಿ ಕಲ್ಲಾಗಿ
ಆಸೆಗಳು ಲಯವಾಗಿ
ನಾನು ಸೋತು
ಸೊರಗಿ ಬಿದ್ದಿದ್ದೇ
ಕಾಣದ ಕೈಯೊಂದು
ಕೈ ಹಿಡಿದೆತ್ತಿ ನಡೆಸುತ್ತಿದೆ..!!

-


21 JUN 2020 AT 7:55

ಸಾಧ್ಯವೇ ಇಲ್ಲ
ಸೇರಲು ಶಿವ ಚರಣ
ಕಳೆದು ಹೋಗುವವರೆಗೆ
ಮನಕಂಟಿದ ಗ್ರಹಣ

-



ಕರಮುಗಿದು ಬೇಡುವೆನು
ಕಾಲ್ಜಾರಿ ಬಿದ್ದವಳ
ಕೈಯಿಡಿದು ನಡೆಸು,
ಸೋತು ಸೊರಗಿದವರಿಗೆ
ಗೆಲುವಿನ ಹಾದಿಯ
ತೋರಿಸು...!!

-



ನಿನ್ನನ್ನು ನನ್ನ
'ಶಿವ'ನಲ್ಲಿ ಕಂಡೆ
ಆ 'ಶಿವ'ನನ್ನು ನೀನು
ಕರೆದುಕೊಂಡಾಗ
ನಾನು ತಬ್ಬಲಿಯಾದೆ...
ನಿನ್ನ ಹತ್ತಿರ ಸುಳಿಯುವ
ಯೋಗ್ಯತೆಯೂ ನನಗಿಲ್ಲ..
ನೀನೇ ನನ್ನಲ್ಲಿ ಆವರಿಸಿ
ನನ್ನ ಬದುಕಿಗೊಂದು
ಅರ್ಥ ಕೊಡು...

-


16 JUN 2020 AT 8:22

ಎಲ್ಲರಿಗೆ ಎಲ್ಲ ಕೊಟ್ಟು
ಎಲ್ಲ ಬಿಟ್ಟವನಂತೆ ನೀನು
ಬಿಟ್ಟು ಬಿಡದ ಜಗಕೆ ಒಳ್ಳೆಯದ ಬೆಸೆದು
ಕೆಟ್ಟದ್ದೆಲ್ಲ ಸುಟ್ಟವನಂತೆ ನೀನು

"ಶಿವ ನಿನ್ನಿಂದಲೇ ಆದಿ,ಶಿವ ನೀನೆ ಅಂತ್ಯ"

-


14 MAY 2020 AT 17:27

ಅಮಲೊಂದು ಏರುತಿದೆ ನೆತ್ತಿಯನು ಮೀರಿ
ದಟ್ಟ ಹೊಗೆಯೊಳಗೆ ಬುದ್ಧಿಯನು ತೂರಿ
ಅತೀ ಶಾಂತ ಮುಖ,ಜೊತೆಗೊಂದು ಮಂದಹಾಸ
"ಶಿವ" ನಿನ್ನ ಹೆಸರಲ್ಲಿ "ಹಸಿರೆ"ಳೆದು ಉಪವಾಸ

-


28 NOV 2019 AT 9:09

ಅಪ್ಪಟ ರಮಣೀಯನು ಇವನೆ,
ಅತ್ಯಂತ ವಿಕೃತನು ಇವನೆ,
ಬ್ರಹ್ಮಾಂಡದ ಪ್ರಾತಿನಿಧ್ಯದ
ಪ್ರತಿರೂಪವು ಇವನೆ,
ತನ್ನ ಉಪಾಸಕರೊಳಗೆ
ತಾರ್ಕಿಕ ಜಗತ್ತಿನ ಉಧ್ಬವಕೆ
ಕಾರಣನೂ ಇವನೆ.

-


21 FEB 2020 AT 7:29

ಮಿಥ್ಯ ಈ ಭವಸಾಗರ
ಸತ್ಯ ಅವನೊಬ್ಬನೇ !
ಚಂಚಲವು ಉಳಿದೆಲ್ಲವೂ
ನಿಶ್ಚಲನು ಅವನೊಬ್ಬನೇ !
ನಿರ್ಲಿಪ್ತ ನಿಸ್ವಾರ್ಥ ಭಾವಗಳಿಗೆ
ಮೂರ್ತಿಯು ಭೈರವನೊಬ್ಬನೇ !
ನಶ್ವರವೇ ಇಲ್ಲಿ ಎಲ್ಲವೂ
ಶಾಶ್ವತನು ಈಶ್ವರನೊಬ್ಬನೇ !

-