QUOTES ON #ಭಯ

#ಭಯ quotes

Trending | Latest

ಕರಾಳ ರಾತ್ರಿಯ ಭಯದಿಂದ
ನಾನು ನಕ್ಷತ್ರಗಳನ್ನು ತುಂಬಾ
ಪ್ರೀತಿಯಿಂದ ಪ್ರೀತಿಸುತ್ತಿದ್ದೇನೆ..

-



ಹೈಕು
ಭಯದ ರೂಪ
ಭಕ್ತಿ ; ಮೌಢ್ಯತೆಯನ್ನು
ಬೆಳೆಸುವುದು.

-


16 SEP 2020 AT 10:09

ಹೊಟ್ಟೆ ಹಸಿದಂತೆಲ್ಲ
ಕೋಪವೆಂಬ ಅತಿಥಿ,
ಭಯವೆಂಬ ಅಭ್ಯಾಗತ
ಮನದ‌ ಮನೆಯನ್ನು
ಆವರಿಸಿಯೆ ಬಿಡುತ್ತಾರೆ!

-



ಭಯ ನಮ್ಮನ್ನು ಯಾವಾಗಲೂ
ಖೈದಿಯನ್ನಾಗಿ ಮಾಡಿ ಬಿಡುತ್ತವೆ ಗಾಲಿಬ್
ಅದೇ ಮುಕ್ತ ವಿಚಾರಗಳು ನಮ್ಮನ್ನು
ಅರಸನನ್ನಾಗಿ ಮಾಡಿ ಬಿಡುತ್ತವೆ.

-



ಕಳೆದುಕೊಳ್ಳುವ ಭಯ
ಪಡೆದುಕೊಳ್ಳುವ ಬಯಕೆ
ಇರದೇ ಹೋಗಿದ್ದರೆ
ದೇವರೂ ಇರುತ್ತಿರಲಿಲ್ಲ,
ಪೂಜೆಯೂ ಇರುತ್ತಿರಲಿಲ್ಲ..

-


21 MAY 2021 AT 11:14

ರೋಗಕ್ಕಿಂತ ಭಯವೇ ಅಪಾಯಕಾರಿ
ಮನದಿಂದ ಕಿತ್ತೊಗೆಯಬೇಕು ಮೊದಲು,
ಧೈರ್ಯವೆಂಬ ಮದ್ದೆ ತುಂಬಾ ಸಹಾಯಕಾರಿ
ಇದುವೇ ಅಸ್ತ್ರ ನೆಮ್ಮದಿಯಿಂದ ಬದುಕಲು.

-



ಕಂದಮ್ಮ.. ಮುದ್ದು ಕಂದಮ್ಮ
ಸುತ್ತಿ ಸುತ್ತಿ ಮಲಗಬೇಡಮ್ಮ

ನಿನ್ನ ತುಂಟಾಟವೇ ನನಗೆ ಸವಿಜೇನು
ನಿನ್ನ ಮಾತುಗಳೆ ಎನಗೆ ಹಾಲುಜೇನು
ನಿನ್ನ ಮೌನ ಸಹಿಸೆನು ನಾನು
ಉರಿ, ಚಳಿ, ವಾಂತಿ...
ಸುಳಿಯದಿರಲಿ ನಿನ್ನ ಸುತ್ತ-ಮುತ್ತ...
ನಿನ್ನ ನಗುವಿನ ಛಾಯೆಯಲ್ಲಿ
ನನ್ನ ನಗುವ ಹುಡುಕುತಿರುವೇನು..

-



ಅವರೇನಂತಾರೆ...
ಇವರೇನಂತಾರೆ....
ಸಮಾಜ ಏನನ್ನುತ್ತೆ...
ಇದರ ಹೊರತಾಗಿ ನಾವು
ಇನ್ನೆನೋ
ಯೋಚಿಸಬೇಕಾಗಾಗಿದೆ..
ಅಂದಾಗ ಮಾತ್ರ ಜೀವನ
ನೆಮ್ಮದಿಯ ಮತ್ತೊಂದು
ತಾಣವಾಗಬಲ್ಲದು !

-



ಹೌದು ಏಕೆಂದರೆ
ಎಷ್ಟು ಗಟ್ಟಿ ಮನಸ್ಸಾಗಿದ್ದರೂ ಸಾಲದು ಈ ಸಾವು-ನೋವುಗಳನ್ನು ನೋಡಿ ಮನಸ್ಸು ಸ್ಥಿಮಿತ ಕಳೆದು ಕೊಳ್ಳುತ್ತಿದೆ.ಭಯ ಎನ್ನುವುದು ಸಹಜವಾಗಿ ಬಂದೇ ಬರುತ್ತದೆ. ಆದರೂ ನಾವು ಆದಷ್ಟು ಧೈರ್ಯವಂತರಾಗಿರೋಣ. ಏಕೆಂದರೆ ಭಯದಿಂದಲೇ ಕಾಯಿಲೆ ಹೆಚ್ಚಾಗುವುದು ಹೊರತು ಕಮ್ಮಿಆಗಲ್ಲ.. ಅದಕ್ಕಾಗಿ ಎಲ್ಲ ದೇವರ ಮೇಲೆ ಹಾಕಿ ನಿಶ್ಚಿಂತರಾಗಿರೋಣ ಎಂಬುದು ನಮ್ಮೆಲ್ಲರ ಅಂಬೋಣ.

-



ಯಾಕೋ ಏನೋ ನನ್ನವರ ಕಣ್ಣುಗಳನ್ನ
ಒಂದ್ಸಲ ನೋಡುದ್ರೆ ಸಾಕು
ತುಂಬಾನೇ ಭಯ ಆಗುತ್ತಪ್ಪಾ ನನಗೆ!!

-