ಧರೆಯಲಿ ನರ್ತಿಸುತ್ತಿರುವ ವರುಣ
ಕಾಣದೆ ಕಣ್ಮರೆಯಾಗಿರುವ ಅರುಣ
ಕಳೆ ತಂದಿದೆ ಹಸಿರ ನಗು
ನಿಸರ್ಗದಲ್ಲಿ ನಿಬ್ಬೆರಾಗಾಗುವ ಸೊಬಗು
ಹಸಿರೆಲೆಗಳ ಮೇಲೆ ಹನಿಗಳ ಚುಂಬನ
ನಾಚಿ ನಗೆ ಬಿರುತಿದೆ ಕಾನನ.
-
27 AUG 2022 AT 10:13
13 MAR 2020 AT 0:28
ಬೆಳೆಸೋಣು ಬಾರ ಅಂದದ ಕಾಡ
ಹಸಿಹಸಿರ ಸಾಲು ಮರಗಳ ನೆಟ್ಟು
ಒಗ್ಗಟ್ಟಾಗಿ ಪರಿಸರವ ಉಳಿಸಲು!
ಕಟ್ಟೊಣು ಬಾರ ಚೆಂದದ ಕನ್ನಡ ನಾಡ
ಕೋಪ ತಾಪಗಳ ಬದಿಗಿಟ್ಟು
ನಾನು ನನ್ನದೆನ್ನುವ ಅಹಃ ಮರೆತು!
ಕೂಡೊಣು ಬಾರ ಭಾರವ ತೊರೆದು
ಮನದಾಳದ ನೋವ ಬದಿಗಿಟ್ಟು
ಕೈ ಜೋಡಿಸಿ ನಿರ್ಮಲ ಹಸಿರ ಬೆಳೆಸಲು!!-
5 JUN 2018 AT 9:01
ಪರಿಸರ ದಿನಾಚರಣೆ .. ಆಚರಣೆಗೆ ಬರಲಿ
***************************
ಹಳೆ ಹುಡುಗೀರ ನೆನಪಿಗೆ ಒಂದೊಂದು ಗಿಡ ನೆಟ್ಟಿದ್ರು ..
ಇಷ್ಟೊತ್ತಿಗೆ ಒಂದು ಕಾಡು ಸೃಷ್ಟಿ ಮಾಡಬಹುದಿತ್ತು ..
ಉಸಿರಾಗ್ತೀವಿ ಅಂದೋರು ಸಿಗದೇ ಹೋದ್ರು..
ಉಸಿರಾಡೋಕ್ಕಾದ್ರೂ ಹಸಿರನ್ನು ಉಳಿಸೋಣ
👉ನಂದಿ✍️-