M G Gachinamani   (✍️ಮ.ಗು👈)
14 Followers · 14 Following

ಸುಡುವ ಕಡು ಬಿಸಿಲ ಹೊದ್ದು, ಉರಿಯುವ ಹಸಿ ಕಾರವ ತಿಂದು,ನಿತ್ಯವೂ ಸಿಹಿಯನ್ನು ಹಂಚುವ ಚಂದದ ಕಲಬುರಗಿ_ಕಂದ ನಾ
Joined 24 May 2020


ಸುಡುವ ಕಡು ಬಿಸಿಲ ಹೊದ್ದು, ಉರಿಯುವ ಹಸಿ ಕಾರವ ತಿಂದು,ನಿತ್ಯವೂ ಸಿಹಿಯನ್ನು ಹಂಚುವ ಚಂದದ ಕಲಬುರಗಿ_ಕಂದ ನಾ
Joined 24 May 2020
27 DEC 2022 AT 10:52

ನಕ್ಕವರು ನನ್ನವರೇ
ನಗಿಸಿದವರು ನನ್ನವರೇ


ಪಕ್ಕದಲ್ಲಿದ್ದು ಚೂರಿ ಇಟ್ಟವರು ನನ್ನವರೇ
ದೂರದಲ್ಲಿದ್ದು ಹಿತ ಬಯಸಿದವರು ನನ್ನವರೇ


ಪಾಪಿ ಅಂದವರು ನನ್ನವರೇ
ಪಾಪ ಅಂದವರು ನನ್ನವರೇ

ನಾನು ನನ್ನವರೆಂದು ಕೊಂಡ ನನ್ನವರೆಲ್ಲರುಗು ಒಳಿತು ಮಾಡಪ್ಪ......ಮಾದಪ್ಪ.....

-


5 AUG 2020 AT 20:51

ವಿಶ್ವಾಸ ಗಾಥಕರೆದುರು ತಿರುಗಿ ಬೀಳುವುದಕ್ಕಿಂತ
ಸ್ವಲ್ಪ ಹಿಂದೆ ಸರಿದು ದೂರವಿದ್ದು ಬಿಡು

ಸರದಿಯಲ್ಲಿ ಅವನೇ ಮೊದಲಿಗ ನಾಗಿರಲಿ
ಹೊತ್ತ ವಿಷಯದ ಪಲಿತಾಂಶ ಆತನದು ನಿನ್ನದು ಬೇರೆ ಬೇರೆಯೇ ಆಗಿರಲಿದೆ

-


20 AUG 2021 AT 22:34

ಮರೆಯಾಯಿತು ನನ್ನ
ಮಾಯಾ ಜಿಂಕೆ
ಮರೆತೇ ಹೋಯಿತು
ನನ್ನ ಪ್ರೀತಿಯ ಕಾಣಿಕೆ (ಕೋರಿಕೆ)

ಆದರೂ ಹಾರೈಸುವೆ
ನಾ ದಿನಾ ನಿನ್ನ ಸುಖಕ್ಕೆ
ಶುಭಾವಾಗಲಿ ನಿನ್ನ
ಮುಂದಿನ ಪಯಣಕ್ಕೆ

-


10 AUG 2021 AT 14:45

ಇಣುಕಿಯಾದರೂ ನೋಡೊಮ್ಮೆ ಕಿಡಕಿಯಲಿ ಓ ನನ್ನ ಗಿಣಿಮರಿಯೇ
ನಿಂತೇನು ಕಾಯುತ ನಿನಗಾಗಿ
ತಡ ರಾತ್ರಿಯಲಿ ನಡು ರಸ್ತೆಯಲಿ
ತುಸು ಆಚೆ ಬಂದು ಉಪಚರಿಸು ಬಡ ಜೀವ ಬಾಯಿ ಬಾಯಿ ಬಡೆಯುತ್ತಿದೆ ಕೂಗು ಕುಗೆಂದು
ಹುಚ್ಚು ಮನಕ್ಕೇನೂ ಗೊತ್ತು ಅವಳು
ಬಾರಳು ಇಂದು ಎಂದು ಎಂದೆಂದೂ

-


13 JUL 2021 AT 17:54

ತುಂಬಿದ ಮನೆಗೆ ಮುದ್ದು
ಅಳಿಯನ ಆಗಮನ
ಎಲ್ಲರ ಮನ ತಲ್ಲಣ 🥳

-


16 JUN 2021 AT 17:13

ಕತ್ತಲಲ್ಲಿ ಬೆತ್ತಲಾದ ಚಂದಮಾಮ
ಬೆಳಗೆದ್ದು ನೋಡೋದ್ರಾಗ ಅಂವ ಮಂಗಮಾಯ

ಮೂರು ತಿಂಗಳು ಕಳೆಯೋದ್ರಾಗ ಮಾಡೇ ಬಿಟ್ಟ ಮೂರಾಬಟ್ಟಿ
ಹೊರಗ ಹೆಂಗ ತಿರುಗಲೀ ನಾ ಹೊತ್ತುಕೊಂಡು ಈ ಡೊಳ್ಳುಹೊಟ್ಟಿ

ಬೆಳ್ಳನ ಹಣಿಗಿ ಹಚ್ಚು ನೀ ಕೆಂಪಾನ ಸಿಂಧೂರ
ತುಂಬಿದ ಈ ಮನಿಯ ಬೇಳುಗುತಿನಿ ನಾ ಬಲುಜೋರ

ಹುಟ್ಟಿದ ಮನಿ ಬಿಟ್ಟು ಬಂದಿನಿ ತಂದೆ ತಾಯಿನ ದೂರ ಮಾಡೇನಿ
ನೀ ಹೇಳಿದ್ದೆಲ್ಲಾ ಕೆಳತ್ತಿನಿ ನಿನಗಾಗಿ ಈ ಜೀವ ಮೂಡಿಪಾಗಿಟ್ಟಿನಿ

ಎಲ್ಲಿ ಹೊದಿಯೋ ಸರದಾರ ಮಾಡದಿರು ನನ್ನ ದೂರ
ನಿನ್ನ ಸಲುವಾಗಿ ಬಿಟ್ಟೆನಿ ಮನೆ - ಮಾರ
ಮೊಸಮಾಡಬೇಡ ಓ ನನ್ನ ಜೋಕುಮಾರ

-


9 MAY 2021 AT 22:42

ದೇವರೇ ನನಗಾಗಿ ನಾನೇನು ಬೇಡಲಾರೆ.
ತಾಯಂದಿರ ದಿನದಂದು ಕೈ ಮುಗಿದು ಕೇಳುತ್ತಿರುವೆ.
ಅವಳಿಗೊಂದು ಒಳ್ಳೆಯ ಮುದ್ದಾದ ಸೊಸೆಯನ್ನು ಕರುಣಿಸು ದೇವ.
🙈🙈🙈

-


3 FEB 2021 AT 22:36

ಅವನೇ ಎಲ್ಲಾ ಆಡಿಸ್ತಾನಂತ
ನಾವು ಅವನ ಕೈ ಗೊಂಬೆಯಂತ
ಅವ ಹೇಳಿದಂಗ ನಾವು ಕುಣಿಬೇಕಂತ
ಆಟ ಮುಗಿದ್ಮೆಲೆ ಮೇಲೆ ಕರಸ್ಕೋತ್ತಾನಂತ
ಭಗವಂತ ಬಹಳ ಬುದ್ಧಿವಂತ

-


26 OCT 2020 AT 10:13

ಬಡವೆಯ ಪುತ್ರನಾಗು ಪರವಾಗಿಲ್ಲ
ದುರಾದೃಷ್ಟದ ಕೂಸಾಗಬೇಡ ನೋಡ

-


23 OCT 2020 AT 15:06

ಪುಸ್ತಕದಲ್ಲಿ ಬರದಿತ್ತು ಸಮಾಜದಲ್ಲಿ ಅವಮಾನ ನಿಂದನೆ ಸರ್ವೇ ಸಾಮಾನ್ಯವೆಂದು
ಓದುವಾಗ ತಿಳಿದಿರಲಿಲ್ಲ ಅದರ ಅನುಭವ ಹೇಗಿರುತ್ತದೆಂದು

-


Fetching M G Gachinamani Quotes