Some legends
never die they
always live in our hearts-
ಸಗ್ಗನಾಡಿದು ಕರುನಾಡು
ಸಗ್ಗನಾಡಲ್ಲಿ ಜನಿಸಲು ನಾ ಮಾಡಿರುವೇ ಪುಣ್ಯ.
ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಕಂಗಳೇ ಧನ್ಯ.
-
'ಪುನೀತ'ರ ನೆನಪು
ಬೇಡವೆಂದರು ಕಾಡುತ್ತಿವೆ ನೆನಪುಗಳು ಬಹಳ.
ಮರಳಿ ಬಂದು ಈಡೇರಿಸಬಾರದೇ ಹೃದಯದ ಹಂಬಲ!?-
ರೀ ಒಂದು ವಿಷ್ಯ ಗೊತ್ತಾ....
ನಮ್ಮ ಜೀವನದಲ್ಲಿ ತುಂಬಾ ಜನ ಕಾಯ್ತೀರ್ತ್ತಾರೆ ಅದಷ್ಟು ಬೇಗ ನಮ್ಮ ಶ್ರದ್ಧಾಂಜಲಿ ಪೋಸ್ಟರ್ ಹಾಕೋಕೆ..😄
ಆದ್ರೆ ಹಾಕ್ಕೊಂಡ್ರೆ ಹಾಕೋಳ್ಳಿ ಹಾಕೋ ಟೈಂ ಗೆ ಕಣ್ಣೆಲ್ಲಾ ಒದ್ದೆಯಾಗಬೇಕು ಮನಸ್ಸೇಲ್ಲಾ ಮುದುಡಿ ಮುದ್ದೆ ಆಗಬೇಕು...🥺
ಆಂಗ್ ಇರಬೇಕು ಅವ್ರ್ ಮುಂದ್ ನಮ್ಮ ಜೀವ್ನ..🤩
ಗುಲಾಬ್ ಜಾಮ್...✍️-
ಅಭಿಮಾನಿಗಳ ದೇವರೆಂದರು,
ಅಭಿಮಾನಿಗಳ ಮನೆ-ಮನದ ದೇವರಾದರು...
ಈ ಭಾಗ್ಯ ನಮ್ಮ ದೊಡ್ಮನೆಗೆ ಮಾತ್ರ ಸ್ವಂತ,
ಅಪ್ಪು ಅವರು ಈ ನಾಡು ಈ ಯುಗದಲ್ಲಿ ಕಂಡ ಕನ್ನಡದ ಸಂತ-
ದೇವರಿಗೊಂದು ಪದವಿ..!!
ನಗುವ ಓಡೆಯನ ಮಗುವ ಹೃದಯಕೆ,
ನಾಡಿನ ಹೆಮ್ಮೆಯ ಕೀರ್ತಿ ಕಳಶಕೆ,
ರಾಜವಂಶದ ಹಿರಿಮೆಯ ಅಂಶಕೆ,
ದಾನ ಧರ್ಮಗಳ ಅರ್ಥ ತಿಳಿಸಿದ ಅಂತರಂಗಕೆ,
ಮಾಡಲಿಲ್ಲ ನೀವು ಯಾವುದನ್ನು ಪ್ರಾತ್ಯಕ್ಷಿಕೆ,
ನಿಮ್ಮ ಕೆಲಸಗಳು, ನಿಮ್ಮ ನಗು ಕಂಡ ಕ್ಷಣಗಳು
ತೋರಿಹುದು ನಿಮ್ಮ ಜೀವಂತಿಕೆ,
ಅರ್ಪಿಸುವೆವು ಜಗವೆ ಆರಾಧಿಸಿದ ಅಭಿಮಾನಿಗಳ
ದೇವರಿಗೊಂದು ಪದವಿಯ ಕಾಣಿಕೆ..!!
-