ಅವನೆಂದರೆ ಕೇವಲ ಅವನಲ್ಲ,
ಬದುಕನ್ನು ಕಲಿಸುತ್ತಿರುವವನು
ಕೈಹಿಡಿದು ನಡೆಯುತ್ತಿರುವವನು
ಜೊತೆಯಲ್ಲಿದ್ದರೂ ಅರ್ಥವಾಗದೆ
ಉಳಿದವನು.....-
ಉಸಿರು,ಬದುಕಿಗೆ ಅರ್ಥ ನೀಡುವ ನವಿರಾದ ಭಾವನೆ.
ಕನ್ನಡ ಅಂದ್ರೆ, ಸಮುದ್ರದ ಹಾ... read more
ಯಾಕೆ ಕಾಡುತಿರುವೆ ಗೆಳೆಯ,
ಮೊದಲ ನೋಟದಿಂದ ಇಲ್ಲಿಯವರೆಗೆ,
ಹೇಗೆ ಸೆಳೆಯುತಿರುವೆ ಗೆಳೆಯ,
ಮೊದಲ ಮಾತಿನಿಂದ ಇಂದಿನವರೆಗೆ,
ವರುಷಗಳೆ ಕಳೆದಿವೆ ನಮ್ಮಿಬ್ಬರ
ಪ್ರೀತಿಗೆ, ಆದರೂ
ಕೊನೆಯಿಲ್ಲದ ಪ್ರೀತಿಯ ಪರಿ ನಿನ್ನದು
ಅಂದಿನಿಂದ ಇಂದಿನ ವರೆಗೆ.-
ಹಣ್ಣೆಲೆ ಯೊಂದು ಬಿಸಿದ ಸುಳಿಗಾಳಿಗೆ ಉದುರಿತ್ತು
ಚಿಗುರಲೆಯೊಂದು ಅದನೋಡಿ ನಕ್ಕಿತ್ತು
ಉದುರಿದ ಹಣ್ಣೆಲೆ ಅರೆಜೀವವಾಗಿತ್ತು
ಚಿಗುರೆಲೆಯ ನೋಡಿ ಮಗದೊಮ್ಮೆ ನಕ್ಕಿತ್ತು
ತಾನೊಮ್ಮೆ ಚಿಗುರುವಾಗ, ಉದುರಿದ ಹಣ್ಣೆಲೆಯ ನೋಡಿ ನಕ್ಕಿದ್ದ ನೆನೆದಿತ್ತು
ಉದುರಿದ ಹಣ್ಣೆಲೆ ಬಾಲ್ಯವ ನೆನೆದು ನಗುತಿತ್ತು
ವಿಷಾದದ ನಗುವಿನಿಂದ ಉಳಿದ ಅರೆಜೀವ ತೊರೆದಿತ್ತು
ಜೀವನದ ಸತ್ಯ ಅರಿಯದ ಚಿಗುರಲೆ ಬಿಸಿದ ತಂಗಾಳಿಗೆ ಮೈ ಮರೆತು ತೂಗುತಿತ್ತು.-
ಗೆಳೆಯ....
ಕಾದಿರುವೆ ನಾನು ಜಾತಕಪಕ್ಷಿಯಂತೆ ಕೇವಲ
ಹಿಡಿಯಷ್ಟು ನಿನ್ನ ಪ್ರೀತಿಗಾಗಿ...
ಸಮಯ ಸರಿದು ಬರಿದಾಗುವ ಮುನ್ನ ನನಗು ಒಂದಷ್ಟು ಕರುಣಿಸಿಬಿಡು ಸಮಯದೊಂದಿಗೆ
ತುಸುವೆ ಪ್ರೀತಿಯ.....
ಮುಂದೊಮ್ಮೆ ನೀನಾಗೆ ಬಂದರು, ಸಾಕಷ್ಟು ಸಮಯವಿದ್ದರೂ ಪ್ರೀತಿಸುವ ಹಂಬಲವಿದ್ದರೂ ಕಾಣದಷ್ಟು ದೂರ ನಡೆದು ಹೋಗಿರಬಹುದು...
ಬದುಕಿರುವಾಗಲೇ ಪ್ರೀತಿಸಿಬಿಡು ಸಾವನ್ನು ನೆನಪಿಸದಂತೆ..❤️-
ಅವನಿದ್ದರೆ ಸುಡುವ ಬಿಸಿಲು ತಂಗಾಳಿಯಂತೆ
ವಿರಹದ ಬೆಳದಿಂಗಳೂ ಸುಡುವಜ್ವಾಲೆಯಂತೆ
ಸದಾ ಸನಿಹದಲಿ ಇರದಿದ್ದರೂ ಬೆರೆತಿರುವ
ನನ್ನುಸಿರಲಿ ಹೃದಯದ ಬಡಿತದಲಿ ಎಂದೆಂದಿಗೂ-
ಬಾಳಿನ ಜೊತೆಯಲ್ಲಿ ಕೈಹಿಡಿದು
ನಡೆಯುವನು ಸುಖದಲ್ಲಿ ಸಮಪಾಲು
ನೋವಿನಲಿ ಬಹುಪಾಲು ತನಗೆಂದೆ
ತಿಳಿಯುವನು ಕಣ್ಣೀರ ಹನಿಯನ್ನು
ಸಹಿಸದವನು ನನಗಾಗಿ ತನ್ನೊಲವ
ಮುಡಿಪಾಗಿ ಕೊಟ್ಟವನು ನೀನೊಬ್ಬನೇ
ಬೆನ್ನೆಲುಬು ನನ್ನ ಬಾಳಿಗೆ
ಮತ್ತೇನು ಬೇಕಿನ್ನು ಈಜೀವಕ್ಕೆ
ಬೇಕೇನಗೆ ನಿನ್ನೊಲವು ಪ್ರತಿಯೊಂದು
ಜನ್ಮಕ್ಕೂ ಕೊನೆಯಿಲ್ಲದಂತೆ ಪ್ರೀತಿಸಲು....-
ಈ ಜಗತ್ತಲ್ಲಿ
ನಾವು ಅಂದುಕೊಂಡಷ್ಟು
ಯಾರು ಒಂಟಿ ಅಲ್ಲ ಹಾಗೆ
ನಾವು ತಿಳಿದಷ್ಟು ಸಂಬಂಧಗಳು
ಸುಲಭವು ಅಲ್ಲ....-
ನನ್ನ ಆಕರ್ಷಿಸುವ ಸೂಜಿಗಲ್ಲಿನಂತೆ,
ಅದೆಷ್ಟು ನೋಡಿದರು ಸಾಕಾಗದು
ಕಣ್ಮುಚ್ಚಿ ಕುಳಿತರು ಕಾಡುವುದು
ಕಣ್ಣಭಾಷೆ ಅದೆಷ್ಟು ಸುಂದರ
ತಿಳಿಸಿದವನಿಗೆ ಮುಡಿಪು ನನ್ನ ಪ್ರೀತಿಯಾಗರ ..❤-
ಬಯಸಿದಾಗ ಬರದು....
ಬೇಡವೆಂದರೂ ಬಿಡದು.....
ಕೆಲವರಿಗೆ ಬಂದು ನೋಯಿಸಿವುದು....
ಉಳಿದವರಿಗೆ ಬರದೇ ನೋಯಿಸುವುದು....
ಕಾಯುವವರ ಕಾಡುವುದು.....
ಬೇಡದವರ ಕರೆದೋಯ್ಯುವುದು.....
ಹಲವರಿಗೆ ಸತ್ತ ನಂತರ ನರಕ ತೋರುವೆ.....
ಕೆಲವರಿಗೆ ಸಾಯಿಸದೆ ನರಕ ತೋರುವೆ....
ಓ ಸಾವೆ, ನೀನೆಷ್ಟು ಕ್ರೂರಿ.-