ಅತ್ತೆ ಮತ್ತು ಸೊಸೆ ಪರಸ್ಪರ ಸಿಹಿ ಕಹಿ ನೆನಪುಗಳನ್ನ ಮತ್ತು ಬದುಕಿನ ಏಳು ಬೀಳುಗಳ ಅನುಭವಗಳನ್ನ ಹಂಚಿಕೊಳ್ಳುವ ಒಳ್ಳೆಯ ಸ್ನೇಹಿತರಾದರೆ ಸಂ..ಸಾರ ಇರುತ್ತೆ ಸಂ..ಬಂಧಗಳಲ್ಲಿ.
(ಇಲ್ಲಿ ಇಬ್ಬರು ಬಯಸುವುದು ತಮ್ಮ ಮನೆಯ ಏಳಿಗೆಯನ್ನೇ, ಆದರೆ ಯೋಚಿಸುವ ರೀತಿ ಬೇರೆಯಾಗಿರುತ್ತದೆಯಷ್ಟೇ...)-
ನುಡಿಸಿಂಧು💐
ಅದೆಷ್ಟೋ ಸೊಸೆಯಂದಿರು ಹೊಂದಿಕೊಂಡು
ಹೋಗುತ್ತಿದ್ದಾರೆ ಎಂದು ಅರಿತ ಮೇಲೆಯೇ
ಅತ್ತೆಯಂದಿರು ಮತ್ತಷ್ಟು
ಮಾನಸಿಕ ಹಿಂಸೆ ನೀಡುವುದು.
ಒಮ್ಮೆ ತಿರುಗಿಬೀಳಿ. ಹೆದರಿಹೋಗುವರು.-
ಕೆಲವು ಅತ್ತೆಯಂದಿರಿಗೆ ಸೊಸೆ ಮಾಡುವ ಕೆಲಸದಲ್ಲಿ
ತಪ್ಪು ಹುಡುಕಿ ಕೊಂಕು ಮಾತನಾಡುವುದೇ ಕೆಲಸ.
ಈ ಮಹತ್ಕಾರ್ಯಕ್ಕೆ ಅವರ ಹೆಣ್ಮಕ್ಕಳೆ, ಸೊಪ್ಪು ಹಾಕಿ ಹೊಗಳಿ ತಲೆಗೆ ಕಿರೀಟ ಏರಿಸುವುದು.-
ಅತ್ತೆ : ನೋಡಿದ್ಯಾ, ಮಗನಿಗೆ ಮದುವೆಯಾದರು
ನನ್ನ ಹಿಡಿತದಲ್ಲೇ ಇದ್ದಾನೆ ಇನ್ನು.. 👹😀
ಮಗ : (ಹೆಂಡತಿಗೆ ಬೈಯುತ್ತಾ...) ಅಮ್ಮನ ಕೊನೆ ಉಸಿರಿರೋವರೆಗು ಅವಳು ಹೇಳಿದ ಹಾಗೆ ಕೇಳೋದು ನಾನು. ಅವಳ ಮನಸ್ಸಿಗೆ ಬೇಸರ ಮಾಡೋದಿಲ್ಲ.. ನೀನ್ ಏನ್ ಮಾಡ್ತೀಯಾ? ಮಾಡು. ಹೋಗು..
ಸೊಸೆ : ಮಗನ ತಬ್ಬಿ ಅಳತೊಡಗಿದಳು. ಮಗ ಕೇಳಿದ ಯಾಕಮ್ಮ ಅಳ್ತಾ ಇದ್ದೀಯಾ?
ಅಮ್ಮ : ನಿನ್ನ ಅಜ್ಜಿ, ಅಪ್ಪ ಮನಸ್ಸಿಗೆ ತುಂಬಾ ನೋವು ಕೊಡ್ತಾ ಇದ್ದಾರೆ. 😭 ತುಂಬಾ ಅಳು ಬರ್ತಿದೆ.
ಮಗ ಮನಸ್ಸಿನಲ್ಲೇ ಲೆಕ್ಕಹಾಕಿದ. ಅಪ್ಪ ಕೆಟ್ಟವ. ಅಮ್ಮನ ಕಣ್ಣಲ್ಲಿ ನೀರು ಹಾಕಿಸಿದ.
(ವರುಷಗಳು ಉರುಳಿದವು ಹರೆಯದ ಮಗ ಒಮ್ಮೆ ಹೇಳಿಯೇ ಬಿಟ್ಟ)
"ಅಪ್ಪ... ನೀನು ಹುಟ್ಟಿಸಿದ ಮಾತ್ರಕ್ಕೆ ಅಪ್ಪ ಆಗೋದಿಲ್ಲ. ಅಮ್ಮನಿಗೆ ನೀನೆಷ್ಟು ನೋವು ಕೊಟ್ಟಿದ್ದೀಯಾ ಅಂತ ಗೊತ್ತು ನನಗೆ.
ಅಪ್ಪನ ಎದೆಗೆ ಚೂರಿಹಾಕಿದ ಹಾಗೆ ಭಾಸವಾಯಿತು.
(ಸಮಾಪ್ತಿ)-
ಬೀದಿದೀಪ
ಸಾಯೋವರ್ಗೂ
ತಿಜೋರಿ ಕೀಚೈನು
(ಅಧಿಕಾರ) ನನ್ನ ಕೈಲೇ
ಇರಬೇಕು ಎನ್ನೋ
ಅತ್ತೆ ಒಂದು ಕಡೆ.
ಮಗನಿಗೆ ಮದ್ವೆ
ಮಾಡ್ಸಿ ಮನೆ ಜವಾಬ್ದಾರೆಯೆಲ್ಲ
ಸೊಸೆಯೇ ನೊಡ್ಕೊಳ್ಳಪ್ಪ
ಅನ್ನೋ ಅತ್ತೆ ಒಂದು ಕಡೆ.-
(ಗಂಡನನ್ನು ಕರೆದು ಅತ್ತೆ ಕಾಲಿಗೆ ಬೀಳುತ್ತಾ..)
ಸೊಸೆ: "ಅತ್ತೆ ಆಶೀರ್ವಾದ ಮಾಡಿ ನಮಗೆ, ಒಂದು ಮುದ್ದಾದ ಹೆಣ್ಣು ಮಗುವಾಗಲಿ ಎಂದು.
ಅತ್ತೆ: ಮೊದಲು ನನ್ನ ಮಗಳಿಗೆ ಮದುವೆ ಆಗಲಿ, ಆಮೇಲೆ ನೀನು ಹೆತ್ತರಾಯಿತು..
ಸೊಸೆ: ನಿಮ್ಮಂತಹ ಸ್ವಾರ್ಥಿ ಅತ್ತೆ ಇರೋದಕ್ಕೆ ಇನ್ನೂ ಸೊಸೆಯಂದಿರು ಮೂಲೇಲಿ ಅಳ್ತಾ ಕೂತಿರೋದು.. 😏😏-
ಸೇರು ಒದ್ದು ಬರುವ ಸೊಸೆಗೆ
ಅತ್ತೆ ಕಾಟ..
ಸವ್ವಾ ಸೇರು ಎಂದು ಬೀಗುವ ಅತ್ತೆಗೆ
ಸೊಸೆ ಕಾಟ..
ಈ ಅತ್ತೆ ಸೊಸೆಯರ ಕಾಟದೊಳಗೆ
ಮಗನಿಗೆ ಪರಮ ಸಂಕಟ..!-
ಕರುಣೆ ಇಲ್ಲದ ಅತ್ತೆ ಗೆ ಸೊಸೆ ಆಗಬಾರದು
ಅಪ್ಪುಗೆ ನೀಡುವ ಅತ್ತ್ರೆ ಸೇವೆ ಮರಿಬಾರದು
ಮುದ್ದುಲಕ್ಶ್ಮಿ ಸೀರಿಯಲ್ ಅಂತಹ ಅತ್ತೆ ಸಿಕ್ಕಿದ್ರೆ ಕೈಮುಗಿಯಬೆಕು ದೇವರಿಗೆ ಸಮ ನೋಡ ಬೇಕು-
ಮುಂದುವರೆದ ಧಾರಾವಾಹಿ ಸಂಚಿಕೆ 37 ಓದಲು
kavanasanchi.blogspot.com ಎಂದು ಟೈಪ್ ಮಾಡಿ ಓದಿರಿ.-