ಗೆಳತಿ ಬಂದು ನೋಡು ಒಂದು ಸರತಿ
ನನ್ನೀ ಎದೆಯ ಗೂಡಿನೊಳಗೆ,
ಇಡಿಯ ಪ್ರೀತಿ ಕೊಡುವೆ ಪೂರ್ತಿ
ಈ ಜನುಮ ಮುಗಿವವರೆಗೆ.-
ಅಭಿಮಾನಿಗಳ ದೇವರೆಂದರು,
ಅಭಿಮಾನಿಗಳ ಮನೆ-ಮನದ ದೇವರಾದರು...
ಈ ಭಾಗ್ಯ ನಮ್ಮ ದೊಡ್ಮನೆಗೆ ಮಾತ್ರ ಸ್ವಂತ,
ಅಪ್ಪು ಅವರು ಈ ನಾಡು ಈ ಯುಗದಲ್ಲಿ ಕಂಡ ಕನ್ನಡದ ಸಂತ-
ನಿನ್ನ ಮೊದಲ ಭೇಟಿ, ನಿನ್ನ ಮೊದಲ ಮಾತು, ನಿನಗೆ ಕೊಟ್ಟ ಮೊದಲ ಉಡುಗೊರೆ, ನಿನ್ನ ಜನುಮದಿನದಂದು ತಿಂದು ಬಿಟ್ಟ ಆ ಸಿಹಿ ತಿನಿಸು, ನನಗಾಗಿ ನೀ ಗುನುಗಿದ ಆ ಚೆಂದದ ಹಾಡು, ನಡು ರಾತ್ರಿಯ ಆ ನಿನ್ನ ಪಿಸುಮಾತು, ನನ್ನ ಹೃದಯದ ಮೇಲೆ ನೀ ಬಿಟ್ಟು ಹೋದ ಪ್ರೀತಿಯ ಹೆಜ್ಜೆ ಗುರುತುಗಳೆಲ್ಲವೂ ಸೇರಿ ಈ ಬದುಕು ನಿನ್ನ ನೆನಪಿನ ದೊಡ್ಡ ಗೋದಾಮಾಗಿದೆ
-
ಮುಗಿದು ಹೋದ ಹಳೆಯ ಅಧ್ಯಾಯಗಳೆಲ್ಲ ಒಮ್ಮೆಲ್ಲೇ ಮೈ ಕೊಡವಿಕೊಂಡು ಎದ್ದು ಕುಂತಿವೆ ಈ ಸರಿ ಹೊತ್ತಿನಲ್ಲಿ.
-
ನುಡಿ ನಮನ
"ರಾಜರತ್ನ"ನಿಲ್ಲದೇ ಅಭಿಮಾನಿಗಳ ಹೃದಯ ಸಿಂಹಾಸನ ಅನಾಥವಾಗಿದೆ,
"ಯುವರತ್ನ"ನಿಲ್ಲದೇ ಅಭಿಮಾನಿಗಳ ಅಭಿಮಾನ ಅನಾಥವಾಗಿದೆ,
ಆದರೇನಂತೆ ಅಭಿಮಾನಿಗಳ ಹೃದಯದಂಗಳದಿ ಅವರೆಂದೂ ಅಮರ, ಅಮರ,
"ಅಪ್ಪು ಅಜರಾಮರ"🙏
-
ಈ ಹಬ್ಬವು ಸಾಲು ಸಾಲಾಗಿ ಸಂತೋಷವನ್ನು ನಿಮ್ಮ ಮನೆ ಬಾಗಿಲಿಗೆ ತರಲಿ ಎಂದು ಹಾರೈಸುತ್ತ
ನಿಮಗೂ ನಿಮ್ಮ ಕುಟುಂಬಕ್ಕೂ
ಸಂಕ್ರಾಂತಿ ಹಬ್ಬದ ಶುಭಾಶಯಗಳು🤗🤗-
ಮರೆತು ಬಿಡು ಕ್ಷಣ ಕಾಲ ಎಲ್ಲವನ್ನು
ನಂಬಿಕೆ ಇಟ್ಟು ಕೈ ಇರಿಸು ಈ ನನ್ನ ಕೈಯಲ್ಲಿ,
ಪ್ರೀತಿಯಿಂದ ಕಟ್ಟೋಣ ಇಬ್ಬರು
ಒಂದು "ಚುಂಬಕ" ಭವಿಷ್ಯವನ್ನು..-