ಮೌನ ವೀಣೆ   (✍ಅಂಬಿಕಾ.ಬಿ.ಕೆ😊)
101 Followers · 71 Following

read more
Joined 16 February 2020


read more
Joined 16 February 2020
14 MAR 2022 AT 10:46

ನಾವು ಸಾವಿರಾರು ಕನಸುಗಳ ಕಾಣುತ್ತೆವೆ
ಆದರೆ,
ನಾವು ಕಂಡ ಕನಸುಗಳಿಗೆ ಸಾವಿರಾರು‌ ಬಣ್ಣ ಹಚ್ಚುವರು ಸಿಕ್ಕರೆ ಬಾಳದು ಸುಂದರ ವನ
ಆದರೆ,
ನಾವು ಕಂಡ ಸಾವಿರಾರು ಕನಸುಗಳ ಕೊಲೆ ಗೈಯುವವರು ಸಿಕ್ಕರೆ ಬಾಳದು ಸಾವಿನ ಮನ

-


13 MAR 2022 AT 11:56

ಬರಡು ಬದುಕಲ್ಲೇಕೆ
ಗೊಡ್ಡು ಆಚರಣೆಗಳು
ಅಂಧಾನುಕರಣೆಯ ಮೂಲೋತ್ಪಾಟನೆ ಮಾಡುತ್ತಾ,
ಪಾಮರರೇ ಬನ್ನಿ ಬದಲಾವಣೆಯ ಬೆಳಕಲಿ ಬದುಕೋಣ...

-


10 MAR 2022 AT 22:35

*ನನ್ನವನು*
ಹೊಳೆವ ಹೊಗರು ನನ್ನವನು,
ನಿತ್ಯವ ಹರುಷ ತರುವನು,
ಕೋಪಕೆ ಕೊಂಚ ರಜೆ ಕೊಡುವನು,
ಪ್ರೇಮಲೋಕಕ್ಕೆ ಪ್ರತಿದಿನ ಪ್ರವಾಸಕ್ಕೆ ಎಳೆದೊಯ್ಯುವನು...

-


4 MAR 2022 AT 20:58

ಒಂದು ಹೆಣ್ಣು ತನ್ನ ಹುಡುಗ/ಗಂಡನಿಂದ
ಬಯಸೋದು ಪ್ರಮುಖವಾಗಿ
ಮೂರೇ ಮೂರು ಅಂಶಗಳು.....

1.ಸಮಯ /Time
2.ಪ್ರೀತಿ /Love
3.ಬೆಂಬಲ / Support

-


3 MAR 2022 AT 9:20

ಸುಳ್ಳಿನಿಂದ ಕಟ್ಟಿದ ಅರಮನೆಯ
ಆಯುಷ್ಯ ಕಡಿಮೆ...

-


26 FEB 2022 AT 20:22

ನಮ್ಮ ಬದುಕು ಪುಸ್ತಕದಂತಿರಬೇಕು,
ಮಾದರಿಯಾಗಿ, ಮಾರ್ಗದರ್ಶಕವಾಗಿ,
ಓದುಗರಿಗೆ ಹಿತವೆನಿಸುವಂತೆ.....— % &

-


17 FEB 2022 AT 17:06

ಯಾರನ್ನೂ ಕೇವಲವಾಗಿ ಕಾಣಬೇಡಿ,
ಪ್ರತಿಯೊಬ್ಬರಲ್ಲೂ ದೇವರು ಒಂದೊಂದು ವಿಶೇಷತೆಯನ್ನು ಇಟ್ಟು ಕಳಿಸಿರುತ್ತಾನೆ.....— % &

-


16 FEB 2022 AT 17:59

ತೋರಿಕೆಯ ಜೀವನಕ್ಕಿಂತ,
ತೃಪ್ತಿಕರ ಜೀವನ ಶ್ರೇಷ್ಠ...— % &

-


13 FEB 2022 AT 21:30

ನಿನ್ನ ಪ್ರೀತಿಯ ಮಾತುಗಳ ಹೊಡೆತಕ್ಕೆ ಸೋತು ಹೋಗಿರುವೆ,
ಇನ್ನೂ ನಿನ್ನ ಕಣ್ಗಳ ಸೆಳೆತಕ್ಕೆ ಸಿಲುಕದಿರುವೆನೆ?— % &

-


13 FEB 2022 AT 21:24

ಪಡೆದದ್ದನ್ನು ಕಳೆದುಕೊಳ್ಳದಿರು,
ಮರೆತವರನ್ನು ಮರೆತು ಬಿಡು,
ಇದ್ದವರನ್ನು ಕಡೆಗಣಿಸದಿರು,
ಸಿಕ್ಕಷ್ಟರಲ್ಲಿಯೇ ತೃಪ್ತಿ ಪಡು,
ಸಿಗಲಾರದಕ್ಕಾಗಿ ಹವಣಿಸದಿರು,
ಆಗುವ ಕಾರ್ಯಕ್ಕೆ ಸಮಯ ಕೊಡು,
ಅಸಾಧ್ಯವಿರುವ ಆಗಸಕ್ಕೆ ಏಣಿ ಹಾಕಿ ಸಮಯ ವ್ಯಯ ಮಾಡದಿರು...— % &

-


Fetching ಮೌನ ವೀಣೆ Quotes