ಚಿತೆಯಲ್ಲಿ ದಹಿಸಿದ್ದು
ಅವರೀರ್ವರಷ್ಟೇ ಅಲ್ಲ
ಇವಳೂ ಕೂಡ,
ಸಹಗಮನ ಅವಳಷ್ಟೇ
ಅಲ್ಲ, ಬಾಹ್ಯಕ್ಕೆ
ಗಟ್ಟಿಗಿತ್ತಿಯಂತಿದ್ದು
ಒಳಗೊಳಗೆ ಉರಿದವಳು..
#ಕುಂತಿ-
ನೀನು ಮಾತನಾಡುವ ಅವಶ್ಯಕತೆ
ಇದೆಯೆಂದಾದರೆ ಮಾತನಾಡಿಬಿಡು,,
ನೀನಾಡುವ ಇಂದಿನ ಮಾತಿನಿಂದ
ನಿನ್ನವರು ನೋವುಣ್ಣಬಹುದೆಂಬ
ಕಾರಣಕ್ಕೆ
ಮೌನದ ಸೋಗೆ ತೊಟ್ಟು
ಎಲ್ಲಾ ಸಮಯದಲ್ಲೂ
ಮೂಕ ಪ್ರೇಕ್ಷಕಳಾಗಬೇಡ,,
ಎಚ್ಚರವಿರಲಿ,, ಕೆಲವೊಮ್ಮೆ
ನಿನ್ನ ಅತಿಯಾದ ಮೌನವೇ
ಕೊನೆವರೆಗೂ ನಿನ್ನನ್ನ
ಅಪರಾಧಿ ಸ್ಥಾನದಲ್ಲಿಟ್ಟು
ಜೀವನ ಪೂರ್ತಿ ಪಾಪಪ್ರಜ್ಞೆಯಿಂದ
ನರುಳುವಂತೆ ಮಾಡಿದರು ಅಚ್ಚರಿಯಿಲ್ಲ!!
ಹ್ಮ್ ನಿಜಾ,,
ಕರ್ಣನ ವಿಷಯದಲ್ಲಿ ಕುಂತಿ
ಇಂದಿಗೂ ಅಪರಾಧಿಯಾಗಿಯೇ
ಉಳಿದುಬಿಟ್ಟಳು!!
✍️ಶಿಲ್ಪಾ ಪಾಲ್ಕಿ💞
-
ಕೇಳಿದಳಾ ಕುಂತಿ ವರವ ಮಗ ಕರ್ಣನೊಳು
ತೊಟ್ಟ ಬಾಣವ ಮರಳಿ ತೊಡದಿರೆಂದು!
ವರವ ಕೇಳಿದಳೋ ಇಲ್ಲಾ ಶಾಪವನಿತ್ತಳೋ
ತಾಯ್ತನಕೆ ಕಲಂಕ ಎನಿಸಿದಳೋ
ಐವರನುಳಿಸಲು ಒಬ್ಬನ ಬಲಿಯಿತ್ತಳೋ
ತಳಮಳಿಸಿದಳೆಷ್ಟೋ, ತನ್ನನೆಷ್ಟು ಶಪಿಸಿಕೊಂಡಳೋ
ಏನೀ ವಿಧಿಯ ಮಾಯೆ? ಯಾಕೀ ಕರುಳ ಕೊರೆವ ನೋವು?
ತಾಯಿಯೇ ಆಗುವಳೇಕೆ ಪ್ರತಿಬಾರಿಯೂ ತಪ್ಪಿತಸ್ಥೆ??-
ಕುಂತಿಯು ಪ್ರತಿಬಾರಿ ಕರ್ಣನನ್ನು ಭೇಟಿಯಾದಾಗ ಜನ್ಮರಹಸ್ಯ ಮತ್ತು ಅರ್ಜುನನ ವಧೆಯ ಬಗ್ಗೆಯೆ ಮಾತಾನಾಡಿ , ಕರ್ಣನನ್ನು ಕಟ್ಟಿ ಹಾಕಿದ್ದು ಸರಿಯೇ??
ಅವನೂ ಕೂಡ ಅವಳ ಮಗನೆಂದು ಅವಳ ಕರುಳಿಗೆ ಅನಿಸಲಿಲ್ಲವೇ..??-
ವಿದ್ಯೆಯ ಅರಿವೆದೆಯಂದು ಅನಗತ್ಯ ವೇಳೆಯಲ್ಲಿ ಬುದ್ದಿ ತೋರಲು ಹೋದರೆ ಮುಂದೆ ಅದರ ಪರಿಣಾಮವು ಬಹು ದುರಂತವಾಗಿರುವುದು.......
ಮದುವೆಗೂ ಮುಂಚೆ ಕುಂತಿ ಕರ್ಣನನ್ನು ಹೆತ್ತಂತೆ ಹೆತ್ತು ಸಾವಿನವರೆಗು ಪಚ್ಚಾತ್ತಾಪ ಪಟ್ಟಂತೆ ........-