ಕಚ್ಚಬೇಡ
ಹೊಚ್ಚ ಹೊಸ ಚಪ್ಪಲಿ ಕಚ್ಚಿದ ಹಾಗೆ,
ಇದು ಕಾಲಲ್ಲ, ಅಧರಗಳು ||
- ವಿ ಎಲ್ ಆಶ್ರಿತ್-
ಸೊಂಪಾದ ರಾತ್ರಿಯಲ್ಲಿ
ತಣ್ಣಗೆ ಮೈ ಹರವಿಕೊಂಡು
ಮಲಗಿದ್ದ ಮುಗಿಲಿಗೆ
ಪಟಾಕಿಯ ಏಟು,
ತಂಪಾದ ಗಾಳಿಯಲ್ಲಿ ಮೆಲ್ಲಗೆ
ಸೂಸುತ್ತಿದ್ದ ಗಂಧಕ್ಕೆ
ಸಿಗರೇಟಿನ ಘಾಟು,
ಇಂಪಾದ ನಡುರಾತ್ರಿಯ ಮೌನದಲ್ಲಿ
ನುಸುಳುವ ಅಮಲಿನ ಖಮಟು,
ಸ್ವಾಗತ ಹೀಗೆಯೇ ಆಗಬೇಕೆ?
ನಿಶಾಗತ ಆಗಿಯೇ ತೀರಬೇಕೆ?
- ವಿ ಎಲ್ ಆಶ್ರಿತ್-
ರಾಶಿ ರಾಶಿ ಹಳೆಯ ನೆನಪುಗಳು
ದೈತ್ಯಾಕಾರ ತಾಳಿ ನಿಲ್ಲುತ್ತವೆ
ಆಕೆಯ ಕಣ್ಣಲ್ಲೇ,
ಬೆದರಿ ನಿಲ್ಲುತ್ತೇನೆ ನಾನು
ಪುಟ್ಟ ಮಗುವಿನಂತೆ
ಅವಳೆದುರು ನಿಂತಲ್ಲೇ ||
- ವಿ ಎಲ್ ಆಶ್ರಿತ್-
ಎಲ್ಲರಿಗೂ ಮೊದಲ ರಾತ್ರಿಯ ಶುಭ ಹಾರೈಕೆಗಳು!
Happy First Night to All!
😁😁😁-
ಅಜಾತ ಶತೃಗಳಾಗಿ ಬದುಕುವುದು ಸುಲಭ ಸಾಧ್ಯವಲ್ಲ. ಕೆಲವು ಚೇತನಗಳು ಮಾತ್ರ ಹೀಗೆ ಸಲೀಸಾಗಿ ಬದುಕಿಬಿಡುತ್ತವೆ. ಅಂತಹ ಮಹಾನ್ ಚೇತನ ನಮ್ಮ ಸುಧಾ ಮೂರ್ತಿ ಅಮ್ಮ.
- ವಿ ಎಲ್ ಆಶ್ರಿತ್-
ಇವನು ಅವತಾರವೆತ್ತದಿದ್ದರೆ
ಯಶೋದೆ ತಾಯಿ ಎನಿಸುತ್ತಿದ್ದಳೇ
ಮಕ್ಕಳಲ್ಲಿ ಯಾರನ್ನು ಕಾಣಬೇಕಿತ್ತು
ನವನೀತವೆಂದರೆ ವಿಶೇಷವೆನಿಸುತ್ತಿತ್ತೇ
ತುಂಟತನದ ಸೃಷ್ಟಿಯಾಗುತ್ತಿತ್ತೇ
ವಿಶ್ವ ಎಲ್ಲಿದೆ ಎಂದು ತಿಳಿಯುತ್ತಿತ್ತೇ
ಗೋಪಿಯರ ಕಲ್ಪನೆ ಇರುತ್ತಿತ್ತೇ
ಗೋವುಗಳು ಪರಮ ಪವಿತ್ರವೆನಿಸುತ್ತಿದ್ದವೇ
ವೇಣುನಾದ ತೇಲಿ ಬರುತ್ತಿತ್ತೇ
ಗೋಪಾಲಕರಿರುತ್ತಿದ್ದರೇ
ಗೆಳೆತನಕೆ ಮಾದರಿ ಸಿಗುತ್ತಿತ್ತೇ
ಅವಲಕ್ಕಿ ಇರುತ್ತಿತ್ತೇ
ದ್ರೌಪದಿಗೆ ರಕ್ಷಣೆ ಇರುತ್ತಿತ್ತೇ
ಭಗವದ್ಗೀತೆ ಬೋಧಿಸುವರಿರುತ್ತಿದ್ದರೇ
ಕುರುಕ್ಷೇತ್ರದಲಿ ಪಾಂಡವರು ವಿಜಯಿಗಳಾಗುತ್ತಿದ್ದರೇ
ಚಾಣಾಕ್ಷ ರಾಜಕಾರಣದ ಪರಿಕಲ್ಪನೆ ಇರುತ್ತಿತ್ತೇ
ವಿಶ್ವಗುರು ಇರುತ್ತಿದ್ದನೇ
ಪರಿಪೂರ್ಣಾವತಾರಿ ಶ್ರೀಕೃಷ್ಣ ಸರ್ವವೂ ಆದ ||
- ವಿ ಎಲ್ ಆಶ್ರಿತ್-
ಹೊಸ ಬೆಳಕಿಗೆ, ಹೊಸ ನೀರಿಗೆ ದಾರಿ ಮಾಡಿ ಕೊಡಬೇಕು. ಅದೇ ಪ್ರಕೃತಿ ನಿಯಮ. Move on, Celebrate your life!
- ವಿ ಎಲ್ ಆಶ್ರಿತ್-