Madhushri A P   (ಮಧು ಅಕ್ಷರಿ)
120 Followers · 31 Following

ಭಾವಜೀವಿ, ಕನ್ನಡತಿ, ಕವಯತ್ರಿ
Joined 20 October 2019


ಭಾವಜೀವಿ, ಕನ್ನಡತಿ, ಕವಯತ್ರಿ
Joined 20 October 2019
21 NOV 2022 AT 0:42

ಕಬ್ಬಿಣದ ಸಲಾಕೆ ೫೧

ಮೊಹಬತ್ತಿನ ಇಮಾರತ್ತು ಎಂದುಕೊಂಡೆಯೇನು?
ದೇಹವನ್ನು ದಫನ್ ಮಾಡಲು
ರೆಫ್ರಿಜರೇಟರು ಕಣೋ ಹುಡುಗ
ದೇಹವನ್ನು ಕಾಪಿಡಬಹುದಷ್ಟೇ ಪ್ರೇಮವನ್ನಲ್ಲ

-


10 NOV 2022 AT 13:53

Lakho vajah the, Nafrath ke liye
Humne pyaar karna chun liya
Chin liya hai, Bahoth kuch thumne
Jo diya use hi humne gin liya

Cheer ke bikre, Pade hai sapne
Thukda thukda yaha vaha
Jakam se hi bara, pada hai dil ye
Tutna ab tho adath huva

Sao baar tho, Ham gire hai lekin
Phir sambalke kade rahe
Ha bahoth ro chuke hai ham
par hasna ab thak bhule nahi

Gam hi dete rehna he zindagi
Pyaar dekhe hasenge hum
Gile shikve ab nahi hai
Hasthe rehena seeke hai hum

Gum bulane Ke liye hi
Jeethe rehna seeke hai hum
Jeethe jeethe aadath huva hai
Aansuvonko hi peethe hai hum

Kal agar hum Na rahe tho
Naam rahega zaroor yaha
Lutke bhi in Bazaaron me
Dekhe jaayenge zaroor

-


16 OCT 2022 AT 6:58

ಕಬ್ಬಿಣದ ಸಲಾಕೆ ೫೧

ಹಂಚಿಕೊಂಡು ತಿನ್ನುವುದನ್ನು ಮಕ್ಕಳಿಗಷ್ಟೇ ಹೇಳಿಕೊಡಲಾಗುವುದು.

ಇಲ್ಲಿ ಭಾರತದಲ್ಲಿ ಕಂಪನಿಯೊಂದರ ಕಾರು
ಅತಿ ಹೆಚ್ಚು ಮಾರಾಟವಾಗಿ ದಾಖಲೆ ಬರೆಯುತ್ತದೆ
ಇಲ್ಲೆ ಹಸಿವಿನ‌ ಸೂಚ್ಯಾಂಕದಲ್ಲಿ ಭಾರತವೇ
ಮತ್ತೊಮ್ಮೆ ಜಗದೆದುರು ಹೀನಾಯವಾಗಿ ಕುಸಿಯುತ್ತದೆ

ಇದ್ದವರಿರುವುದೂ ಇಲ್ಲೇ
ಇಲ್ಲದವರು ನರಳುವುದೂ ಇಲ್ಲೇ
ಅನ್ನ ಹಂಚುವವರು ಕಡಿಮೆಯೇ
ಎಲ್ಲರೂ ದ್ವೇಷ ಹಂಚುವಲ್ಲಿ ವ್ಯಸ್ಥ

-


11 OCT 2022 AT 19:14

ಕಬ್ಬಿಣದ ಸಲಾಖೆ ೫೦

ಹೆಣ್ಮಕ್ಕಳ ದಿನದ ಶುಭಾಶಯಗಳು ಕಣೆ

ಅವಳು ನಕ್ಕು ಹೊರ ನಡೆದಿದ್ದಳು
ಹೆಣ್ಣಾದುದಕೆ ಸಂಭ್ರವೂ ಇರಲಿಲ್ಲ.
ಹೆಗಲೇರಿದ ಬದುಕ ನೊಗ ಅವಳ
ಪೂರ್ಣ ಹೆಣ್ಣಾಗಲೂ ಬಿಡಲಿಲ್ಲ.

-


2 OCT 2022 AT 20:49

ನೆರಳು

-


26 SEP 2022 AT 16:10

ಆರಿಸಲು ಬರುವುದಿಲ್ಲವೆನೇ?
ಅಮ್ಮ ಬೈದಾಡಿದಳು
ಉತ್ತಮವಾದುದನ್ನು ಆಯ್ದು ತರಲು
ಬರುವುದಿಲ್ಲವೆಂಬ ದೂರು ಅವಳದು

ಆಯ್ದುಕೊಳ್ಳಲೇನಿದೇ?
ಯಾರೋ ಹೆಕ್ಕಿ ಬಿಟ್ಟ ತರಕಾರಿಗಳಲ್ಲಿ
ಮಾರುವವನೂ ಆಯ್ದೇ ತಂದಿದ್ದನಲ್ಲವೇ?
ನಾ ಆಯ್ದು ಬಿಟ್ಟದ್ದೂ ಇನ್ಯಾರದೋ ಆಯ್ಕೆ!

ಆಯ್ಕೆಯ ಸ್ವಾತಂತ್ರ್ಯದ ಬಗೆಗೆ
ಪುಂಕಾನು ಪುಂಕ ಭಾಷಣ ನಡೆದಿತ್ತಲ್ಲಿ
ಸಭಿಕರ ಕರತಾಡನದಿ ತುಂಬಿದ್ದ ಸಭೆಗೆ
ಭಾಷಣಕಾರರನ್ನೂ ಆಯ್ದೇ ತಂದಿದ್ದರು

ಯಾರೋ ಹೆಕ್ಕಿ ಬಿಟ್ಟ ಬಟ್ಟೆಗಳೇ
ನಮ್ಮ ಆಯ್ಕೆಯೆಂದು ತೊಟ್ಟು
ಯಾರೋ ಆಯ್ದುಕೊಳ್ಳಲೊಲ್ಲದವರಿಗೆ
ಕೊರಳ ಒಡ್ಡಿ ಮದುವೆ ಆಯ್ಕೆ ಎಂದವರು ನಾವು

ನನಗೆ ಚಂದವೆನಿಸಿದ್ದು
ಇನ್ಯಾರೋ ತ್ಯಜಿಸಿಹೋದದ್ದು
ತಟ್ಟೆಯೊಳಗೆ ನಂತರ ಹೊಟ್ಟೆಯೊಳಗೆ ಸೇರಿದ್ದು
ಪಕ್ಷಿ, ಹುಳುಗಳೂ ಮುಟ್ಟಲು ತಿರಸ್ಕರಿಸಿದ್ದು

ಹೇಗೆ ಹೇಳಲಿ ಅಮ್ಮನಿಗೆ ನನ್ನ ಇಬ್ಬಂದಿ?
ನನ್ನ ಜನುಮವೂ ಅವಳ ಆಯ್ಕೆಯಲ್ಲದಿರುವಾಗ
ಏನು ಅಡಿಗೆ ಮಾಡಬೇಕೆಂಬುದರ ಆಯ್ಕೆಯೂ
ಅವಳದಲ್ಲ ದಿನವು. ಪರರ ಆಯ್ಕೆ ಅವಳ ಬದುಕು

ಆದರೂ ಆಯ್ದುಕೊಳ್ಳುತ್ತಾಳೆ
ಉಳಿದುದರಲ್ಲಿ ಅದ್ಬುತ ದೊರಕೀತೆಂದು
ಅಂದಗಾಣಿಸ ಹೊರಡುತ್ತಾಳೆ
ಹೆಕ್ಕಿ ತಂದ ಉಮೇದುಗಳಲ್ಲೇ

-


24 SEP 2022 AT 7:58

ಕಬ್ಬಿಣದ ಸಲಾಕೆ ೪೯

ಬಿಕ್ಕಳಿಸಿ ಅಳುತ್ತಿದ್ದ
ಅವಳ ಮಗುವಿಗೂ
ಕೆಕ್ಕರಿಸಿ ನೋಡುತ್ತಿದ್ದ
ಅವಳ ಒಡೆಯನಿಗೂ
ಸಣಕಲು ದೇಹದ
ಕೆಲಸದವಳ
ತುಂಬು ಮೊಲೆಗಳ
ಮೇಲೇ ಗಮನ

-


23 SEP 2022 AT 0:58

ಬಾಗಿಲಿನ ರಂಗೋಲಿ
ಹೂನಗೆಯ ಚೆಲ್ಲಿತ್ತು
ಸ್ಥಬ್ಧವಿದ್ದ ಜಗದಲ್ಲಿ
ತಂಗಾಳಿ ಬೀಸಿತ್ತು
ಈ ದಾರಿಯಲ್ಲಿ
ನೀ ಸುಳಿದೆ ಎಂಬ
ಗುಮಾನಿಯಿದೆ ಹುಡುಗ
ಕೈತೋಟದ ಹೂ ಕೂಡ
ನಿನ್ನ ಪರಿಮಳ ಬೀರಿದೆ

-


20 AUG 2022 AT 23:54

ಕಬ್ಬಿಣದ ಸಲಾಕೆ ೪೮

ಅವಳು ದಲಿತೆಯಂತೆ
ಇನ್ನೊಬ್ಬಳು ಸವರ್ಣೀಯಳಂತೆ
ಅವಳೋ ಬ್ರಾಹ್ಮಣಳು
ಇವಳು ಮುಸ್ಲೀಮಳಂತೆ

ಅರೆ ಬಲತ್ಕರಿಸಿದ್ದು ಹೆಣ್ಣನ್ನೋ? ಧರ್ಮದ ಸರ್ಟಿಫಿಕೇಟ್ ಅನ್ನೋ?

-


20 AUG 2022 AT 23:51

ಕಬ್ಬಿಣದ ಸಲಾಕೆ ೪೭

ಮೈ ಕೈ ತುಂಬಿ ಬೆಳೆದು ನಿಂತ
ಜಿಂಕೆಯದಲ್ಲವೇ ಅಪರಾಧ
ಹುಲಿಯ ಹಸಿವೆಯನ್ನು ಕೆರಳಿಸಿದ್ದಕ್ಕಾಗಿ
ಸಾವಷ್ಟೇ ಶಿಕ್ಷೆಯು
ಸಂಭವಿಸಿದ ಅತ್ಯಾಚಾರ, ಕೊಲೆಗಳಲ್ಲಿ
ಅಪರಾಧಿಯದೇನಿದೆ ಅಪರಾಧ?
ಪ್ರಚೋದನೆಗೊಳಪಡುವುದು
ಗಂಡಸ್ತನವಲ್ಲವೇ?
ಪುರುಪ್ರಧಾನ ಸಮಾಜ ಭೋದಿಸಲಿಲ್ಲವೇ?

#ಕೇರಳ_ಕೋರ್ಟ್_ತೀರ್ಪು

-


Fetching Madhushri A P Quotes