QUOTES ON #ಚಿಕ್ಕಮಗಳೂರು

#ಚಿಕ್ಕಮಗಳೂರು quotes

Trending | Latest
1 AUG 2019 AT 22:43

ಕಾಫೀ ನಾಡಿನ ಸಕ್ಕರೆಯಂಥ
ಮನದ ಸಿದ್ಧಾರ್ಥ್ ಸರ್ ನಿಮ್ಮ
ಬದುಕು ನಮಗೆ ಸ್ಫೂರ್ತಿದಾಯಕ,
ಅದರೆ ನಿಮ್ಮ ಸಾವಲ್ಲ...
ನಮ್ಮ ಜಿಲ್ಲೆಯ ಕಾಫೀ ಘಮವನ್ನು
ಪ್ರಪಂಚದಾದ್ಯಂತ ಪರಿಚಯಿಸಿ, ಜಗತ್ತು
ನಮ್ಮತ್ತ ತಿರುಗಿ ನೋಡುವಂತೆ ಮಾಡಿದಿರಿ.
ಮತ್ತೆ ನಮ್ಮ ಅಕ್ಕರೆಯ ನಾಡಲ್ಲೇ ಹುಟ್ಟಿ ಬನ್ನಿ.

-


4 AUG 2020 AT 11:00

ಕಾಫೀ ಘಮಲಿನ ನಾಡು
ಹರಿವ ಝರಿಗಳ ಬೀಡು,
ಅರೆ ಮಲೆನಾಡು,
ಸಿರಿಮನೆ ಹೊದ್ದ ಬೀಡು
ಶೃಂಗ ಗಿರಿಗಳ ನಾಡು,
ಹಸಿರ ಅರಸಿ ಬರುವವರಿಗೆ
ಅಕ್ಕರೆಯಿಂದ ಸ್ವಾಗತಿಸುವ ಬೀಡು
"ಚಿಕ್ಕಮಗಳ"ನಾಡು...

-


6 AUG 2019 AT 18:46

ಗೋಬಿಮಂಚೂರಿ ತಿನ್ನಬೇಕು ಅನ್ಸತ್ತೆ.
ಈ ಜಡಿ ಮಳೆಲಿ, ನಮ್ಮ ಚಿಕ್ಕಮಗಳೂರಿನ
ಬಿಸಿ ಬಿಸಿ ಕಾಫಿ ಕುಡಿತ ಬಜ್ಜಿ ತಿನ್ನಬೇಕು
ಅನ್ಸುತ್ತೆ...🤗😍😊

-


8 NOV 2019 AT 21:04

ಹಸಿರ ಸಿರಿಯ ಹಂದರದಲ್ಲಿ
ಹಸಿರನೊದ್ದು‌ ಮಲಗಿಹಳು ಮಲೆನಾಡ ಮಗಳು
ಕಣ್ಮನ ಸೆಳೆದು ಕಂಗೊಳಿಸುತ್ತಿಹಳು
ಹಸಿರ ಸೀರೆಯುಟ್ಟ ಮಧುಮಗಳು
ಬಣ್ಣಬಣ್ಣದ ಸುಮ ರಾಶಿಯ ಹೂಬನದಲ್ಲಿ
ಆವರಿಸಿಹಳು ಭೂರಮೆಯ ವನದೇವತೆಯು
ವೀಕ್ಷಕರ ಮೈ ರೋಮಾಂಚನಗೊಳಿಸಿ
ಆಕರ್ಷಿಸುತ್ತಿಹಳು ಚೆಲುವಾದ
ನಮ್ಮ ಮನೆಯ ಚಿಕ್ಕ ಮಗಳು
ಸರ್ವರಿಗೂ‌ ಉಸಿರಾಟಕೆ ಶ್ವಾಸವಾಗಿಹ
ನಮ್ಮೇಲ್ಲರ ಪ್ರೀತಿಯ ಮುದ್ದಿನ ಮಗಳು
ತನುವಿಗೆ ಬಿಸಿಯ ನೀಡಿ ಉತ್ಸಾಹ
ತುಂಬುವಳು ಸಿರಿಯ ಮಗಳು
ಹಸಿರ ಸಿರಿಯ ಸುಂದರ ಮನೆ‌ ಮಗಳು.

-


3 JUN 2022 AT 10:45

ತುಂಗಭದ್ರಾ ಹೇಮಾವತಿ ನದಿಯ ತವರರೂ ಗಿರಿಶ್ರೇಣಿಗಳ ಸಾಲು, ಮಲೆನಾಡ ಸೆರಗು ಮನಸ್ಸಿಗೆ ಮುದ ನೀಡಿ‌ ಕಂಗೊಳಿಸುವ ಮೆರುಗು.— % &

-


14 NOV 2020 AT 8:18

ಹಚ್ಚಹಸುರಿನ ಮಲೆನಾಡಿನ ಮಡಿಲಲ್ಲಿ
ತಾಯಿ ಶಕ್ತಿಯರಿತು ಬರುವರು ಸಾವಿರಾರು ಭಕ್ತರಿಲ್ಲಿ
ಮುಂಜಾನೆ ಮಂಜಿನ ಚುಮುಚುಮು ಚಳಿಯಲ್ಲಿ
ಹರಕೆಯೊತ್ತು ದೇವಿ ಸ್ಮರಿಸುತ್ತ ನಡೆವರಿಲ್ಲಿ//

ಚಂದ್ರದ್ರೋಣ ಪವರ್ತದ ಮೇಲೆ
ಶ್ರೀ ದೇವಿರಮ್ಮ ತಾಯಿಯ ಅದ್ಭುತ ಲೀಲೆ
ಸಾಗರೋಪಾದಿ ಬರುವುದು ಭಕ್ತಗಣಗಳ ಅಲೆ
ಪ್ರಕಾಶಿಸುತ್ತಿದೆ ಅಂತರಂಗದಿ ಅರಿವಿನ ಜ್ವಾಲೆ//

ಅಸುರನ ಸಂಹರಿಸಿ ವಿಜಯ ಸಾಧಿಸಿದ ದೇವಿ ತಾಯಿ
ಬೆಟ್ಟದ ಶಿಖರದಿ ಬಂದು ನೆಲಸಿದಳು ದುರ್ಗಾಮಾಯಿ
ಕ್ರೋಧ ನಿವಾರಿಸಿಕೊಳ್ಳಲು ಶಾಂತಳಾದಳು ಜಗನ್ಮಾಯಿ
ಜಗವ ರಕ್ಷಿಸಲು ಹರಸಿದಳು ಮಹಾಮಾಯಿ//

ಅಸುರಿ ಗುಣಗಳ ಬೇರು ಸಮೇತ ದಹಿಸಿ
ಜ್ಞಾನದ ಪ್ರಣತಿಯ ಪ್ರೀತಿಯಿಂದ ಹೊತ್ತಿಸಿ
ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥಿಸಿ
ಕರಮುಗಿದು ಬೇಡೋಣ ಶಿರಬಾಗಿ ನಮಿಸಿ//

ಮುಸ್ಸಂಜೆ ಬೆಟ್ಟದಲ್ಲಿ ಜ್ಯೋತಿಯ ಬೆಳಗಿಸಿ
ಸರ್ವರು ಬೆಳಗುವರು ಶ್ರದ್ಧೆಯಿಂದ ಪೂಜಿಸಿ
ಕಷ್ಟಗಳು ಕಳೆದು ಮೊಗದಲಿ ನಗು ತರಿಸಿ
ದ್ವೇಷಾಸೂಯೆ ಮರೆತು ಸಂಬಂಧಗಳನ್ನ ಪ್ರೀತಿಸಿ//

ಶಿಸ್ತಿನಿಂದ ಶೂಚಿರ್ಭೂತರಾಗಿ ಆಚರಿಸುವ ಉತ್ಸವ
ಪ್ರತಿವರ್ಷ ನಡೆಯುವುದು ದೇವಿರಮ್ಮನ ಜಾತ್ರೋತ್ಸವ
ಬೆಟ್ಟದಲ್ಲಿ ಪ್ರಜ್ವಲಿಸುವುದು ಪವಿತ್ರ ದೀಪೋತ್ಸವ
ಮಲೆನಾಡಿಗರಿಗೆ ಈ ದೀಪಾವಳಿಯೇ ಮಹೋತ್ಸವ//







-


3 JUN 2022 AT 10:32

ಕಾಫಿನಾಡಿನ ಸಿರಿಯು ಮೈದುಂಬಿ ಹರಿಯುವ ಝರಿಯು,
ಪಶ್ಚಿಮಘಟ್ಟಗಳ ಮಡಿಲು ಶ್ರೀಶಾರದೆ ನೆಲಸಿಹ ಹಸಿರ ತೊಟ್ಟಿಲು.— % &

-


11 JUN 2019 AT 23:11

ಪಶ್ಚಿಮ ಘಟ್ಟದ ಗಿರಿ, ಶಿಖರಗಳಲ್ಲಿ
ಸದಾ ಹಸಿರು ಉಸಿರಾಡಲು
ವರ್ಷಧಾರೆ ಸುರಿಸುತ್ತಿದೆ ಮಳೆರಾಯ.

-



ಮಲೆನಾಡು....
Read caption
👇👇👇👇👇

-


18 AUG 2019 AT 12:36

ರೂಪ

ರೂಪ ಅಪರೂಪ
ನಿನ್ನಂದವೆ ಅಪರೂಪ
ನಗುವೇ ನಿನ್ನಗುವೇ
ನಿನಗೆ ಆಭರಣವೇ

ಹೂವಿಗಿಂತ ಕೋಮಲೆ
ಚಿಕ್ಕಮಗಳೂರ ಈ ಬಾಲೆ
ಬಣ್ಣಿಸೋ ಬಗೆಯ ಅರಿಯದೆ
ನಾ ಸೋತು ಹೋದೆ

-