ಶಿವನಿಗೆಂದೇ ಅರ್ಪಿತ ಶಿವರಾತ್ರಿ
ಪೂಜಿಸುವ ಭಕ್ತನಿಗದು ಮಹಾರಾತ್ರಿ
ಅಂತರಂಗದಲಿ ಆರಾಧಿಸಿದೊಡನೆ
ತಮ ಕಳೆದು ಬೆಳಕು ನೀಡಿದ ಮಹಾಶಿವರಾತ್ರಿ
-
22 FEB 2020 AT 13:09
11 APR 2024 AT 21:34
ರುಚಿ,
ಒಂದು ಅಧ್ಬುತ ರುಚಿ
ಅಂದರೆ ಹೇಗಿರಬೇಕು ?!🤔
ನಾಲಿಗೆಯ ಬಾಗಿಲು ತಟ್ಟಿ
ಹೃದಯದ ಮನ ಮುಟ್ಟಿ
ಕಂಗಳಲ್ಲಿ ನೆನಪುಗಳ ಹೊತ್ತಿ
ಮುಖದಲ್ಲಿ ಮಂದಹಾಸ ತುಂಬಿಸಿ
ಮೈ ಮರೆಸುವ ಅಮೃತದಂತೆ ಇರಬೇಕು.😋-
2 JUN 2020 AT 17:42
ಅಳತೆಯೂ ಮೀರಿದ ಆಸೆ ನನ್ನಲ್ಲಿ ,
ಹಿಡಿತಕ್ಕೂ ಸಿಗದ ಕನಸುಗಳು ನನ್ನಲ್ಲಿ,
ಕಲ್ಪನೆಗೂ ನಿಲುಕದ ಪ್ರೀತಿ ನನ್ನಲ್ಲಿ ,
ಸೆಳೆತಕ್ಕೂ ಮೀರಿದ ಭಾವನೆಗಳು ನನ್ನಲ್ಲಿ ,
ಗಮನಕ್ಕೂ ಬಾರದ ಒಳ್ಳೆಯತನ ನನ್ನಲ್ಲಿ ,
ಸಂಬಂಧಗಳಿಗೂ ಮೀರಿದ ಸ್ನೇಹ ನನ್ನಲ್ಲಿ ...!
-