ನೀ ಕೈ ಹಿಡಿದು ನಡೆಸುವಾಗ
ನಿನ್ನ ಮೇಲಿನ ನಂಬಿಕೆ ಬಲವಾದಾಗ
ನಿನ್ನ ಹೊರತು ಬೇರಿನ್ನಾವ ಅಪೇಕ್ಷೆಯೂ ಇಲ್ಲದಾಗ-
ಅವಳಿಂದ ದೂರವೇ ಇದ್ದವನು ತನ್ನದೇ
ಫೋಟೋ ಒಂದನ್ನು ಹಾಗೇ ಸುಮ್ಮನೇ
ವಾಟ್ಸಾಪ್ ಸ್ಟೇಟಸ್ ಅಲ್ಲಿ ಹಾಕಿಬಿಟ್ಟಿದ್ದನು..
ಅವನಿರುವನ್ನೂ ಮರೆಯಲು ಹೊರಟಿದ್ದವಳನ್ನು
ಮರೆಯಬೇಕಿದ್ದ ಅಷ್ಟೂ ನೆನಪುಗಳೊಳಗೇ
ಅವಳನ್ನೇ ಮರೆಯುವಂತೆ ಮಾಡಿಬಿಟ್ಟಿದ್ದನು..
-
ನಿನ್ನ ನೆನಪೊಂದೇ ನನ್ನ ಸಂಗಾತಿಯಾಗುವುದು
ನೀ ನನ್ನೊಂದಿಗಿಲ್ಲದೇ ನಾ ಹೇಗೆ ಬದುಕುವುದು
ಮೌನದೊಳಗೂ ನೀನೇ ನನ್ನೆಲ್ಲಾ ಮಾತಾಗಿರುವಾಗ-
ಮಾತನಾಡದೇ ಉಳಿದ ನಿನ್ನ ಮೌನ
ನನ್ನ ಹೃದಯವ ಇರಿಯುವ ಮುನ್ನ
ಬಹುದೂರ ಸಾಗೆಂದಿದೆ ನನ್ನ ಮನ-
ಮನದ ತುಂಬಾ ಮಡುಗಟ್ಟಿದ್ದ
ಕೊನೆಯಾಗದ ನೋವಿನ ಅಳಿವಿಗೂ..
ತನಗಲ್ಲದಿದ್ದರೂ ಇತರರಿಗಾಗಿಯಾದರೂ
ತೋರ್ಪಡಿಸುವ ನಲಿವಿನ ಉಳಿವಿಗೂ..
ಗುರಿಗಳೆಗೆ ಮಾತ್ರವೇ ತನ್ನ ಪಯಣವೆಂದರೂ
ಬದಲಾಗದ ಜೀವನದ ಜಂಜಾಟಗಳಿಗೂ...-
ನಿನ್ನೊಳಗೆ ಸದಾಕಾಲಕ್ಕೂ
ಉಳಿದಿದ್ದು ಮೌನವೇ
ಈಗೀಗ ನನ್ನಾವರಿಸುವ ನೀನು
ಉಳಿಸಿದ್ದೂ ಮೌನವೇ
ಒಂದೊಮ್ಮೆ ಎಲ್ಲವೂ ಮುಗಿದಿದೆ
ಎನ್ನುವುದೂ ಮೌನವೇ
ಅಳಿದ ನಂತರವೂ ಉಳಿದುಬಿಟ್ಟದ್ದು
ನೀನು ಮತ್ತು ಮೌನ.
ಮಾತುಗಳಿಲ್ಲದೆಯೇ ಉಸಿರಾಗಿದ್ದು
ನೀನು ಮತ್ತು ಮೌನ..
ಜಗವರಿಯದಿದ್ದರೂ ಮನವರಿತದ್ದು ಮಾತ್ರ
ನಿನ್ನೊಲವಿನ ಮೌನ.-
ನಿನ್ನ ವ್ಯಾಪ್ತಿಗೆ ಒಳಪಟ್ಟ ಮೇಲೆ
ಮೌನ ಬಹಳ ಆಪ್ಯಾಯವೆನಿಸುತ್ತಿದೆ..
ಅದಕ್ಕೇ ಮೌನಕ್ಕೆ ಬಂಗಾರದ ಬೆಲೆಯೇನೋ...-
ಅನಿರೀಕ್ಷಿತತೆಯಿಂದಾರಂಭವಾಗಿ
ಆಶ್ಚರ್ಯದ ಜೊತೆ ತಿಳಿ ನಗುವಿನ
ಲೇಪನದಿ ಗಾಢವಾದ ಖುಷಿಯಾಗಿ
ಸಂಭ್ರಮಿಸುವ ಮೊದಲೇ ವಿಷಾದತೆಯೊಂದಿಗೆ
ಶೂನ್ಯದ ಅತಿಥಿಯಾಗಿತ್ತು...-
ಅದೆಷ್ಟೋ ದೂರ ದೂರಕ್ಕೂ ತಮ್ಮ
ಘಮವನ್ನು ಬೀರಿ ಅದರಿಂದಲೇ ಎಲ್ಲರ
ಸೆಳೆವ ಅಂಗಳದ ತುಂಬಾ ಅರಳಿ ಬಿದ್ದ
ಪಾರಿಜಾತದ ಕಂಪಿನಂತೆ ನಿನ್ನ ನೆನಪುಗಳಿರುವುದು
ತುಸು ದೂರವೋ ಅತೀ ಸನಿಹವೋ ಹೇಗಿದ್ದರೂ
ಎಲ್ಲಿದ್ದರೂ ನನ್ನೊಳಗೆ ಕಾರಣವಿಲ್ಲದೆಯೇ ಮೂಡುವ
ನಿನ್ನದೇ ನೆನಪುಗಳಿಂದಲೇ ಮನ ಪುಳಕಗೊಳ್ಳುವ
ಪರಿಯೇ ಸದಾ ನನಗೆ ಅಚ್ಚರಿ ಮೂಡಿಸುವುದು
ಒಂದಿಷ್ಟೂ ವಿಚಲಿತವಾಗದೇ ತನ್ನಲ್ಲಿನ ಘಮದ
ಒಲವನ್ನು ಪ್ರಕೃತಿಯಿಂದ ಪಡೆದು ಪ್ರಕೃತಿಗೇ ಮರು
ಮರಳಿಸುವ ಪರಿಯಂತೆಯೇ ನಿನ್ನ ನೆನಪುಗಳಿಂದಲೇ
ಚೈತನ್ಯಗೊಳ್ಳುವ ಮನ ನಿನ್ನೊಂದಿಗಷ್ಟೇ ನಲಿವುದು
01.01.2023
-