QUOTES ON #ಕಥನಕವನ

#ಕಥನಕವನ quotes

Trending | Latest
3 MAY 2022 AT 11:44

ಕಥನ ಕವನ : ಪರಶುರಾಮ ಜಯಂತಿ

ವಿಪ್ರ ರಾಮಭದ್ರನು
ಕ್ಷತ್ರಿಯ ಗುಣ ಸಂಪನ್ನನು
ಈಶನ ಪರಮಭಕ್ತನು
ಪರಶು ಅಸ್ತ್ರದ ಮಾಲಿಕನು//
ಮಹಾ ಕೋಪಿಷ್ಟನು
ಸರ್ವ ಜನ ಹಿತಸಂರಕ್ಷಕನು
ವೈಶಾಖ ಮಾಸ ಶುಕ್ಲ ಪಕ್ಷದ
ತೃತೀಯದಂದು ಜನಿಸಿದನು//

ಭೂಲೋಕದ ದೊರೆಗಳ ಅನೀತಿಯ
ಮಟ್ಟ ಹಾಕಲು ವಿಷ್ಣುವೇ ಅವತಾರವೆತ್ತಿದನು
ಹೆತ್ತ ತಾಯಿಯ ಕೊಂದವನು
ಪಿತೃ ವಾಕ್ಯ ಪಾಲಕನು//
ಮೂರು ವರಗಳ ಕೇಳುತಲೇ
ಮಾತೆಯ ಮರಳಿ ಪಡೆದವನು
ಜಾಣ್ಮೆಯಿಂದಲಿ ಪರಿಸ್ಥಿತಿಗಳ ಎದುರಿಸಿ ನಿಲ್ಲುತ
ಮನುಕುಲಕೆ ನೀತಿಯ ಸಾರಿದನು//

- ಸಿಂಧು ಭಾರ್ಗವ ,ಬೆಂಗಳೂರು

-


15 DEC 2020 AT 19:07

ಮಕ್ಕಳ ಸಾಹಿತ್ಯ ವಿಭಾಗದಲ್ಲಿ
ಕಥನ ಕವನ: ಹೆತ್ತವರಿಗೆ ಹೆಗ್ಗಣ ಮುದ್ದು

ರಾಜುವು ಗೋಪಿಯ ಮನೆಯಲಿ‌ ಅನುದಿನ
ಆಟವ ಆಡಲು ಹೋಗುವನು
ಗೋಪಿಯ ಆಟಿಕೆಯ ಕದ್ದು
ತನ್ನ ಜೇಬಿಗೆ ಇಳಿಸಿದನು//೧//

ಅಮ್ಮನು ಮರುದಿನ ಬಟ್ಟೆಯ ಒಗೆಯುವ
ಸಮಯದಿ ಕಂಡಳು ಆಟಿಕೆಯ
ಹೊಸದೀ ಆಟಿಕೆ, ಹೇಗೆ ಬಂದಿದೆ?
ಕರೆದು ಕೇಳಿದಳು ರಾಜುವನ//೨//

ರಾಜುವು ನುಡಿದ ಹಾದಿಯ ನಡುವೆ ಸಿಕ್ಕಿತು
ಈ ಹೊಸ ಆಟಿಕೆಯು
ಯಾರದು ಎಂದು‌ ನಾಳೆ ಕೇಳಲು
ಜೇಬಿನಲ್ಲಿ ಇರಿಸಿದೆನು//೩//

ತಾಯಿಯು ತನ್ನಯ ಕೆಲಸದಲಿರಲು
ಗೋಪಿಯ ಅಳುವು ಜೋರಾಯ್ತು
ಬೆಲೆ ಬಾಳುವ ಆಟಿಕೆ ಇಲ್ಲೆಂದು
ಅಮ್ಮನಿಂದ ಏಟು ಬೀಳುತಿತ್ತು//೪//

ಅನುಮಾನ ಬಂದ ರಾಜುವಿನ ತಾಯಿ
ಬಳಿ ಹೋಗಿ ಗೋಪಿಯ ಕೇಳಿದಳು
ತನ್ನ ಮಗನೇ ಕದ್ದಿರಬಹುದು ಎಂದು
ಅರಿತು ಮೌನವಹಿಸಿದಳು//೫//

ಮಗನ ತಪ್ಪನು ತಿದ್ದಲು ಹೋಗದೇ
ತಾಯಿಯು ತಪ್ಪು ಮಾಡಿದಳು
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ
ಮೋಹದ ಪೊರೆಯಲಿ ಸಿಲುಕಿದಳು //೬//

-


25 JUN 2024 AT 18:12

ಮಕ್ಕಳ ಸಾಹಿತ್ಯ: ಕಥನ ಕವನ
೨) ಮತ್ಸರ ಒಳ್ಳೆಯದಲ್ಲ

ರಾಜು ರವಿಯು ಬಾಲ್ಯದಿಂದ
ಜೊತೆಗೆ ಬೆಳೆದು ಬಂದರು
ಆಟದಲ್ಲಿ ಓದಿನಲ್ಲಿ ಅವರೇ
ಮುಂದೆ ಇರುವರು..

ರಾಜುವನ್ನು ಪ್ರಾಣಕ್ಕಿಂತ
ಹೆಚ್ಚು ಪ್ರೀತಿ ಮಾಡುವ
ತನ್ನ ಗೆಳೆಯನೆಂಬ ಹೆಮ್ಮೆ
ಎಲ್ಲ ಕಡೆಯೂ ಹೇಳುವ
ಇನ್ನೂ ಇದೆ->

-


15 DEC 2021 AT 23:50

ಚಿಗುರಿದ ಕನಸು

ಹೊನ್ನಿನ ಅರಮನೆ
ಚಿನ್ನದ ಮನಸುಳ್ಳ
ರತ್ನದಂತ ರಾಜಕುವರಿ ಇರುವಳು!
ಕನ್ಯೆಗೆ ವರನನ್ನು
ನೋಡಲು ಬಂದವರು
ಒಬ್ಬೊಬ್ಬರಾಗಿ ಹಿಂತಿರುಗಿದರು!!
( ಪೂರ್ತಿ ಕವಿತೆ ಓದಿರಿ )

-


30 JUL 2019 AT 3:21

ಅವಳ ಕಣ್ಣು ಹೇಳಿದ ಕತೆ
ಕ್ಯಾಪ್ಶನ್ ಓದಿ.

-


1 JUN 2020 AT 15:56

ಮಕ್ಕಳ ಕಥಾ ಕವನ : ಪೋರನಿವನು

ಅಂಬೆಗಾಲಿಡುತ ಪೋರ, ಸುತ್ತಾಡಿಕೊಂಡು ಬಂದ ಊರ
ಅಮ್ಮ ಸೇರಿದಳು ಅಡುಗೆಮನೆ
ಆಯುತ್ತಿದ್ದಳು ತರಕಾರಿ ನಮೂನೆ
ಕೆಲಸ ಮುಗಿಸಿಬಿಡಬೇಕು ಎಂಬ ಯೋಚನೆ

ಮುಂದೆ ಓದಿರಿ...

-


14 MAR 2020 AT 16:51

ಜನ್ಮದಿನ

ಈ ದಿನ ನಂಗೆ ತುಂಬಾ ಅಮೂಲ್ಯ
ಯಾಕಂದ್ರೆ ನನ್ನ ಬದುಕಿನ ಅದ್ಬುತ ನೀನು
ನೀನು‌ ಭೂಮಿಗೆ ಬಂದ ದಿನ ಇಂದು..
ಅವಳ ಕಣ್ಣಲ್ಲಿ ಸಂತಸದ ನೀರು..
ಪರದೆಯ ಮೇಲಿನ ಮಾತು ಕೇಳಿ
ಇವಳ ಕಣ್ಣಲ್ಲೂ ನೀರು..
ನೀವು ಹುಟ್ಟಿದ ದಿನ ನಂಗೆ ಇಷ್ಟನೇ ಇಲ್ಲ ರೀ.
ರಿಂಗಣಿಸಿತಿತ್ತು ಇನಿಯನ ಮಾತು ಕಿವಿಯಲ್ಲಿ ಮರಳಿ..
ಇವಳ ಕಣ್ಣಲ್ಲೂ‌ ನೀರಿತ್ತು..
ಸಂತಸದಿಂದಲ್ಲ..

-


30 JUL 2019 AT 14:44

"ಕಾಲಚಕ್ರ ತಿರುಗಿದಾಗ"
ಕಥನ ಕಾವ್ಯ.
ಕ್ಯಾಪ್ಶನ್ ಓದಿ..

-


18 JAN 2022 AT 18:56

ಶೀರ್ಷಿಕೆ: ಕುಡುಕನ ಭ್ರಮೆ

ಕುಡುಕನೊಬ್ಬ ರಾತ್ರಿಯಲ್ಲಿ ಹಾಡು ಹಾಡುತ ಬಂದನು
ತನ್ನದೇ ಲೋಕದಲಿ ತಾ ವಿಹರಿಸುತ್ತಿದ್ದನು
ಬೀಸುವ ಸಿಮಗಾಳಿಗೆ ಬೀಡಿಯೊಂದು ಬಾಯಲಿ
ಅಡ್ಡದಿಡ್ಡಿ ಹೆಜ್ಜೆ ಹಾಕಿ ನಡೆಯುವ ಮೋಜು ನೋಡಿರಿ

ಪೂರ್ತಿ ಕವನ ಓದಿರಿ->

-


18 APR 2021 AT 23:57

"ನಾನಿಲ್ಲದೆ ಇರಳವಳು ಕಮರುವಳು ಬರಡುವಳು,
ಕಂಬನಿಯೂ ಬತ್ತಿರಲು ಅಗಲಿಕೆಯಿಂ ಹಲುಬುವಳು,
ನಮ್ಮ ಸಮ್ಮಿಲನಕ್ಕೆ ಸಾಕ್ಷಿ ಈ ಹಚ್ಚಹಸಿರು,
ನಮ್ಮಿಬ್ಬರ ಉಸಿರಿಗೆ 'ಪರಿಸರ'ವೆಂದೇ ಹೆಸರು!"

-