ಪ್ರತಿದಿನ ಸೂರ್ಯ ಉದಯಿಸಿದಂತೆ
ಒಂದಷ್ಟು ಅವಕಾಶಗಳು ಉದಯಿಸುತ್ತದೆ.
ಅದನ್ನು ಗುರುತಿಸಿ, ಸ್ವೀಕರಿಸಿ, ಸಾಧಿಸುವ
ಮನಸು ನಮಗಿರಬೇಕು.
👉🏻ನಂದಿ✍🏻-
ಜೇನುಹುಳ ಕಡಿತಕ್ಕೆ
ನಿನ್ನ ಜೇನೇ ಮದ್ದಂತೆ
ಮುತ್ತಿಕ್ಕಿದಾಗ ನೀನು
ಆ ಗಾಯಾನು ಮಾಯ
ಈ ಜೀವಾನು ಮಾಯ
👉🏻ನಂದಿ✍🏻
-
ದುಃಖಕ್ಕೆ ಸಾವಿರ ಕಾರಣ
ನಗುವಿಗೆ ಒಂದೇ ಕಾರಣ
ನೋವ ಮರೆಯುವುದು..
ನಗುವಾಗ ಮಗುವಾಗಿ
ನವಿರಾಗಿ ಹಗುರಾಗಿ..
👉🏻ನಂದಿ✍🏻
-
ಯಾರೇ ನಮ್ಮಕೈ ಬಿಟ್ರು,
ನಾವು ನಮ್ಮ ಕೈ ಬಿಡಬಾರದು.
ತಪ್ಪಾಗಿದ್ರು ತಿದ್ದಿಕೊಳ್ಳಲು,
ಸೋತಿದ್ರು ಗೆಲ್ಲಲು
ಮತ್ತೊಂದು ಅವಕಾಶ ಇದ್ದೇ ಇರುತ್ತೆ.
👉🏻ನಂದಿ✍🏻
-
ಗುರಿಯ ಅರಿವಿರದೇ ಪಯಣ ಆರಂಭಿಸಬೇಡಿ
ಎಂದು ಸಲಹೆ ಕೊಡುವವರು ಅನೇಕರಿದ್ದಾರೆ.
ಅವರಿಗೆ ತಿಳಿದಿಲ್ಲ, ಕೆಲವೊಮ್ಮೆ ದಾರಿಯೇ ಗುರುವಾಗುತ್ತದೆ.
👉🏻ನಂದಿ✍🏻-
ಪ್ರಾರ್ಥನೆ ಫಲಿಸುತ್ತದೋ ಇಲ್ಲವೋ ಗೊತ್ತಿಲ್ಲ.
ಆದರೆ ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಹಾರೈಕೆಗಳು ತಲುಪುತ್ತದೋ ಇಲ್ಲವೋ ಗೊತ್ತಿಲ್ಲ.
ಆದರೆ ನಮ್ಮ ನೆಮ್ಮದಿಯನ್ನು ಹೆಚ್ಚಿಸುತ್ತದೆ.
👉🏻ನಂದಿ✍🏻-
ಇದ್ದಾಗ ಮೆರೆಯುವವರ ಮುಂದೆ
ಇದ್ದದ್ದನ್ನೆಲ್ಲ ತೊರೆದ ಬುದ್ಧ ಶ್ರೇಷ್ಠ
ಅವನು ತನ್ನೊಡನೆ ಏನೊಂದನ್ನು ಹೊತ್ತೊಯ್ಯಲಿಲ್ಲ
ಬದಲಾಗಿ ಶಾಂತಿ, ಪ್ರೀತಿ, ಸ್ಪೂರ್ತಿಯನ್ನು ಬಿಟ್ಟು ಹೋದ..
ಬುದ್ಧ ಪೂರ್ಣಮಿಯ ಶುಭಾಶಯಗಳು..
👉🏻ನಂದಿ✍🏻-
ನೀವು ಸೇಫಾಗಿದ್ರೆ, ನಿಮ್ಮವರು ಸೇಫಾಗಿರ್ತಾರೆ..
ಹಾಗಾದ್ರೆ ಇದು ತುಂಬಾ ಸುಲಭ ಅಲ್ವ..
ಇಲ್ಲಿ ದೊಡ್ಡ ಟಾಸ್ಕ್ ಇಲ್ಲ, ಬರೀ ಮಾಸ್ಕ್ ಹಾಕಿದ್ರೆ ಸಾಕು
ಮಾನಿಟೈಸ್ ಮಾಡಬೇಕಿಲ್ಲ,
ಸ್ಯಾನಿಟೈಸ್ ಮಾಡ್ಕೊಂಡ್ರೆ ಸಾಕು..
ದೂರ ಇದ್ಕೊಂಡೆ ಅವರು ಮನಸಿಗೆಷ್ಟು ಹತ್ರ ಅಂತ ಪ್ರೂವ್ ಮಾಡ್ಬೇಕು..
ಇಷ್ಟಾದ್ರೆ ನಾವು ಸೇಫ್, ಅವರು ಸೇಫ್..
👉🏻ನಂದಿ✍🏻
-
ಯಾರೋ ನೆನಪಾದಾಗ ಕರೆ ಮಾಡಿ ಮಾತಾಡಿ, ಏನೋ ಹೇಳಬೇಕು ಅನ್ನಿಸಿದಾಗ ನೇರವಾಗಿ
ಅವರಿಗೆ ಹೇಳಿ ಬಿಡಿ,
ಭಾವನೆಗಳನ್ನು ಮುಚ್ಚಿಟ್ಟುಕೊಂಡಷ್ಟು
ಯಾತನೆ ಜಾಸ್ತಿಯಾಗತ್ತೆ.
👉🏻ನಂದಿ✍🏻-
ಗೆಳೆಯನಂತಿರುವ ಸಹೋದರರಿಗೆ
ಸಹೋದರನಂತಿರುವ ಗೆಳೆಯರಿಗೆ
ನನ್ನಿಂದ, ನನ್ನ ಹೃದಯದಿಂದ
❤❤❤❤❤❤❤
Happy brother's day..
👉🏻ನಂದಿ✍🏻-