QUOTES ON #ಹುಟ್ಟು_ಹಬ್ಬದ_ಶುಭಾಷಯಗಳು

#ಹುಟ್ಟು_ಹಬ್ಬದ_ಶುಭಾಷಯಗಳು quotes

Trending | Latest
12 SEP 2018 AT 7:18

ಬೆಳೆಯುತಿಹಳು ಮಗಳು
ಸಂತಸಗೊಂಡಿದೆ ಮನವು
ಸಂಗಾತಿ ರೂಪಿನವಳು
ನನಸಗಾಬೇಕಾದ
ಕನಸು ಇವಳು
ಮುಗ್ದ ನಗೆಯ
ಮುದ್ದು ಮಗಳೆ
ನೀನೆ ನಮ್ಮೆಲ್ಲರ
ಮುದ್ದಿನ ಮಗಳೆ
ಜನ್ಮ ದಿನದ ಶುಭಾಶಯಗಳು
ನೂರಾರು ವರುಷ ನಗುತ ಬಾಳು
ನಮ್ಮೆಲ್ಲರ ಪ್ರೀತಿಯ ಜಾನು💕💕💐💐

-


2 JUL 2021 AT 22:17

ವವವವಮಮ

-



ಜನುಮ ದಿನದ ಶುಭಾಶಯಗಳು
ಗುಬ್ಬಿಯ ಗೂಡಿಗೆ ❤️

ಹರುಷದ ಹೊನಲಲಿ
ಕೊನೆಯುಸಿರಿರೋವರೆಗೂ
ಸಂಭ್ರಮಿಸುತ್ತಿರಿ..
ಬೊಗಸೆಯಷ್ಟಿರುವೀ ಜೀವನದಲಿ
ಸಂತಸವೇ ತುಂಬಿರಲಿ;
ಕೆಲ ಅವಮಾನ, ಅಪಮಾನಗಳಿಂದ
ಕಲಿತ ಪಾಠವೂ ಜೊತೆಗಿರಲಿ!
ನಿರ್ಮಲ ಮನದ ಸ್ವಚ್ಛಂದ
ಪ್ರೀತಿಯು ಹೀಗೇ
ಸದಾಕಾಲವೂ ಹಸಿರಾಗಿರಲಿ..
ಹೆತ್ತವರ ಕನಸಿನ ನನಸಾಗಿ,
ಅವರ್ನೋವಿಗೆ ಹೆಗಲಾಗಿ,
ಅನುಕ್ಷಣವೂ ಆನಂದದಿಂದಿರಿ!!

ಈ ದಿನದ ಸಂತಸ,ಸಂಭ್ರಮ
ಕ್ಷಣ ಕ್ಷಣವೂ ದುಪ್ಪಟ್ಟಾಗಲಿ,
ಗಣೇಶ ನಿಮ್ಗಾಯಸ್ಸಾರೋಗ್ಯ ಕೊಟ್ಟು
ಇನ್ನೊಂದ್ ಎಪ್ಪತ್ವರ್ಷ ಕಾಪಾಡ್ಲಿ.

-



"ಅಪ್ಪಾ"

ನೀವಂದ್ರೆ ಪ್ರೀತಿ,
ನೀವಂದ್ರೆ ಆಸರೆ,
ನೀವಂದ್ರೆ ಆಸೆ,
ನೀವಂದ್ರೆ ಕಾಳಜಿ,
ನೀವಂದ್ರೆ ನಿಸ್ವಾರ್ಥ,
ನೀವಂದ್ರೆ ಜೀವ;
ನೀವಂದ್ರೆ ಜೀವನ!
ಈ ಭೂಮಿಯಲ್ಲಿನ ಪ್ರತಿ ಕಣದೊಳವಿತ
ಅತ್ಯದ್ಭುತ ಭಾವ ನೀವು!!
ನಿಮ್ಮ ಸುಪುತ್ರೆಯಾಗಿ ಜನಿಸಲು ನಾ
ವರವ ಬೇಡಿದ್ದೆನೇನೋ!?
ಹಾಗಾಗಿ ಇಂದು ಜಗತ್ತಿನೆಲ್ಲಾ ಸಂತಸವೂ
ನನ್ನೊಡನೆಯೇ ಉಳಿದಿವೆಯೇನೋ!?
ನಿಮ್ಮನ್ಪಡೆದ ಅದೃಷ್ಟವಂತಳು ನಾನು ಎಂದು
ಜಗತ್ತಿಗೇ ಕೂಗಿ ಹೇಳುವೆ;
ಮುಂದೊಂದು ದಿನ ಈ ಮಾತನ್ನು ನೀವ್ಹೇಳುವಂತೆ
ಮಾಡಲು ಹವಣಿಸುತಿರುವೆ!!
ಆ ದೇವಾ ಅನುಕ್ಷಣವೂ ಕಾಯಲಿ
ನನ್ನಾತ್ಮದ ದೈವವನು;
ಕರುಣಿಸಲಿ ಸಹಸ್ರಾರು ಹರುಷಗಳನು!!

ಸದಾಕಾಲವೂ ಸೂರ್ಯನಂತೆ ಪ್ರಜ್ವಲಿಸುತ್ತ,
ನಿಮ್ಮೆಲ್ಲಾ ನೋವುಗಳ ಮರೆಯುತ್ತ,
ಮೆಟ್ಟಿ ನಿಲ್ಲುತ್ತಾ,, ಎಂದೆಂದಿಗೂ
ಸಂತಸದಿಂದಿರಿ ಎಂದಾಶಿಸುವೆ.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾ.. 🌏💙

-



ನೋವು-ನಲಿವು
ತುಂಟಾಟ-ಮುದ್ದಾಟ
ಒಂಟಿ-ಜಂಟಿ
ಕಲಿಕೆ-ಹೋಲಿಕೆ
ಶಕ್ತಿ-ಯುಕ್ತಿ
ಛಲ-ಬೆಂಬಲ
ಧೈರ್ಯ-ಆರೋಗ್ಯ
ಆಯಸ್ಸು-ವರ್ಚಸ್ಸು..
ಎಲ್ಲಾನೂ ನಿಮ್ದಾಗ್ಲಿ!
ನೀವ್ ಕಂಡೆಲ್ಲಾ ಧನಾತ್ಮಕ ಕನ್ಸೂ ನಿಜ್ವಾಗ್ಲಿ!
ನಿಮ್ ಗುರಿಯೆಡೆಗಿನ್ ಗಮನ ಸ್ಥಿರವಾಗಿರ್ಲಿ!
ಆಸೆ ಮಿತಿಯಾಗಿರ್ಲಿ ಅದರ್ ಫಲ
ಊಹೆಗೂ ಮೀರಿದಷ್ಟ್ ಚೆನ್ನಾಗಿರ್ಲಿ!
ಈ ದಿನದ್ ಖುಷಿ ಜೀವ್ನ ಪೂರ್ತಿ ಹೀಗೇ ಇರ್ಲಿ.!!!
ಮುಖದಲ್ಲಿರೋ ನಗು ಮಾತ್ರ
ಯಾವತ್ಗೂ ಕಾಣೆಯಾಗ್ದಿರ್ಲಿ.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ ❤️

-



ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ 🎂

ಪದಪುಂಜಗಳರಸಿಯಾಗಿ ಸದಾಕಾಲವೂ
ಗೀಚುತ್ತಾ ಸಂತಸದಿಂದಿರಿ!
ಶಿಕ್ಷಕಿಯಾಗಿ ಶಾಲೆಯಲ್ಲಿ ತನ್ನ ಜ್ಞಾನವ
ಹಂಚುವುದಲ್ಲದೇ,
ಕವಯಿತ್ರಿಯಾಗಿಯೂ ಇತರರಿಗೆ
ಮಾರ್ಗದರ್ಶನವಾಗಿರುವ ನಿಮ್ಮೀ ಗುಣ
ಎಂದಿಗೂ ಬದಲಾಗದಿರಲಿ.
ನೋವು ನಲಿವಿನ ಏರಿಳಿತದಲಿ
ನೋವನ್ನು ಮೆಟ್ಟಿ ನಗುವ ಸೆರೆಯಿಡಿದು
ನೆಮ್ಮದಿಯಿಂದಿರಿ..
ಈ ದಿನದರುಷ ಎಂದಿಗೂ
ನಿಮ್ಮೊಟ್ಟಿಗೆಯೇ ನಲಿಯುತಿರಲಿ!!
ಆ ದೇವ ಅನುಕ್ಷಣವು, ಅನುದಿನವೂ
ನಿಮ್ಮನ್ನು ಕಾಯಲೀ ಎಂದಾಶಿಸುವೆ.!

-



ಹ್ಯಾಪಿ ಭೂಮಿಗ್ ಬಂದ ದಿನ ಅಣ್ಣಯ್ಯ❤️🎂

ಎಲ್ರೂ ನಗುನಲ್ಲೂ ನಿಮ್ ನಗುನಾ
ಹುಡ್ಕೋ ಆ ನಿಮ್ ಅಪರೂಪದ ಗುಣ
ಯಾವಾಗ್ಲೂ ಹಂಗೇ ಇರ್ಲಿ!
ಆ ನಿಮ್ ಮುಗ್ಧತೆ, ಸರಳತೆ
ಯಾವತ್ತಿಗೂ ಮಾಸ್ದೇ ಇರ್ಲಿ,
ಗಣೇಶ ನಿಮ್ ಸಂತಸವನ್ನ
ಅನುಕ್ಷಣವೂ ಹೆಚ್ಚೆಚ್ಚ್ ಮಾಡ್ತಿರ್ಲಿ!!
ನಿಮ್ ಗುರಿಯೆಡೆಗಿನ್ ದಾರಿಗೇ
ಯಾವ್ದೇ ತೊಡಕ್ ಬಂದ್ರು ಅದನ್ನ
ಮೆಟ್ಟಿ ಮುನ್ನುಗ್ಗೋ ಧೈರ್ಯ ಇರ್ಲಿ.
ಕಗ್ಗತ್ತಲಿನ ನಡುವಲ್ಲಿ ಚುಕ್ಕಿ
ಹೊಳೆಯೋ ಹಂಗೇ
ನಿಮ್ಮೆಲ್ಲ ಅಡೆತಡೆಗಳ ಮೀರಿ
ಮಿಂಚೊ ಹಾಂಗ್ ಗೆಲ್ಲಿ ಬದ್ಕಲ್ಲಿ.!
ಎಂತದ್ದೇ ಬಿಕ್ಕಟ್ಟಿನ ಸಂದರ್ಭ
ಬಂದ್ರೂ ಎದರಿಸಿ
ಸದಾಕಾಲ ಖುಷ್ ಖುಷಿಯಾಗಿರಿ,,
ಇವತ್ತಿನ್ ನಗು ನಿಮ್ ಮುಖದಲ್
ಶಾಶ್ವತವಾಗಿ ನೆಲೆಯೂರ್ಲಿ.!!!

-



ಜನುಮದಿನದ ಶುಭಾಶಯಗಳು ಪೆದ್ದು!!❤🎂

ನನ್ನೆಲ್ಲಾ ಆಸೆಗಳ ರೂವಾರಿ ಇವಳು!
ಅತಿಯೆಂದರೆ ಅತಿಯಾಗಿ ನನ್ನನು
ನಂಬಿರುವಳು!
ಎನಗೆ ತನ್ನ ತಾಯಿಗಿಂತ ಹೆಚ್ಚಿನ
ಸ್ಥಾನವ ಕೊಟ್ಟಿರುವಳು!
ಎಂದಿಗೂ ಇವಳ ನಂಬಿಕೆಗೆ ಧಕ್ಕೆ
ಬಾರದಂತೆ ನೋಡಿಕೊಳ್ಳುವೆ!
ನನ್ನೀ ಜೀವನದಲ್ಲಿ ತಂದೆಯ ನಂತರದ
ಸ್ಥಾನವ ತುಂಬಿರುವವಳು ಇವಳೇ!
ಇವಳ ಮುದ್ದು ಕಂದಮ್ಮ ನಾನು!
ಈ ಜೀವಕೆ ಸಂಜೀವಿನಿ ಇವಳು!!
ಇವಳ ಪ್ರೀತಿಯನು ನಾನಿನ್ನೆಷ್ಟೇ ಜನ್ಮ
ಪಡೆದರೂ ತೀರಿಸಲಾಗದು!
ನನಗಿದ್ದ ಅಹಂ,ಹಠ,ಕೋಪವ
ಹೋಗಲಾಡಿಸಿದವಳಿವಳು!
ಇವಳೆಲ್ಲಾ ಕಣ್ಣೀರಿಗೂ ಮುಕ್ತಾಯ
ಹೇಳಿದವಳು ನಾನು!
ಇವಳು ಈ ಭೂಮಿಗ್ ಬಂದಿರೋದೇ ನನಗೋಸ್ಕರ..
ನಾನ್ ಬದುಕ್ತಿರೋದೆ ಇವಳಿಗೋಸ್ಕರ..!
ನನ್ ಹೃದಯಕೆ ಇವ್ಳು ಬಡಿತ ಮಾತ್ರ..
ಆದ್ರೆ, ಇವ್ಳಿಗೆ ಹೃದಯಾನೇ ನಾನು..!!!
ಈ ಒಂದು ದಿನಮಾತ್ರವಲ್ಲದೇ ನಿನ್ನ
ಆಯಸ್ಸಿರುವವರೆಗೂ ಜಗತ್ತಿನೆಲ್ಲಾ
ಖುಷಿಯೂ ನಿನ್ನ ಮುಂದಿರಲಿ ಎಂದು
ಹಾರೈಸುವೆ ಪೆದ್ದು..!!😘😘💓
-ಹರ್ಷಿತ ಶೆಟ್ಟಿ..

-


20 NOV 2020 AT 9:25

ಯಾರೆ ನೀನು ಸ್ನೇಹಿತೆ ಹೆಂಗೆ ಸಿಗ್ತೆ ನೀನು ನನಗೆ ಯಾಕೆ ಪರಿಚಯ ಆದೆ ನೀನು ಯಾಕೆ ನನ್ನ ಹೃದಯದೊಳಗೆ ಇಳಿದು ಬಿಟ್ಟೆ ನೀನು ನನ್ನೆಲ್ಲ ಮನಸ್ಸಿನ ಭಾವನೆಗಳಿಗೆ ಸ್ಪಂದಿಸೋ ನಿನ್ನ ಪುಟ್ಟ ಹೃದಯ ತಾಯಿಯ ಮಮತೆಯಂಥ ಹೃದಯ ಕಣೆ. ಸ್ನೇಹಕ್ಕೆ ನಂಬಿಕೆ ತುಂಬಾ ಮುಖ್ಯ ಆದರೆ ಆ ನಂಬಿಕೇನೆ ನೀನಾಗಿಬಿಟ್ಟೆ ನನಗೆ. ನಿನ್ನ ಸ್ನೇಹವು ಮರೆಯಲಾಗದ ಸ್ನೇಹ ಮರೆತರು ಮತ್ತೆ ಮತ್ತೆ ನೆನಪಾಗುವ ಸ್ನೇಹ ನಿನ್ನದು.

{ಉಕ್ಕಿ ಬಂದ ಇನ್ನಷ್ಟು ಭಾವನೆಗಳು Caption ನಲ್ಲಿ}

-



ಹುಟ್ಟು ಹಬ್ಬದ ಶುಭಾಷಯಗಳು ಅಪ್ಪ..!!

ದೈವವನ್ನೇ ಭೂಮಿಗೇ ತಂದೆಯೆಂದು
ದೇವರಿಗೆ ಋಣಿಯಾಗಿರಲಾ?
ಅಥವಾ ಈ ಜೀವಕ್ಕೆ ಜೀವನದರ್ಥವ
ಪ್ರತಿಕ್ಷಣವೂ ಅರ್ಥೈಸುತ್ತಿರುವ
ನನ್ನ ದೇವರಿಗೆ ಋಣಿಯಾಗಿರಲಾ ತಿಳಿಯುತ್ತಿಲ್ಲ.!?

ತಮ್ಮೆಲ್ಲಾ ಆಸೆ ಕನಸುಗಳ
ಪಕ್ಕಕ್ಕಿಟ್ಟು ತಮ್ಮ ಮಕ್ಕಳ
ಏಳಿಗೆಗಾಗಿಯೇ ಬದುಕುತ್ತಿರುವ
ಅದ್ವಿತೀಯ ವಜ್ರ ನನ್ನಪ್ಪ.!!

ಜೀವನವೆಂಬ ತೇರಿನಲಿ,
ಎನ್ನ ರಾಜಕುಮಾರಿಯಂತೆ ಕುಳ್ಳಿರಿಸಿ;
ಸಂತೋಷವೆಂಬ ಆಶಾಗೋಪುರದಡಿಯಲಿ,
ಪ್ರೀತಿಯೆಂಬ ಧಾರೆಯನ್ನೆರೆಯುತಿಹರು ಅನುದಿನವೂ..!!

ಇವರಿಂದಲೇ ನಾನೀ ಭುವಿಯಲಿರುವೆ ಈ ದಿನ!
ಆದರೆ ಮುಂಬರುವ ನನಗೆಂದೇ ರುಜು ಹಾಕಿ
ಆ ಭಗವಂತ ಕಳುಹಿಸಿದ್ದನಿವರನು
ಹಲವು ವರುಷಗಳ ಹಿಂದೆಯೇ.!!

ಸದಾಕಾಲ ನನ್ನಪ್ಪನ ಮೊಗದಲಿ ಪುಷ್ಪವೇ
ನಾಚುವಂತಹ ನಗು ನಲಿದಾಡುತಿರಲಿ..!!
ಸೂರ್ಯನೇ ಒಂದೊಮ್ಮೆ ನಿಬ್ಬೆರಗಾಗುವಂತಹ ಧೈರ್ಯ ತುಂಬಿ ತುಳುಕಲಿ..!!
ಅದೇನೇ ಕಷ್ಟಗಳೆದುರಾದರೂ ಅದನ್ನು ಮೆಟ್ಟಿ ನಿಂತು ರಾಜನಂತೇ ಬಾಳುವಂತಾಗಲಿ....!!!!

-