ಸೋಲಿಗೂ ಸಾವಿಗೂ ಒಂದೇ ವ್ಯತ್ಯಾಸ;
ಆತ್ಮವಿಶ್ವಾಸಕ್ಕೂ ಆತ್ಮಕ್ಕೂ ಇರುವ ವಿನ್ಯಾಸ!..-
ಮೋಸ ಮಾಡುವ
ಮಾತು ಆಡಬೇಡ
ಹುಚ್ಚಿ. ಇಲ್ಲಿ ಕೋರಿಕೆ
ಈಡೇರದಿದ್ದರೆ ಜನ
ಜನರನಷ್ಟೇ ಅಲ್ಲ
ದೇವರನ್ನು ಕೂಡ
ಬದಲಾಯಿಸುತ್ತಾರೆ.
ನೀನೇನು ಮಹಾ..!-
ನನಗೆ ನೀನು ಮೋಸ
ಮಾಡಿದ್ದು ನಿನ್ನ ತಪ್ಪಲ್ಲ.
ನಾನು ನಿನಗೆ ಅವಕಾಶ
ಕೊಟ್ಟೆನಲ್ಲ ಅದು ನನ್ನ ತಪ್ಪು.-
ವಿಶ್ವಾಸ ಯಾವತ್ತೂ
ಚಮತ್ಕಾರವನ್ನು ನಿರೀಕ್ಷಿಸುವುದಿಲ್ಲ
ಆದರೆ ಆ ವಿಶ್ವಾಸದಿಂದಲೇ
ಎಷ್ಟೋ ಬಾರಿ ಚಮತ್ಕಾರಗಳು ಆಗಿರುತ್ತವೆ-
ಸಂದೇಹಗಳೊಂದಿಗೆ ಓಡುವುದಕ್ಕಿಂತ
ಆತ್ಮವಿಶ್ವಾಸದೊಂದಿಗೆ
ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ
ನಡೆಯುವುದೇ ಲೇಸು.-
ನಾನು ವಿಶ್ವಾಸ ಇಟ್ಟು
ತಪ್ಪಿತಸ್ಥನಾದರೇ ....,
ಅವಳು ಮೋಸ ಮಾಡಿ
ಬುದ್ಧಿಶಾಲಿಯಾದಳು.-
ಮನಸ್ಸು ನೊಂದುಕೊಂಡಾಗ
ಸಂಬಂಧಗಳು ಮತ್ತು ಮಾರ್ಗಗಳು ಮುಕ್ತಾಯಗೊಳ್ಳುತ್ತವೆಯೇ
ವಿನಃ ಕಾಲು ನೋವುಗೊಂಡಾಗಲ್ಲ.-
ನಿನ್ನಲ್ಲಿ ಅರ್ಹತೆ ಇದ್ದರೆ ಮಾತ್ರ
ಅಧಿಕಾರದಲ್ಲಿ ವಿಶ್ವಾಸವಿಡು.
ಆಸರೆ ಎಷ್ಟೇ ಒಳ್ಳೆಯದಾದರೇನು
ಜೊತೆ ಬಿಟ್ಟು ಹೋಗುತ್ತವೆ.-
ಸಮಾಜ ಹಾಗೂ ಇತರರು ನಿನ್ನನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ ಎನ್ನುವುದಕ್ಕಿಂತ ನಿನ್ನನ್ನು ನೀನು ಯಾವ ದೃಷ್ಟಿಕೋನದಿಂದ ನೋಡಿಕೊಳ್ಳುವೆ ಎಂಬುದು ಅತ್ಯಂತ ಮಹತ್ವ ಹಾಗೂ ಮುಖ್ಯವಾಗುತ್ತೆ ಅಲ್ವಾ..
ಏಕೆಂದರೆ ಅವರು ಹೇಳಿದ್ದೆಲ್ಲ ಸತ್ಯವಲ್ಲ ನಿನ್ನ ಬಗ್ಗೆ ನಿನಗಿಂತ ಹೆಚ್ಚು ಅವರು ಅರಿಯಲು ಸಾಧ್ಯವೇ? ನಿನ್ನೊಳಗಿನ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸು ಆಗ ನೀ ಏನೆಂಬುದು ನಿನಗೆ ಅರಿವಾಗುವುದು.-
ಸಂಬಂಧಗಳು ಗಟ್ಟಿಯಾಗಿರಲಿ
ಅಥವಾ ಇಲ್ಲದಿರಲಿ, ವಿಶ್ವಾಸ
ಮಾತ್ರ ಗಟ್ಟಿಯಾಗಿರಬೇಕು.-