ಮಂದಿಯ ಮಾತು ಕೇಳಿ ತನ್ನ ಗಂಡನನ್ನು ಕುರೂಪಿಯಂತೆ ಕಾಣುವ ಹೆಣ್ಣು. ಹಾಗೂ ಕೇವಲ ಸೀಮಿತ ವಿಷಯಕ್ಕಾಗಿ ತನ್ನ ಹೆಂಡತಿಯನ್ನು ಬಳಸಿಕೊಳ್ಳುವ ಗಂಡು. ಇವರ ಸಂಸಾರ ದೇವರೇ ಕಾಪಾಡಬೇಕು..-
ಹೆಂಡತಿ ಕೂಲಿ ಮಾಡಿ ಸಂಸಾರ ಸಾಗಿಸಲು ಕಷ್ಟಪಡುತ್ತ, ಬಿಡಿಗಾಸಿಗಾಗಿ ಪರರ ಹತ್ತಿರ ಕೈ ಚಾಚುತ್ತಿದ್ದರೆ, ಗಂಡ ಹೆಂಡದಂಗಡಿಯ ಮಾಣಿಗೆ ಭಕ್ಷೀಸು ಕೊಡುತ್ತ ನಿಂತಿದ್ದನಂತೆ...
-
ಓರ್ವ ಮಹಿಳೆ ಮಗುವಿನ ಜನನಕ್ಕಾಗಿ
ತನ್ನ ಸೌಂದರ್ಯವನ್ನು ತ್ಯಾಗ ಮಾಡುತ್ತಾಳೆ,
ಅದೇ ಮಗ ಓರ್ವ ಸುಂದರ ಹೆಂಡತಿಗಾಗಿ
ತನ್ನ ತಾಯಿಯನ್ನೇ ತ್ಯಾಗ ಮಾಡುತ್ತಾನೆ..-
ರಕ್ತ ಹಂಚಿಕೊಂಡು ಹುಟ್ಟಿದ ಮಗನ ಎಂಜಲು ತಟ್ಟೆ ತೊಳೆಯುವ ತಾಯಿ ದೇವತೆಯಾದರೆ,
ಯಾವ ರಕ್ತ ಸಂಬಂಧವಿಲ್ಲದೆ ತಾಳಿ ಅನ್ನುವ
ಬಂಧಕ್ಕೆ ಶರಣಾಗಿ ನಮ್ಮ ಮನೆಗೆ ಬಂದು ನಾವು ತಿಂದ
ಎಂಜಲು ತಟ್ಟೆ ತೊಳೆಯುವ ಹೆಂಡತಿ ಕೂಡಾ ದೇವತೆಯೆ.-
ಹೆಂಡತಿ ಮುನಿಸ್ಕೊತಾಳೆ,
ತನ್ನ ಗಂಡ ಮುದ್ದು ಮಾಡ್ತಾನಾ ಇಲ್ವಾ ಅಂತ.
ತಮಾಷೆ ಮಾಡ್ತಾಳೆ,
ಭರಿಸ್ತಾನ ಇಲ್ವಾ ಅಂತ.
ಊಟ ಮಾಡದೇ ಹಾಗೆ ಇರ್ತಾಳೆ,
ಬಂದು ತಿನ್ನಿಸ್ತಾನ ಇಲ್ವಾ ಅಂತ.
ಕೋಪ ಮಾಡ್ಕೋತಾಳೆ,
ಬಿಟ್ಟು ಇರ್ತಾನಾ ಇಲ್ವಾ ಅಂತ.
ಕೊನೆಗೆ ಅಳ್ತಾಳೆ,
ಕಣ್ಣೀರು ಒರೆಸ್ತಾನ ಇಲ್ವಾ ಅಂತ.
ಇಷ್ಟೆಲ್ಲಾ ಅರ್ಥ ಮಾಡ್ಕೊಂಡು ಒಬ್ಬ ಗಂಡನಾಗಿ ನೀನು ಮಾಡಿದ್ರೆ,
ಜೀವನದಲ್ಲಿ ಎಂತಾ ಪರಿಸ್ಥಿತಿ ಬಂದ್ರೂ,
ನನ್ನ ಗಂಡ ನನ್ನ ಬಿಟ್ಟು ಹೋಗಲ್ಲ ಅಂತ
ಅವಳಿಗೆ ನಿನ್ನ ಮೇಲೆ ಅಪಾರ ನಂಬಿಕೆ ಬರುತ್ತೆ,
ಅವಾಗ ನಂಬ್ತಾಳೆ ನಿನ್ನ ಹುಚ್ಚಾಗಿ ಅವಳ ಪ್ರಾಣಕ್ಕಿಂತ ಹೆಚ್ಚಾಗಿ.-
ಬಟ್ಟೆ ಒಗೆಯುವಾಗ
ಕೆಲ ಹೆಂಡತಿಯರು,
ಒಗೆಯೊ ಬಟ್ಟೆಯಲ್ಲಿ ತನ್ನ
ಗಂಡನನ್ನ ನೋಡ್ಕೊಂಡು
ಒಗೀತಾರಂತೆ🤭
ಇಲ್ಲ ಅಂದ್ರೆ ಅವ್ರ
ಮನಸು ತಣ್ಣಗಾಗಲ್ಲ,
ಬಟ್ಟೇನೂ ಬೆಳ್ಳಗಾಗಲ್ವಂತೆ😜
ಹೌದಾ 🤔🤔-
ಮನೆಗೆ ದೀಪ ಹೆಂಡತಿ ಅಂತಾರೆ,
ಮತ್ತೆ ಗಂಡ ಏನು?🤔
ಅದರಲ್ಲಿ ಸುಟ್ಟು ಕರಕಲಾಗುವ ಬತ್ತಿ ನಾ🤔😳-
ಗಂಡಿನ ಎರಡು ನೆಮ್ಮದಿಯ ತಾಣಗಳು,
ಒಂದು ತಾಯಿಯ ಒಡಲು😍
ಇನ್ನೊಂದು ಹೆಂಡತಿಯ ಮಡಿಲು🧡-
ನೀನೆಷ್ಟು ದೊಡ್ಡ ವ್ಯಕ್ತಿಯಾದರೂ,
ಅಮ್ಮನ ಕೈತುತ್ತಿಗೆ ಶರಣಾಗಲೇ ಬೇಕು😍
ಹೆಂಡತಿಯ ಮುತ್ತಿಗೆ ಪರದಾಡಲೇಬೇಕು😂-
ಗಂಡಸರ ಹಣೆಬರಹ ಮದುವೆ ಆಗುವವರೆಗೆ ಮಾತ್ರ ಬ್ರಹ್ಮ ಬರ್ದಿರ್ತಾನಂತೆ,
ಮದುವೆ ಆದಮೇಲೆ ಹೆಂಡತಿ ಬರೀತಾಳಂತೆ ನಿಜಾನಾ🤔-