ಪುಟ್ಟಕ್ಕ ಈ ಬರಹ ನಿಂಗೆ...
~~~~~~~~~~~~~~~~~~~~~~~~~~~~~~~~~
ನಾಸಿಕಕೆ ಬಡಿದ ಬಿರಿದ ಮಲ್ಲಿಗೆಯ ಘಮದ ಜಾಡು ಹಿಡಿದು 'ಯುವರ್ ಕೋಟ್' ನಿಸರ್ಗದ ಹೆದ್ದಾರಿಯೊಳಗೆ ದಾಪುಗಾಲು ಹಾಕಿದೆ ; ಅರೇ! ಏನು ವಿಸ್ಮಯ ಅಂತೀನಿ, ಪಚ್ಹಸಿರಿನ ಮರದಡಿಯ ತಾವಿನಲ್ಲಿ ಮಲ್ಲಿಗೆ_ಸುಗಂಧರಾಜ_ಸಂಪಿಗೆಯ ಸುವಾಸನೆ ಮಿಶ್ರಿತ
"ಮನ್ಸ್ ಹೇಳ್ತು ಹಂಗೆ ಗೀಚ್ಬಿಟ್ಟೆ" ಅಂತಾ ನಮ್ಮ್ ಪುಟ್ಟಕ್ಕ ಬಹು ಸಮಯದ ಬಳಿಕ ಶಾಯಿಯನ್ನು ಬಿಳಿ ಹಾಳೆಯ ಮೇಲೆ ಎರಚಿದ್ದಾಳೆ!!!-
19 NOV 2020 AT 14:51
14 SEP 2020 AT 8:38
ಎಷ್ಟೇ ಪದಗಳಲ್ಲಿ ವರ್ಣಿಸಿದರು,
ಸಹನೆಯ ಪ್ರತಿರೂಪ ಹೆತ್ತ
ತಾಯಿಯೊಬ್ಬಳೇ........-
17 MAY 2020 AT 7:54
ನನ್ನ ಹೆತ್ತಾಕೆ,
ಹೊತ್ತು ಗೊತ್ತಿಲ್ಲದೆ
ನಾನು ರಚ್ಚೆ ಹಿಡಿದಾಗಲೆಲ್ಲ
ಅವಳ ಹೆಗಲ ಮೇಲೆ ಹೊತ್ತಾಕೆ,
ಸಾಗರದಷ್ಟು ಸಹನೆಯ ಮೂರ್ತಿ ಅವಳು,
ಅನ್ಯರಿಗೆ ರೋಸಿಹೋಗುವಷ್ಟು
ಕಿರಿಕಿರಿ ಎನಿಸುವ ಕೂಸಿನ ಹಠವನ್ನು,
ಅಷ್ಟೇ ಆರಾಮದಿಂದ ತಣ್ಣಗಾಗಿಸುವ
ತಾಕತ್ತಿರುವ ಜೀವ ಅವಳು,
ನನ್ನ ನೋವಿಗೆ
ಸದಾ ಮಿಡಿಯುವ
ಹೃದಯಿ ಅವಳು,
ನನ್ನ ಖುಷಿಯೇ
ಅವಳ ಖುಷಿ ಎಂದು
ಬೀಗುವ ಅನನ್ಯ ಬಂಧು ಅವಳು,
ನನಗಾಗಿ ಜಗತ್ತನ್ನೇ ಎದುರಿಸುವ
ಪರಮ ನಿಸ್ವಾರ್ಥಿ ಅವಳು,
ಅವಳು ಸಾಕುವುದಿಲ್ಲ,
ಬೆಚ್ಚಗೆ ಸಲಹುತ್ತಾಳೆ,
ಒಲವ ಸುರಿಯುತ್ತಾಳೆ,
ಜೀವ ತೇಯುತ್ತಾಳೆ,
ನನ್ನ ಹೆತ್ತಾಕೆ ||
- ವಿ ಎಲ್ ಆಶ್ರಿತ್-