QUOTES ON #ಅವನೆಂದರೆ

#ಅವನೆಂದರೆ quotes

Trending | Latest
2 MAR 2020 AT 20:30

ಅವನೆಂದರೆ
ವಂಚನೆ ಇಲ್ಲದ ಸಾಮ್ರಾಟ
ನನ್ನೊಲವೆ ಅವನಿಗೆ ಕಿರೀಟ.!

-


12 APR 2020 AT 18:58

ಅವನೆಂದರೆ
ನನ್ನೊಲವ
ಸೊಂಕಿನಿಂದ
ಶಂಕಿತನಾಗಿ
ನಾಳೆಗಳ ಬದುಕಿಗೆ
ಪ್ರತ್ಯೇಕತೆಯ
ಕೋಣೆಯಲ್ಲಿ
ಬಂಧಿಯಾಗಿ
ನನಗಾಗಿ
ಒಲವಿನ ಶುಶ್ರುಷೆ
ಪಡೆದ ನಾವಿಕ.!

-


27 OCT 2019 AT 17:32

ಅವನೆಂದರೆ
ನನ್ನಂತರಾಳದೊಳಗಿನ ಪ್ರೇಮವೀಣೆ
ಭಾವದಲೆಗಳಲಿ ಉಕ್ಕುಕ್ಕಿ ಬರುತಿರುವ ಭಾವತರಂಗ.....

(Read Caption)...👇👇👇👇👇

-


16 JAN 2020 AT 16:18

ಅವನೆಂದರೆ
ಅನಿಯಮಿತ
ಅಪರೂಪದ ಕರೆಯೋಲೆಗಳ
ಅನನ್ಯತೆಯ ಸರದಾರ.!
ಅನವರತ ನನನ್ನು
ಆರಾಧಿಸುವ ಕಲೆಗಾರ.!
ಅನುಕ್ಷಣವೂ ಬಿಟ್ಟಿರದ
ಅಭಿಮಾನದ ಶೂರ.!

-


20 SEP 2020 AT 9:29

ಅವಳೆಂದರೆ ಬೂಂದಿಲಾಡಿನ ಬಿಳಿ ಗೋಡಂಬಿ 🤩
ನಾನೆಂದರೆ ಅದೆ ಬೂಂದಿಲಾಡಿನ ಕಪ್ಪು ಲವಂಗ 😅

-


16 OCT 2019 AT 11:56

ಅವನೆಂದರೆ
ನನ್ನ ಬರಹಗಳಲ್ಲಿರುವ ಜೀವಭಾವ
ನನ್ನೊಳಗಿನ ನವ್ಯ ಪ್ರತಿಭೆಯೂ
ಅಕ್ಷರಗಳೊಂದಿಗಿನ ಚೆಲುವು
ನನ್ನೊಂದಿಗಿನ ಭವ್ಯ ಸಂಭೂತನು!

ಆಂತರ್ಯದ ಅರಸನಿವ
ಅಂತರಾಳದೊಲುಮೆಯ ಪ್ರೇಮ ಚಿಲುಮೆ
ಅಗಣಿತ ರೂಪರಾಶಿಯೊಳಗಿನ ಕೃಷ್ಣಸುಂದರನು
ಅಣುರೇಣುಗಳಲ್ಲೂ ಉದಯಿಸಿಹ ಅಮೃತನೂ!

ಈ ಜನ್ಮಜೋಳಿಗೆಯಲಿ ಸದಾ ಅನುರಕ್ತವೂ
ನನ್ನೊನೊಲಮೆಯ ಭಾವಬಿಂಬವೂ
ನನ್ನ ಕವನದ ಪಲ್ಲವಿಯೊಳಗಿನ ರಸಭಾವವೂ
ಕೃಷ್ಣನ ಲಾಲಿತ್ಯನೂ; ರಾಮನ ಗಣಗ್ರಾಹಿಯೂ!

-


14 OCT 2019 AT 13:05

ಅವನೆಂದರೆ
ವಿರಾಟ ದರ್ಶನಕ್ಕೆ ಒರಟು ಮನದ ಮಿಂಚಿನ ರೂಪ ;
ನನ್ನೊಲವಿನ ಭಾವಾಂತರಂಗದಲ್ಲಿರುವ ಆರದ ದೀಪ!

-



*ಟಂಕಾ*
ಅವನೆಂದರೆ
ನನ್ನೆಲ್ಲಾ ತಪ್ಪುಗಳ
ಮನ್ನಿಸಿ ಸದಾ
ನಗುವುದನ್ನ ಹೇಳಿ
ಕೊಡೋ ಸೊಗಸುಗಾರ

-


3 NOV 2021 AT 22:44

ಅವನೆಂದರೆ....
ಕಲ್ಪನೆಯಲ್ಲಿ ಹುಟ್ಟುವ
ಕವಿತೆ,
ಬರೆಯಲು ಪದಗಳಿಗೇನು
ಕೊರತೆ...?

-



ಅವನೆಂದರೆ
ತನ್ನ ಜೀವನದ ಪ್ರಮುಖವಾದ
ನೋವ ಮರೆತು ತನ್ನವರಿಗಾಗಿ
ಬದುಕುತ್ತಿರುವವನು!

-