ಕಷ್ಟಪಟ್ಟರೆ ಸುಖದ ದಾರಿ
ಕೊಟ್ಟೇ ಕೊಡುತ್ತಾನೆ ಆ ಮುರಾರಿ
ನಮ್ಮ ಪರಿಶ್ರಮದಿಂದ ಅದೃಷ್ಟ ಒಲಿಯುತ್ತದೆ
ಇಲ್ಲದಿದ್ದರೆ ದುರಾದೃಷ್ಟ ನಮ್ಮ ಬೆನ್ನತ್ತುತ್ತದೆ.-
ಯಾರೋ ಅದೃಷ್ಟ ಎಂದ
ಮಾತ್ರಕ್ಕೆ ನಾವೆಲ್ಲ
ಬದುಕಲು ಸಾಧ್ಯವಿಲ್ಲ
ಯಾರೋ ದುರದೃಷ್ಟ ಎಂದ
ಮಾತ್ರಕ್ಕೆ ನಾವೆಲ್ಲ
ಸಾಯಲು ಸಾಧ್ಯವಿಲ್ಲ
ಮಹಾದೇವನು ನಡೆ ಎಂದರೆ
ನಡೆಯುವುದು ಜಗವೆಲ್ಲ
ಆ ನಿಯಮ ಮುರಿಯುವರಿಲ್ಲಿಲ್ಲ-
ನಮ್ಮ ಅದೃಷ್ಟ ಚೆನ್ನಾಗಿದ್ದರೆ
ನಮ್ಮನ್ನು ಚೆನ್ನಾಗಿ
ನೋಡಿಕೊಳ್ಳುವ ಜೀವನ
ಸಂಗಾತಿ ಸಿಕ್ಕಿದರೆ
ಬಾಳಲ್ಲಿ ಅದಕ್ಕಿಂತ ಸುಖ
ಇನ್ನೇನಿದೆ ಕೋಟಿ ಕೋಟಿ
ದುಡ್ಡಿನಿಂದಲೂ ಸಹ ಅಷ್ಟು
ನೆಮ್ಮದಿ ಸಿಗಲಿಕ್ಕಿಲ್ಲ....-
ಅನೂಹ್ಯವಾಗದ
ಕನಸುಗಳು ನನಸಾಗುವುದು
ಅವ್ಯಾಹತವಾದ ದುಡಿತಕೆ ದಕ್ಕುವ ಪ್ರತಿಫಲಗಳು
ಅಂತರಿಂದ್ರಗಳ ಅರಿವಿಗೂ ಬಾರದ
ಅಂತರ್ಭಾವಗಳು ವ್ಯಕ್ತವಾದಾಗ
ಅಂತರ್ಗತವಾಗಿರುವ ಅನಿಷ್ಟಗಳು
ಅಂತರ್ದಾನವಾಗುವುದು
ಅನಿರೀಕ್ಷಿತವಾಗಿ ಆಗಮಿಸುವ ಲಕ್ಷ್ಮೀಕಟಾಕ್ಷ
ಅಂತರಂಗದರಮನೆಗೆ ಇವೆಲ್ಲದರ
ಆಗಮನವೇ ಅದೃಷ್ಟ..
-
ಅದೃಷ್ಟದ ಬಾಗಿಲು ಒಂದೇ ಬಾರಿ
ತಟ್ಟುತ್ತದೆ ಎಂದಿದ್ದರು ಅವರು.!
ಹಾ! ಅದು ದಿಟವೇ ಇರಬೇಕು
ಕನಸುಗಳನ್ನು ನನಸಾಗಿಸುವ ಕಾಮಗಾರಿಯಲ್ಲಿ
ಮನಸ್ಸು ಲೀನವಾಗಿದ್ದಾಗ ಹೃದಯದ
ಬಾಗಿಲನ್ನು ಯಾರೋ ಬಡೆದಿದ್ದರು,
ಯಾರು ಎಂದು ನೋಡುವಷ್ಟರಲ್ಲಿ
ಇನ್ನೊಬ್ಬರ ಗೂಡಿನ ಶಾಶ್ವತ ನಿವಾಸಿಯಾಗಿದ್ದರು.!-
ಸತತವಾಗಿ ಸೋತವರಿಗೆ ಅದು ಕೂಡ
ಒಮ್ಮೊಮ್ಮೆ ನಂಬಲಾಗದ ಸತ್ಯವಾಗಿರುತ್ತದೆ
ಕನಸೋ ನನಸೋ ಎಂದು ಅರಿಯಲು
ಒಂದು ಕ್ಷಣ ಸಮಯ ಹಿಡಿಯುತ್ತದೆ..,-
ನಮ್ಮ ಜೀವನದಲ್ಲಿ ಎಂದೆಂದೂ ಕಂಡಿರದ ಅದೃಷ್ಟ ತಟ್ಟನೆ ನಾವು ಎನಿಸದೆ ಬಂದು ನಮ್ಮ ಕೈ ಹಿಡಿದಾಗ ನಿಜವಾಗಿಯೂ ಕನಸಿನ ಭ್ರಮೆ ಉಂಟಾಗುತ್ತದೆ ಆದರೆ ಬಂದ ಅದೃಷ್ಟವನ್ನು ಯಾವತ್ತೂ ದೂರ ಮಾಡದೆ ನಾವು ಕೈಹಿಡಿಯಬೇಕು ಬಂದದ್ದನ್ನು ದೇವರ ದಯೆಯೆಂದು ಅನುಭವಿಸಿ ಬಿಡಬೇಕು ದೇವರ ದಯೆ ಇದ್ದರೆ ಕಷ್ಟವಿದ್ದಾಗ ಖಂಡಿತಾ ಯಾವುದೇ ಒಂದು ರೀತಿಯಲ್ಲಿ ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ.
-
ಜೀವನವೆ ಪರಮೈಶ್ವರ್ಯ
ಪುಣ್ಯದಿಂದ ಬಂದ ಅದೃಷ್ಟ.
ಮದ, ಮೋಹಕ್ಕೆ ಮೂಲ.
ಬಾಡುತಿರುವ ಹೂ ಮಾಲೆ,
ಬಚ್ಚಿಕೊಂಡ ಕಜ್ಜಿ ತುರಿಕೆ..
ಬೇಸರವುಂಟು ಮಾಡುವಂತೆ,
ಬಂದ ಅದೃಷ್ಟ ಅತಿಯಾದರೆ..
ಅದರ ಸಹವಾಸವೂ
ಕನಸಿನಲ್ಲೂ...
ಗುಣಗಾನ ಗೊಣಗಾಟವೇ ..-
ಅಮ್ಮನೆಂದರೆ ಕಂದನ
ಪಾಲಿನ ಅದೃಷ್ಟ ದೇವತೆ
ಆ ಮನದಲ್ಲಿದೆ ಪ್ರೀತಿಯ
ಸಿಹಿ ಮಧುರತೆ
ಅಮ್ಮನೇ ಕಂದನಿಗೆ
ಬೆಳಗುವ ದೀಪದಂತೆ.-
ಪಾಲಿಗೆ ಬಂದದ್ದು
ಪಂಚಾಮೃತ
ಒತ್ತಾಯ ಪೂರ್ವಕವಾಗಿ
ಪಡೆದದ್ದು ಕ್ಷಣ ಮಾತ್ರ.-